ಮನೆ ಅಪರಾಧ ಹರಿಯಾಣ: ಹೋಟೆಲ್ ಪಾರ್ಕಿಂಗ್‌ ನಲ್ಲಿ ಗುಂಡಿಕ್ಕಿ ಮೂವರ ಹತ್ಯೆ

ಹರಿಯಾಣ: ಹೋಟೆಲ್ ಪಾರ್ಕಿಂಗ್‌ ನಲ್ಲಿ ಗುಂಡಿಕ್ಕಿ ಮೂವರ ಹತ್ಯೆ

0
ಸಾಂದರ್ಭಿಕ ಚಿತ್ರ

ಚಂಡೀಗಢ: ಹರಿಯಾಣದ ಪಂಚಕುಲದ ಹೋಟೆಲ್‌ ಒಂದರ ಪಾರ್ಕಿಂಗ್ ಸ್ಥಳದಲ್ಲಿ ಅಪರಿಚಿತ ದುಷ್ಕರ್ಮಿಗಳು ಓರ್ವ ಮಹಿಳೆ ಸೇರಿದಂತೆ ಮೂವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

Join Our Whatsapp Group

ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ದೆಹಲಿಯ ವಿಕ್ಕಿ, ವಿಪಿನ್ ಮತ್ತು ಹಿಸಾರ್‌ನ ನಿಯಾ ಮೃತರು ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಗೀಡಾದ ಮೂವರು ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಲು ಬಂದಿದ್ದರು ಎಂದು ಪಂಚಕುಲದ ಸಹಾಯಕ ಪೊಲೀಸ್ ಆಯುಕ್ತ (ಅಪರಾಧ) ಅರವಿಂದ್ ಕಾಂಬೋಜ್  ತಿಳಿಸಿದ್ದಾರೆ.

30ರ ಆಸುಪಾಸಿನ ವಯಸ್ಸಿನ ವಿಕ್ಕಿ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಕೆಲವು ಪ್ರಕರಣಗಳನ್ನು ಎದುರಿಸುತ್ತಿದ್ದ ಎಂದು ಅವರು ಹೇಳಿದ್ದಾರೆ.

ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ. ಇತರ ಸುಳಿವುಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹತ್ಯೆಯ ಹಿಂದಿನ ಉದ್ದೇಶ ತಕ್ಷಣವೇ ಸ್ಪಷ್ಟವಾಗಿಲ್ಲವಾದರೂ, ಹಳೆ ದ್ವೇಷ ಇರಬಹುದು ಎಂದು ಶಂಕಿಸಿದ್ದಾರೆ.‌