ಮೈಸೂರು(Mysuru): ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಚಾರ ನಿರ್ಮೂಲನಾ ಸಂಸ್ಥೆ ಮತ್ತು ಸವಾಲ್ ಪತ್ರಿಕೆ ಸಹಯೋಗದಲ್ಲಿ ` ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ’ ಎಂಬ ಪರಿಕಲ್ಪನೆಯೊಂದಿಗೆ `ಹಸಿರೋತ್ಸವ’ ಕಾರ್ಯಕ್ರಮವನ್ನು ಜೂನ್ 16ರಂದು ನಗರದ ದಂಡಿ ಮಾರಮ್ಮ ದೇವಸ್ಥಾನದ ಬಳಿ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಸುಭಾಷ್ ನಗರದ ಬಿ.ಎಂ.ರಸ್ತೆಯಲ್ಲಿರುವ ದಂಡಿ ಮಾರಮ್ಮ ದೇವಸ್ಥಾನ ಸೇವಾ ರಸ್ತೆಯ ಎರಡು ಬದಿಯಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಚಂದ್ರವನ ಆಶ್ರಮದ ಶ್ರೀ ಕ್ಷೇತ್ರ ಬೇಬಿ ಮಠದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಮಹಾಸ್ವಾಮಿಗಳು ವಹಿಸಲಿದ್ದು, ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕೊಂಡಲು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ತನ್ವೀರ್ ಅಜೀಜ್ ಸೇಠ್ ವಹಿಸಲಿದ್ದು, ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತೆ ಎಂ.ಎಸ್. ಗೀತಾ ಪ್ರಸನ್ನ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ ರಾಜೀವ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರ ರಾಜೇ ಅರಸ್ ಮತ್ತು ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಗಂಗಾಧರ ಸ್ವಾಮಿ ಉಪಸ್ಥಿತರಿರಲಿದ್ದಾರೆ.
ಸಮಾರಂಭದ ಮುಖ್ಯ ಅತಿಥಿಗಳಾಗಿ ಉತ್ತರ ವಲಯ ಉಪ ನೋಂದಣಾಧಿಕಾರಿ ವಿವೇಕ್, ನರಸಿಂಹ ರಾಜ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಅಜರುದ್ದೀನ್, ಪೀಪಲ್ಸ್ ಪಾರ್ಕ್ ಶಾಲೆ ಮುಖ್ಯ ಶಿಕ್ಷಕ ಸೋಮಶೇಖರ್, ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಸಮೀ ಅಜ್ಜು, ಆರೀಫ್ ಹುಸೇನ್ ಹಾಗೂ ಪಾಲಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್ ಆಗಮಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಮಣಿಪಾಲ್ ಆಸ್ಪತ್ರೆ ಮುಖ್ಯಸ್ಥರು, ಮಾತೃಶ್ರೀ ಗ್ರೂಪ್ಸ್ ಎವಿನ್ ಎಂಟರ್ ಪ್ರೈಸಸ್ ಮುಖ್ಯಸ್ಥರು ಮತ್ತು ಸಾಕೀಬ್ ಅಹಮದ್, ಎಲಿಕ್ಸಿರ್ ಜಿಮ್ ಮಾಲೀಕರು ಪಾಲ್ಗೊಳ್ಳಲಿದ್ದಾರೆ.
ಸದರಿ ಕಾರ್ಯಕ್ರಮಕ್ಕೆ ಸಾರ್ವಜನಿಕರು, ಮಕ್ಕಳು ಆಗಮಿಸಬೇಕೆಂದು ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಚಾರ ನಿರ್ಮೂಲನಾ ಸಂಸ್ಥೆ ಹಾಗೂ ಸವಾಲ್ ಪತ್ರಿಕೆ ಮನವಿ ಮಾಡಿದ್ದು, ಹೆಚ್ಚಿನ ಮಾಹಿತಿಗಾಗಿ ದೂ.9739886223, 9663751994 ನ್ನು ಸಂಪರ್ಕಿಸಬಹುದಾಗಿದೆ.