ಮನೆ ರಾಜಕೀಯ ಕಾಂಗ್ರೆಸ್ ತೊರೆದ ಯುವ ನಾಯಕ ಹಾರ್ದಿಕ್ ಪಟೇಲ್

ಕಾಂಗ್ರೆಸ್ ತೊರೆದ ಯುವ ನಾಯಕ ಹಾರ್ದಿಕ್ ಪಟೇಲ್

0

ಗುಜರಾತ್​(Gujarath): ಗುಜರಾತ್ ನ ಪ್ರಭಾವಿ ಸಮುದಾಯದ ಯುವ ಕಾಂಗ್ರೆಸ್ ನಾಯಕ ಹಾರ್ದಿಕ ಪಟೇಲ್ ಕಾಂಗ್ರೆಸ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ ಹಲವು ರಾಜ್ಯ ಘಟಕಗಳಲ್ಲಿ ಹಿರಿಕಿರಿಯರ ನಡುವೆ ಹೊಂದಾಣಿಕೆ ಕೊರತೆ ಕಂಡುಬರುತ್ತಿದೆ. ಹಿರಿಯರ ವರ್ತನೆಯಿಂದ ಕಿರಿಯರು ಮತ್ತು ಅನೇಕ ಸಂದರ್ಭಗಳಲ್ಲಿ ‘ಕೈ’ ಹಿಡಿದಿದ್ದ ಯುವ ನಾಯಕರು ಅತೃಪ್ತರಾಗಿದ್ಧಾರೆ. ಇದೇ ಹಿನ್ನೆಲೆಯಲ್ಲಿ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಪಕ್ಷ ತೊರೆದಿದ್ದಾರೆ.

28 ವರ್ಷದ ಹಾರ್ದಿಕ್ 2015ರಲ್ಲಿ ಗುಜರಾತ್​ನಲ್ಲಿ ಪಟೇಲ್ ಸಮುದಾಯದ ಮೀಸಲಾತಿ ಚಳವಳಿ ಮುನ್ನಡೆಸುವ ಮೂಲಕ ಮುನ್ನೆಲೆಗೆ ಬಂದಿದ್ದರು. ನಂತರ 2019ರಲ್ಲಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು.

ಹಿಂದಿನ ಲೇಖನಸಿಬಿಐ ನಿಂದ ಕಾರ್ತಿ ಚಿದಂಬರಂ ಆಪ್ತ ಎಸ್.ಭಾಸ್ಕರ್ ರಾಮನ್ ಬಂಧನ
ಮುಂದಿನ ಲೇಖನಮತಾಂತರ ನಿಷೇಧ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ