ಭಾರತೀಯ ಜ್ಯೋತಿರ್ವಿಜ್ಞಾನಿಗಳು ರಾಹು ಮತ್ತು ಕೇತುಗಳೆಂದು ಎರಡು ಗ್ರಹಗಳನ್ನು ಹೆಸರಿಸಿದ್ದಾರೆ. ಆದರೆ ಪಾಶ್ಚತ್ಯ ವಿಜ್ಞಾನಿಗಳು ರಾಹು ಕೇತುಗಳನ್ನು ಒಪ್ಪುವುದಿಲ್ಲ. 9 ಗ್ರಹಗಳನ್ನು ಅವರು ಹೇಳಿದ್ದಾರೆ. ಅವುಗಳಲ್ಲಿ ಅವರು ಹರ್ಷಲ್ ಮತ್ತು ಯುರೇನಸ್ (ಪ್ರಜಾಪತಿ) ಎಂಬ ಗ್ರಹಗಳನ್ನ ಹೇಳಿದ್ದಾರೆ. ಅದೇ ರೀತಿ ಹರ್ಷಲ್ ಗ್ರಹಕ್ಕೆ 4 ಅಂಕಿಯನ್ನು ಮತ್ತು ನೆಚ್ಚುನ್ (ವರುಣ) ಗ್ರಹಕ್ಕೆ 7 ಅಂಕಿಯನ್ನು ನೀಡಿದ್ದಾರೆ.
ಬ್ರಿಟನ್ ದೇಶದ ಇಗರ್ಜಿಯಲ್ಲಿ ವಾಯಲಿನ್ ವಾದಕನಾದ ಜರ್ಮನಿಯ ವಿಲಿಯಂ ಹರ್ಷಲ್ ಎಂಬುವನು 13 ಮಾರ್ಚ್ 1781 ರಲ್ಲಿ ಆಕಾಶ ವೀಕ್ಷಣೆಯನ್ನು ಮಾಡುತ್ತಲೇ ಹೊಸ ಗ್ರಹವನ್ನು ಕಂಡುಹಿಡಿದನು. ಬ್ರಿಟಿಷರ ಸಹಕಾರವು ಅವನಿಗೆ ಸರ್ ಪದವಿಯಿತ್ತು ಗೌರವಿಸಿತು. ಹೆಸರಿಲ್ಲದ ಈ ಗ್ರಹಕ್ಕೆ ವಿಲಿಯಂ ಹರ್ಷಲ್ ಹೆಸರನ್ನು ಇಡಲಾಯಿತು.
ವಿಲಿಯಂ ಹರ್ಷಲ್ ನ್ನು ಈ ಗ್ರಹವು ಬಾಲ ಸಹಿತವಾದ ನಕ್ಷತ್ರವೆಂದು ತಿಳಿದಿದ್ದನು. ಒಂದು ವರ್ಷದವರೆಗೆ ಬಿಡದ ಸಂಶೋಧನೆ ನಡೆಸಿ ದೂರದರ್ಶಕದಿಂದ ನೋಡಿ ಕೊನೆಗೆ ಅದು ಗ್ರಹವೆಂದು ತಿಳಿಯಪಡಿಸಿದನು. ಈ ದಿಸೆಯಲ್ಲಿ ಗೆಲಿಲಿಯೋ ಕಂಡುಹಿಡಿದ ದೂರದರ್ಶಕವು ಅತ್ಯಂತ ಉಪಕಾರ ಮಾಡಿತ್ತು.
ಯುನಾನಿ ದೇಶದವರು ಈ ಗ್ರಹಕ್ಕೆ ಯುರೋನಸ್ ಎಂದು ಕರೆದರು. ಭಾರತೀಯರು ಇದನ್ನೇ ಪ್ರಜಾಪತಿ ಎಂದರು. ಭಾರತೀಯರು ಜ್ಯೋತಿಷ್ಯಶಾಸ್ತ್ರ ಪಾರಂಗತರಾದ ಡಾ. ಜನಾರ್ಧನ್ ವೇದಕರರವರು ಪ್ರಜಾಪತಿ ಎಂಬ ಹೆಸರು ಹೊಂದಿಕೊಳ್ಳುವುದು ಎಂದರು.
ಹರ್ಷಲ್ ಗ್ರಹದ ಸಂಶೋಧನೆ ಆದ ದಿನದ ಅಂಕೆಯನ್ನು ಮೂಲಾಂಕವೆಂದು ತಿಳಿಸಿದರು. 13 ಮೂಲಾಂಕವಾದರೆ 4 ಪ್ರತಿನಿಧಿ ಅಂಕವಾಯಿತು. ಈ ಗ್ರಹದ ದೈನಿಕ ಮತ್ತು ವಾರ್ಷಿಕ ಚಲನೆಗಳನ್ನ ಬಹಳ ಆಕರ್ಷವಾಗಿದೆ. ಶನಿ ಗ್ರಹದ ನಂತರದ ಆಕಾಶದಲ್ಲಿ ಈ ಗ್ರಹದ ಸ್ಥಿತಿ ಇರುವುದು ಸೂರ್ಯ ಮಂಡಲದಿಂದ 178 ಕೋಟಿ, 23 ಲಕ್ಷ ಮೈಲುಗಳಷ್ಟು ದೂರವಿರುವುದು. ಇದು ನಿಧಾನವಾಗಿ ಪೂರ್ವದಿಂದ ಪಶ್ಚಿಮದ ಕಡೆಗೆ ಚಲಿಸುವುದು. ಭೂಮಿಯಿಂದ 169 ಕೋಟಿ ಮೈಲು ದೂರವಿದ್ದು, ಶನಿ ಗ್ರಹದಂತೆ ಚಲನೆ ಹೊಂದಿರುವುದು ಹರ್ಷಲ್ ಗ್ರಹವು ಸೂರ್ಯನನ್ನು ಒಂದು ಬಾರಿ ಸುತ್ತಿ ಬರಲು 84 ವರ್ಷ ತೆಗೆದುಕೊಳ್ಳುವುದು ಒಂದು ರಾಶಿಯಲ್ಲಿ ಏಳು ವರ್ಷಗಳವರೆಗೆ ಉಳಿಯುವುದು.
ಆಧುನಿಕ ಜ್ಯೋತಿಷಿಗಳು ಹರ್ಷಲ್ ಗ್ರಹವು ಜಾಗೃತಿಯ ದ್ಯೋತಕವಾಗಿದೆ ಎಂದಿದ್ದಾರೆ. ತನ್ನ ವಿಲಕ್ಷಣ ಸ್ವಭಾವದಿಂದ ಪ್ರಭಾವ ಬೀರುವ ಗ್ರಹವೆಂದಿದ್ದಾರೆ. ಈ ಗ್ರಹದ ಪರಿಣಾಮ ಸೌರಮಂಡಲದ ಇತರ ಗ್ರಹಗಳ ಮೇಲೆ ಸಹ ಆಗಿರುವದು ಕಂಡುಬರುವುದು. ಇದರ ಮಿತ್ರ ರಾಶಿಗಳೆಂದರೆ ಕುಂಭ, ತುಲಾ ಮತ್ತು ಮಿಥುನಗಳಾಗಿವೆ.
ಈ ಗ್ರಹವು ಆಂತರಿಕ ಉದ್ವೇಗ ಬುದ್ಧಿ ಮತ್ತು ನರಮಂಡಲಗಳ ಮೇಲೆ ಪ್ರಭಾವ ಬಿರುದು. ಶೀತಗ್ರಹವೆನಿಸಿದ ಹರ್ಷಲ್ ಪರಿವರ್ತಕ ಶೀತಲವಾಗಿರುವುದು. ಸ್ವಾತಂತ್ರ್ಯ, ಚಾರಿತ್ರಬಲ, ಹಠ, ವೈಜ್ಞಾನಿಕ ಪ್ರಯೋಗಗಳ ಮೇಲೆ ಈ ಗ್ರಹಕ್ಕೆ ಸಂಬಂಧವಿದೆ ಎನ್ನಲಾಗಿದೆ. ಮೌಲ್ಯಗಳ ವಿಷಮತೆ ಆಕಸ್ಮಿಕ ಸೌಭಾಗ್ಯ ದೌರ್ಭಾಗ್ಯಗಳ ಸೂಚಕವಾಗಿರುವುದು.
ಕೆಲವರು ಈ ಗ್ರಹವು ನಿರಾಸೆಯಲ್ಲಿ ಆಸೆಯನ್ನು ತರುವ, ತಿರುಗಾಡುವ, ಬುದ್ದಿದಾಯಕವಾದ ಉಪಾಯವನ್ನು ತಿಳಿಸುವ ವಿನಾಶ ಮತ್ತು ಸಾಮೂಹಿಕ ನಾಶವನ್ನು ಮಾಡುವ ಗ್ರಹವೆಂದಿದ್ದಾರೆ. ಆಧುನಿಕ ಜಗತ್ತಿನಲ್ಲಿರುವ ವಿದ್ಯುದ್ವಿಕಾಸ, ಎಲೆಕ್ಟ್ರಾನಿಕ್ ಕ್ಷೇತ್ರ, ಸಿನಿಮಾ ಜಗತ್ತು, ಸಂಚಾರ ವ್ಯವಸ್ಥೆ, ಉಪಗ್ರಹ ಸಂಶೋಧನೆ, ಕಾರ್ಯಗಳು, ಅಂತರಿಕ್ಷಾನು ಸoದಾನ ಕಾರ್ಯಗಳು ವೈಜ್ಞಾನಿಕ ಸಾಧನೆಗಳು ಮುಂತಾದ ವಿಷಯಗಳೊಡನೆ ಸಂಬಂಧ ಹೊಂದಿದೆ ಎಂದಿದ್ದಾರೆ.
ಕ್ರಾಂತಿ, ಚಳುವಳಿ, ದಂಗೆ, ರಾಜನೈತಿಕ, ವ್ಯತ್ಯಾಸ, ಯಾಂತ್ರಿಕ ದುರ್ಘಟನೆಯ, ರೈಲು ಬಸ್ಸು, ವಿಮಾನ ಅವಘಡಗಳು, ಟೆಲಿಫೋನ್ ಮುಂತಾದವುಗಳೊಂದಿಗೆ ಹರ್ಷಲ್ ಗ್ರಹವು ಸಂಬಂಧ ಹೊಂದಿರುವುದು. ವಾಯುಕೋಪ, ಬಿರುಗಾಳಿ ಇನ್ ಫ್ಲುಯೆಂಜಾ ರೋಗ, ಕ್ಯಾನ್ಸರ್ ರೋಗ ಮುಂತಾದವು ಹರ್ಷಲ್ ಗ್ರಹದ ಸಂಬಂಧದಿಂದ ಉಂಟಾಗುವವು.
ಸಮಾಜ ಮತ್ತು ರಾಷ್ಟ್ರದ ಪ್ರಮುಖ ಸಂಬಂಧಗಳಾದ ಗಂಡ-ಹೆಂಡತಿ, ತಂದೆ-ಮಗ, ತಂದೆ-ತಾಯಿ, ಅಣ್ಣ-ತಂಗಿ, ಸ್ತ್ರೀ-ಪುರುಷ, ಸಂಬಂಧಗಳನ್ನು ಒಡೆಯುವುದು ಈ ಗ್ರಹದ ಕಾರ್ಯವೆನಿಸಿರುವುದು. ಪ್ರಾಣಿಗಳ ಮೇಲೆ ಈ ಗ್ರಹದ ಪ್ರಭಾವ ಅಧಿಕವಾಗಿರುವುದು ಚಂದ್ರ ಅಥವಾ ಸೂರ್ಯರ ಬಳಿಯಲ್ಲಿ ಈ ಗ್ರಹವಿದ್ದಾಗ ಹುಟ್ಟಿದವರಿಗೆ ದಾಂಪತ್ಯ ಸುಖವಿಲ್ಲ, ಸಣ್ಣ ವ್ಯಾಪಾರಿಗಳನ್ನ, ವಿಜ್ಞಾನಿಗಳನ್ನ, ಇಂಜಿನಿಯರ್ ಗಳನ್ನ, ಹೊಸ ರೀತಿಯ ಯಂತ್ರ ನಿರ್ಮಾಣ ಮಾಡುವರನ್ನ ಈ ಗ್ರಹ ಸೂಚಿಸುತ್ತದೆ.
ಹರ್ಷಲ್ ಗೃಹಕ್ಕೆ ಸೂರ್ಯ-ಚಂದ್ರರೊಂದಿಗೆ ವೈರವಿರುವುದು. ಗುರು ಮತ್ತು ಶನಿಗಳೊಡನೆ ಸೇರಿದಾಗ ಯಾತ್ರೆ, ಮನೋವಿಜ್ಞಾನ, ಜಾದೂ, ಸಂಶೋಧನೆ, ಪರ್ವತಾರೋಹಣ ಕಾರ್ಯಗಳಲ್ಲಿ ಪ್ರಸಿದ್ಧಿ ತರುವುದು, ಶುಕ್ರ ಗ್ರಹದೊಂದಿಗೆ ಸೇರಿದ ಅನೈತಿಕ ಸಂಬಂಧದಿಂದ ಅವಮಾನಪಡಿಸುವುದು, ಮಾದಕ ದ್ರವ್ಯ ಸೇವಿಸಿದಂತಾಗುವುದು, ರಾತ್ರಿಯಲ್ಲಿ ಬಲಿಷ್ಠವಾದ ಪ್ರತಿನಿಧಿಯಾಗಿದೆ. ಇದು ತಮೋಗುಣವಿದ್ದು 42 ವರ್ಷಗಳವರೆಗೆ ತನ್ನ ಪ್ರಭಾವ ಬೀರುವುದು ಹರ್ಷಲ್ ಗ್ರಹದ ದೋಷ ನಿವಾರಣೆಗಾಗಿ ಹಸ್ತಿದಂತ, ಮೃಗದ ಎಲುಬುದರಿಸುವರು. ಅದೇ ರೀತಿ ಗೂಢ ವಿಷಯಗಳ ಅಧ್ಯಯನ ನಡೆಸುವರು.