ಮನೆ ರಾಷ್ಟ್ರೀಯ ಹರಿಯಾಣ: ವಿಶ್ವಾಸಮತ ಸಾಬೀತುಪಡಿಸಿದ ನೂತನ ಸಿಎಂ ನಯಾಬ್ ಸೈನಿ

ಹರಿಯಾಣ: ವಿಶ್ವಾಸಮತ ಸಾಬೀತುಪಡಿಸಿದ ನೂತನ ಸಿಎಂ ನಯಾಬ್ ಸೈನಿ

0

ಚಂಡೀಗಢ: ಹರಿಯಾಣದ ನೂತನ ಮುಖ್ಯಮಂತ್ರಿ ನಯಾಬ್ ಸೈನಿ ಅವರು ಬುಧವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ನಯಾಬ್ ಸಿಂಗ್ “ನಾನು ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದಿದ್ದೇನೆ, ನನ್ನ ಕುಟುಂಬದಲ್ಲಿ ಯಾರೂ ರಾಜಕೀಯದಲ್ಲಿರಲಿಲ್ಲ, ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಮತ್ತು ಇಂದು ನನಗೆ ಇಂತಹ ದೊಡ್ಡ ಅವಕಾಶವನ್ನು ನೀಡಲಾಗಿದೆ, ಇದು ಬಿಜೆಪಿಯಂತಹ ಪಕ್ಷದಲ್ಲಿ ಮಾತ್ರ ಸಾಧ್ಯ ಎಂದು ನಾನು ಹೇಳಲೇಬೇಕು” ಎಂದರು.

ದುಶ್ಯಂತ್ ಚೌಟಾಲಾ ಅವರ ಜೆಜೆಪಿ ಜತೆಗಿನ ಸಂಬಂಧವನ್ನು ಕಡಿದುಕೊಂಡ ನಂತರವೂ ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತವಿದೆ ಎಂದು ಸಾಬೀತುಪಡಿಸುವ ಅಗತ್ಯ ಎದುರಾಗಿತ್ತು.

ಹರ್ಯಾಣದಲ್ಲಿ 48 ಗಂಟೆಗಳ ಒಳಗೆ ತ್ವರಿತ ಸರ್ಕಾರ ಬದಲಾವಣೆಗೆ ಸಾಕ್ಷಿಯಾಗಿತ್ತು. ಬಿಜೆಪಿಯ ಹಿರಿಯ ನಾಯಕ ಮನೋಹರ್ ಲಾಲ್ ಖಟ್ಟರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2019 ರಲ್ಲಿ ರೂಪುಗೊಂಡ ಬಿಜೆಪಿ-ಜೆಜೆಪಿ ಮೈತ್ರಿಯ ವೈಫಲ್ಯ ಖಟ್ಟರ್ ಅವರ ಸರ್ಕಾರದ ವಿಘಟನೆಗೆ ಪ್ರಮುಖ ಕಾರಣವಾಗಿತ್ತು, ಏಕೈಕ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಆರು ಸ್ಥಾನಗಳ ಕೊರತೆಯನ್ನು ಎದುರಿಸುತ್ತಿತ್ತು.

ದುಶ್ಯಂತ್ ಚೌತಾಲಾ ನೇತೃತ್ವದ ಜೆಜೆಪಿ 10 ಶಾಸಕರಿಗೆ ವಿಪ್ ಜಾರಿ ಮಾಡಿ ಮತದಾನದಿಂದ ದೂರವಿರುವಂತೆ ಕೇಳಿತ್ತು. ವಿಪ್ ಹೊರತಾಗಿಯೂ, ನಾಲ್ವರು ಜೆಜೆಪಿ ಶಾಸಕರಾದ ಜೋಗಿ ರಾಮ್ ಸಿಹಾಗ್, ಈಶ್ವರ್ ಸಿಂಗ್, ರಾಮ್‌ಕುಮಾರ್ ಗೌತಮ್ ಮತ್ತು ದೇವೇಂದ್ರ ಬಬ್ಲಿ ಅವರು ಪಕ್ಷದ ಆಜ್ಞೆ ಮುರಿದು ವಿಧಾನಸಭೆಗೆ ಆಗಮಿಸಿದರು. ನಾಲ್ವರು ಜೆಜೆಪಿ ಶಾಸಕರು ಮತ್ತು ಪಕ್ಷೇತರ ಶಾಸಕ ಬಾಲರಾಜ್ ಕುಂದು ಸದನದಿಂದ ನಿರ್ಗಮಿಸಿದರು.

90 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ, ಬಿಜೆಪಿ 41 ಸದಸ್ಯರನ್ನು ಹೊಂದಿದ್ದು, ಏಳು ಪಕ್ಷೇತರರ ಪೈಕಿ ಆರು ಮಂದಿ, ಹರಿಯಾಣದ ಲೋಖಿತ್ ಪಕ್ಷದ ಏಕೈಕ ಶಾಸಕ ಗೋಪಾಲ್ ಕಾಂಡ ಅವರ ಬೆಂಬಲವನ್ನು ಸಹ ಹೊಂದಿದೆ.

ಸದನದಲ್ಲಿ ಜೆಜೆಪಿ 10 ಶಾಸಕರನ್ನು ಹೊಂದಿದ್ದು, ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ 30 ಶಾಸಕರು, ಭಾರತೀಯ ರಾಷ್ಟ್ರೀಯ ಲೋಕದಳ ಓರ್ವ ಶಾಸಕರನ್ನು ಹೊಂದಿದೆ.

ಹಿಂದಿನ ಲೇಖನಶಿರಾಡಿಘಾಟ್ ರಸ್ತೆಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ
ಮುಂದಿನ ಲೇಖನಬೆಂಗಳೂರಿನಲ್ಲಿ ಸ್ವಿಮ್ಮಿಂಗ್ ಪೂಲ್ ಗಳಿಗೆ ಕಾವೇರಿ ನೀರು ಬಳಸಿದರೆ ರೂ.5000 ದಂಡ