ಬಿದಗಿಯಲ್ಲಿ ಕಾರ್ಯಸಿದ್ಧಿಯು ತದಿಗೆ (3 )ಯಲ್ಲಿ ಕ್ಷೇಮಕರವು ಪಂಚಮಿ( 5)ಯಲ್ಲಿ ಸುಖಸೌಖ್ಯವು, ಸಪ್ತಮಿ (7) ಯಲ್ಲಿ ಧನಲಾಭ ವೃದ್ಧಿಯು, ದಶಮಿ (10) ಯಲ್ಲಿ ದ ಧನಾಗಮ ಲಾಭ, ಏಕಾದಶಿ (11) ಯಲ್ಲಿ ಸುಖಸೌಖ್ಯ,ದ್ವಾದಶಿ (12) ಯಲ್ಲಿ ಧನ ಪ್ರಾಪ್ತಿ, ತ್ರಯೋದಶಿ (13) ಯಲ್ಲಿ ಸಕಲಾರ್ಥ ಸಿದ್ಧಿಯು, ಹುಣ್ಣಿಮೆಯ ದಿನ ಶುಭಕರವು. ಹೀಗೆ ಮೇಲೆ ಹೇಳಿದ ತಿಥಿಗಳು ಶುಭಫಲವನ್ನು ಕೊಡುತ್ತವೆ ಉಳಿದ ಬಾಕಿ ತಿಥಿಗಳು ಅಶುಭ ಫಲವನ್ನು ಉಂಟುಮಾಡುತ್ತವೆ.
ತಿಥಿ ದೋಷ ಶೂಲವು :
ತಿಥಿ 1- 9 (ಪ್ರತಿಪದ ನವಮಿ)ಯರಲ್ಲಿ ಪೂರ್ವಕ್ಕೆ ಪ್ರಮಾಣದ ಮಾಡಬಾರದು 2-10 (ದ್ವಿತಿಯ, ದಶಮಿ)ಯಲ್ಲಿ ಉತ್ತರ ದಿಕ್ಕಿಗೆ ಪಯಣಿಸಬಾರದು.ತಿಥಿ 3-11ರಲ್ಲಿ ಆಗ್ನೇಯ ದಿಕ್ಕಿಗೂ, 4- 12 ರಲ್ಲಿ ನೈರುತ್ಯ ದಿಕ್ಕಿಗೂ 5-13 ರಲ್ಲಿ ದಕ್ಷಿಣಕ್ಕೂ 6-14 ರಲ್ಲಿ ಪಶ್ಚಿಮಕ್ಕೂ 7 – 5 ರಲ್ಲಿ ವಾಯವ್ಯ ದಿಕ್ಕಿಗೂ, 8 -30 ಅಷ್ಟಮಿ ಅಮಾವಾಸ್ಯೆ ಯಲ್ಲಿ ಈಶಾನ್ಯ ದಿಕ್ಕಿಗೂ ಪಯಾಣ ಮಾಡಬಾರದು.ಈ ಮೇಲೆ ಹೇಳಿದವುಗಳು ತಿಥಿ ಶೂಲಗಳಾಗಿರುವುದರಿಂದ ಆಯಾ ದಿಕ್ಕುಗಳ ಪ್ರಯಣದಲ್ಲಿ ಆಯಾ ತಿಥಿಗಳನ್ನು ಬಿಡತಕ್ಕದ್ದು.
ಪಯಾಣಕ್ಕೆ ಶುಭ ನಕ್ಷತ್ರಗಳು :
ಶ್ಲೋಕ :
ಮೃಗಾಶ್ಚಿನೀಪುಷ್ಯ ಪುನರ್ವಸೂಜಾ|
ಹಸ್ತಾನುರಾಧಾ ಶ್ರವಣಂಚ ಮೂಲಾ||
ಧನಿಷ್ಟ ರೇವತ್ಯಗತೇ ಪ್ರಯಾಣಂ ಫಲಂಲಭೇತ ವಿವರ್ತನಂಚ||
ಅರ್ಥ: ಅಶ್ವಿನಿ, ಮೃಗಶಿರ, ಪುಷ್ಯ, ಪುನರ್ವಸು, ಹಸ್ತ, ಅನುರಾಧ ಶ್ರಾವಣ, ಮೂಲ ಧನಿಷ್ಠ,ರೇವತಿ ಈ 10 ನಕ್ಷತ್ರಗಳು ಪಯಾಣ ಮಾಡಿದಲ್ಲಿ ಪ್ರಯಾಣವು ಸುಖಕರವೂ ಕೈಗೊಂಡ ಕಾರ್ಯವು ಶೀಘ್ರವಾಗಿ ನೆರವೇರುವುದಲ್ಲದೆ, ಪ್ರಯಾಣ ಕೈಗೊಂಡವರು ಸುಖವಾಗಿ ಹಿಂದಿರುಗಿ ಬರುವರು *.
ಪ್ರಯಾಣಕ್ಕೆ ನಿಷೇಧ ನಕ್ಷತ್ರಗಳು :
ಶ್ಲೋಕ :
ತ್ರೀಣಿಪೂರ್ವ ಮಘಾ ಜ್ಯೇಷ್ಠಾ ಭರಣೀ ಜನ್ಮ ಕೃತಿಕಾ|
ಸ್ವಾತಿಸಾರ್ಪ ವಿಶಾಖಾರ್ದ್ರಾ ಚಿತ್ತೇ ಗಮನ ವರ್ಜಿತಾ ||
*ಅರ್ಥ : ಹುಬ್ಬ,ಪೂರ್ವಷಾಢ, ಪೂರ್ವಭಾದ್ರ, ಮಘ,ಜೇಷ್ಠ,ಭರಣಿ,ಜನ್ಮನಕ್ಷತ್ರ, ಕೃತಿಕಾ,ಸ್ವಾತಿ, ಆಶ್ಲೇಷ, ವಿಶಾಖಾ,ಆರಿದ್ರಾ, ಚಿತ್ತಾ, ಈ 13 ನಕ್ಷತ್ರಗಳು ಪಯಣಕ್ಕೆ ಅತಿ ದೋಷವಾಗಿರುವುದರಿಂದ ಪ್ರಯಾಣ ಮಾಡಬಾರದು ಪ್ರಯಾಣ ಮಾಡಿದಲ್ಲಿ ಕೇಡುಫಲಗಳುಂಟಾಗುವುವು. ಉಳಿದ ನಕ್ಷತ್ರಗಳಾದ ರೋಹಿಣಿ ಉತ್ತರ,ಉತ್ತರಾಷಾಢ ಉತ್ತರಾ ಭಾದ್ರ,ಶತಾತಾರ ಈ ನಕ್ಷತ್ರಗಳು ಪ್ರಯಣಕ್ಕೆ ಸಾಧಾರಣ ಫಲವನ್ನುಂಟು ಮಾಡುತ್ತವೆ.
ನಕ್ಷತ್ರಗಳ ಶೂಲವು :
ಪಯಣ ಮಾಡುವಾಗ ಜೇಷ್ಠ ಧನಿಷ್ಠ ಈ ಎರಡು ನಕ್ಷತ್ರಗಳನ್ನು ಪಶ್ಚಿಮಕ್ಕೆ ಪಯಣ ಮಾಡುವಾಗ ಪುಷ್ಯ ರೋಹಿಣಿ ನಕ್ಷತ್ರಗಳನ್ನು ದಕ್ಷಿಣ ದಿಕ್ಕಿನತ್ತ ಪಯಣ ಮಾಡುವಾಗ ಶ್ರಾವಣ ಅಶ್ವಿನಿ ನಕ್ಷತ್ರಗಳನ್ನು ಉತ್ತರ ದಿಕ್ಕಿಗೆ ಪ್ರಯಾಣ ಮಾಡುವ ಭಾಗ್ಯ ಹಸ್ತ ಒಬ್ಬ ಈ ನಕ್ಷತ್ರ ಪ್ರಯಾಣ ಮಾಡಬಾರದು.