ಬೆಂಗಳೂರು(Bengaluru): ರಾಘವೇಂದ್ರ ಡಿ. ಚನ್ನಣ್ಣನವರ್ ವಿರುದ್ಧ ಪತ್ನಿಗೆ ಕಿರುಕುಳ ಆರೋಪ ಪ್ರಕರಣ ಕೇಳಿಬಂದಿದ್ದು, ನಗರದ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ರಾಘವೇಂದ್ರ 2015ರಲ್ಲಿ ರೋಜಾ ಎಂಬಾಕೆಯನ್ನು ಮದುವೆಯಾಗಿದ್ದರು.
ನನ್ನನ್ನು ಮದುವೆಯಾಗುವುದಕ್ಕೂ ಮುನ್ನ ಮತ್ತೊಬ್ಬ ಮಹಿಳೆಯನ್ನು ರಾಘವೇಂದ್ರ ಮದುವೆಯಾಗಿದ್ದಾರೆ. ಈ ವಿಚಾರ ಬಚ್ಚಿಟ್ಟು ನನ್ನನ್ನು ಮದುವೆಯಾದರು ರೋಜಾ ಆರೋಪಿಸಿದ್ದಾರೆ.
ಇದೇ ವೇಳೆ, ಹೊಂದಿಕೊಂಡು ಬಾಳುವಂತೆ ತಮಗೆ ಒತ್ತಾಯಿಸುತ್ತಿರುವುದಾಗಿಯೂ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಮದುವೆಯಾದ ಒಂದು ವರ್ಷದಲ್ಲೇ ನನ್ನನ್ನು ಬಿಟ್ಟು ಆ ಮಹಿಳೆ ಜೊತೆ ರಾಘವೇಂದ್ರ ಸಂಸಾರ ಶುರು ಮಾಡಿದ್ದಾರೆ. ನನ್ನ ತಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿದ್ದಾರೆ, ನನಗೆ ನ್ಯಾಯ ಬೇಕು’ ಎಂದು ದೂರು ನೀಡಿದ್ದಾರೆ.