ಮನೆ ರಾಜಕೀಯ ಕಿರುಕುಳಕ್ಕೆ ಒಂದು ಮಿತಿ ಇರಬೇಕು: ಡಿ.ಕೆ.ಶಿವಕುಮಾರ್ ಅಸಮಾಧಾನ

ಕಿರುಕುಳಕ್ಕೆ ಒಂದು ಮಿತಿ ಇರಬೇಕು: ಡಿ.ಕೆ.ಶಿವಕುಮಾರ್ ಅಸಮಾಧಾನ

0

ಬೆಂಗಳೂರು(Bengaluru): ಈ ದೇಶದಲ್ಲಿ ಕಾನೂನು ಇದೆ. ಆ ಕಾನೂನಿನ ಮೇಲೆ ನನಗೆ ನಂಬಿಕೆ ಇದೆ. ಅದನ್ನು ದುರುಪಯೋಗ ಮಾಡಿಕೊಂಡು ನನ್ನ‌ ಮೇಲೆ ಎಷ್ಟು ಕೇಸ್ ಹಾಕಿಸಿದ್ದಾರೆ ಎಂದು ನಾನೊಂದು ಪಟ್ಟಿ ಮಾಡಿಸಿದ್ದೇನೆ‌. ಎಲ್ಲರಿಗೂ ಸೇರಿ ಕಿರುಕುಳ ಕೊಡುತ್ತಿದ್ದಾರೆ. ಕಿರುಕುಳಕ್ಕೆ ಒಂದು ಲಿಮಿಟೇಶನ್ ಇರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.

ಸದಾಶಿವನಗರ ತಮ್ಮ ನಿವಾಸದಲ್ಲಿ ವಿಜಯ್ ಮುಳುಗುಂದ್​ಗೆ ಸಿಬಿಐ ನೋಟಿಸ್‌ ವಿಚಾರವಾಗಿ ಪ್ರತಿಕ್ರಿಯಿಸಿ, ವಿಜಯ್ ಮುಳುಗುಂದ್ ನಮ್ಮ ಪಾರ್ಟಿಯ ಜನರಲ್ ಸೆಕ್ರೆಟರಿ, ನನ್ನ ಆಪ್ತ. ಅವನೊಬ್ಬನ ಮೇಲೆ ಕೊಟ್ಟಿಲ್ಲ. 30, 40 ಜನರಿಗೆ ನೋಟಿಸ್ ಕೊಟ್ಟಿದ್ದಾರೆ. ಯಾರ್ಯಾರು ನನ್ನ ಹತ್ರ ವ್ಯವಹಾರ ಮಾಡಿದ್ದಾರೆ. ನನ್ನ ಜೊತೆ ಯಾರಿಗೆಲ್ಲ ಬ್ಯುಸಿನೆಸ್ ಇದೆ. ಅವರೆಲ್ಲರಿಗೂ ನೋಟಿಸ್ ಕೊಟ್ಟಿದ್ದಾರೆ. ನಾವು ಇದನ್ನು ಮಾತನಾಡಬಾರದು. ನಾವು ಎಲ್ಲದಕ್ಕೂ ರೆಡಿ ಇದ್ದೇವೆ. ಕಾನೂನಾತ್ಮಕವಾಗಿ ಎದುರಿಸುತ್ತೇವೆ   ಎಂದರು.

ಈಗಿರುವ ಮಂತ್ರಿಗಳು ಶಾಸಕರಾಗಿದ್ದಾಗ ಎಷ್ಟಿತ್ತು ಆಸ್ತಿ. ಈಗ ಎಷ್ಟು ಆಗಿದೆ ಬಿಜೆಪಿಯವರದ್ದು ಆಸ್ತಿ? ನನಗೆ ಆಂತರಿಕ ಮಾಹಿತಿ ಇದೆ. ನಮ್ಮ ಕಿವಿಗೂ ಹೇಳುವವರು ಇದ್ದಾರೆ‌. ಈ ದೇಶದ ಕಾನೂನು ಬಗ್ಗೆ ನನಗೆ ಗೌರವವಿದೆ. ನನ್ನ ಪ್ರಾಮಾಣಿಕತೆಗೆ ಬೆಲೆ ಸಿಗುವ ನಂಬಿಕೆ ಇದೆ. ನನಗೆ, ನಮ್ಮ ಪಕ್ಷಕ್ಕೆ ಬೆಲೆ ಸಿಗುತ್ತೆ ಅನ್ನುವ ನಂಬಿಕೆ ಇದೆ ‌ ಎಂದರು.

ಕಾಂಟ್ರ್ಯಾಕ್ಟರ್ ಅಸೋಸಿಯೇಷನ್ ಅಧ್ಯಕ್ಷರು ಕಾಂಗ್ರೆಸ್ ಏಜೆಂಟ್ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಇವತ್ತಿನ ತನಕ ನನ್ನನ್ನಾಗಲಿ ಸಿದ್ದರಾಮಯ್ಯನವರನ್ನಾಗಲಿ ಭೇಟಿ ಆಗಿರಲಿಲ್ಲ. ಕಾಂಗ್ರೆಸ್ ಏಜೆಂಟ್ ಆಗಿದ್ರೆ ಯಾಕೆ ಸಿಎಂ ಭೇಟಿ ಮಾಡಿದ್ದರು? ಇವರ ಅನುಕೂಲಕ್ಕೋಸ್ಕರ ಆರೋಪ ಮಾಡುತ್ತಾರೆ. ಬಿಜೆಪಿಯವರು ಏಳು ಎಂಟು ಕಡೆ ಜನೋತ್ಸವ ಆಚರಣೆ ಮಾಡ್ತಾರಂತೆ ಮಾಡಿಕೊಳ್ಳಲಿ. ವಿರೋಧ ಪಕ್ಷವಾಗಿ ನಾವು ಇವರ ಭ್ರಷ್ಟೋತ್ಸವ ಆಚರಣೆ ಮಾಡಬೇಕಲ್ಲ. ವಿರೋಧ ಪಕ್ಷವಾಗಿ ನಮ್ಮ ಮೇಲೂ ಜವಾಬ್ದಾರಿ ಇದೆಯಲ್ಲ ಎಂದು ತಿಳಿಸಿದರು.

ಹಿಂದಿನ ಲೇಖನಸಿದ್ದಗಂಗಾ ಮಠಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿದ ಕೇಂದ್ರ ಸರ್ಕಾರ
ಮುಂದಿನ ಲೇಖನಅಕ್ರಮ ಆಸ್ತಿ ಗಳಿಕೆ ಆರೋಪ: ಡಿಕೆಶಿ ಆಪ್ತ ವಿಜಯ್ ಕುಮಾರ್ ಸಿಬಿಐ ನೋಟಿಸ್