ಹಾಸನ : ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆಗೆ ಕಸರತ್ತು ನಡೆಯುತ್ತಿರುವ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಹಾಸನಾಂಬೆ ಸನ್ನಿಧಿಯಲ್ಲಿ ಮಹಾಪ್ರಸಾದ ಸಿಕ್ಕಿದೆ. ನೆನ್ನೆ (ಮಂಗಳವಾರ) ಪತ್ನಿಯೊಂದಿಗೆ ಹಾಸನಾಂಬೆ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಈ ವೇಳೆ ಡಿಸಿಎಂಗೆ ವಿಜಯೀ ಶ್ರೇಯಸ್ಸು ಲಭಿಸಲೆಂದು ನಾರಾಯಣಿ ನಮಸ್ಕಾರ ಮಂತ್ರದ ಮೂಲಕ ಪೂಜೆ ಸಲ್ಲಿಸಿದರು. ಸುಮಾರು ಐದು ನಿಮಿಷ ದುರ್ಗಾ ಸಪ್ತಸತಿಯ 11ನೇ ಅಧ್ಯಾಯದ ನಾರಾಯಣಿ ನಮಸ್ಕಾರ ಮಂತ್ರ ಹೇಳಿ ಅರ್ಚಕರು ಪೂಜೆ ನೆರವೇರಿಸಿದರು.
ಪೂಜೆ ನೇರವೇರಿಸುವ ವೇಳೆ ಡಿಕೆಶಿ “ಶತ್ರುವಿನ ಮೇಲೆ ವಿಜಯ ಸಾಧಿಸಲು ಖಡ್ಗಮಾಲ ಸ್ತೋತ್ರ” ಪಠಿಸಿದರು. ಇದೇ ಶುಭ ಸಮಯದಲ್ಲಿ ದೇವಿಯ ಬಲಗಡೆಯಿಂದ ಹೂವು ವರದವಾಗಿ ಬಿದ್ದಿತು. ಎರಡು ಬಾರಿ ದೇವಿಯ ಬಲಭಾಗದ ಹೂವು ಬಿದ್ದಿತು.
ಪೂಜೆ ಬಳಿಕ ಮಾತನಾಡಿದ ಡಿಕೆಶಿ, ನಾನುಂಟು.. ಆ ತಾಯಿ ಉಂಟು ನಮಗೆ, ನಿಮಗೆ, ಎಲ್ಲರಿಗೂ ಭಗವಂತ ಶಾಂತಿ, ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.















