Saval TV on YouTube
ಮೈಸೂರು(Mysuru): ‘ಕ್ರಾಂತಿ’ ಚಿತ್ರದ ಹಾಡು ಬಿಡುಗಡೆ ಸಮಯದಲ್ಲಿ ನಟ ದರ್ಶನ್ ಮೇಲೆ ಚಪ್ಪಲಿ ಎಸೆದಿರುವುದನ್ನು ಖಂಡಿಸಿ ದರ್ಶನ್ ತೂಗುದೀಪ ಅಭಿಮಾನಿ ಹರೀಶ್ ನಾಯ್ಡು ನಗರದ ಎಂಜಿ ರಸ್ತೆಯಲ್ಲಿರುವ ತೂಗುದೀಪ ಶ್ರೀನಿವಾಸ್ ವೃತ್ತದ ಬಳಿ (ಲಲಿತ ಮಹಲ್ ಗೇಟ್) ಗುರುವಾರ ದರ್ಶನ್ ಭಾವಚಿತ್ರ ಹಿಡಿದು ಏಕಾಂಗಿ ಪ್ರತಿಭಟನೆ ನಡೆಸಿದರು.
ದರ್ಶನ್ ಪರ ಘೋಷಣೆ ಕೂಗಿದರು. ಆರೋಪಿಯನ್ನು ಬಂಧಿಸಿ, ಗಡಿಪಾರು ಮಾಡಬೇಕು. ನೆಚ್ಚಿನ ನಟನಿಗೆ ಅವಮಾನ ಮಾಡಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದು ಕೇವಲ ಒಬ್ಬ ನಟನಿಗೆ ಮಾಡಿದ ಅವಮಾನವಲ್ಲ. ಇಡೀ ಕನ್ನಡ ಭಾಷೆಗೆ ಆದ ಅವಮಾನ. ದರ್ಶನ್ ಮೇಲೆ ಚಪ್ಪಲಿ ಎಸೆದಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ನೋವುಂಟು ಮಾಡಿದೆ. ಆದ್ದರಿಂದ ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.