ಮನೆ ರಾಜಕೀಯ ಹಾಸನ: ಡಿ.13 ರಂದು ಬಿಜೆಪಿ ಜನ ಸಂಕಲ್ಪ ಯಾತ್ರೆ: ಸಚಿವ ಕೆ.ಗೋಪಾಲಯ್ಯ

ಹಾಸನ: ಡಿ.13 ರಂದು ಬಿಜೆಪಿ ಜನ ಸಂಕಲ್ಪ ಯಾತ್ರೆ: ಸಚಿವ ಕೆ.ಗೋಪಾಲಯ್ಯ

0

ಹಾಸನ(Hassan): ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಬಿಜೆಪಿಯ ಜನ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ಹಾಸನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಯಡಿಯೂರಪ್ಪ ನವರ ನೇತೃತ್ವದಲ್ಲಿ ಇದೇ 13 ರಂದು ಜನಸಂಕಲ್ಪ ಯಾತ್ರೆ ನಡೆಯಲಿದೆ. ಅಂದು ಬೆಳಿಗ್ಗೆ ಬೇಲೂರಿನಲ್ಲಿ 12  ಗಂಟೆಗೆ, ಸಕಲೇಶಪುರ ದಲ್ಲಿ 3 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ ಎಂದರು.

ಸಕಲೇಶಪುರ, ‌ಬೇಲೂರಿನಲ್ಲಿ ಅನೇಕ ಸಮಸ್ಯೆಗಳಿವೆ. ಈ ಹಿನ್ನಲೆ ಈ ತಾಲ್ಲೂಕುಗಳಲ್ಲೇ ಕಾರ್ಯಕ್ರಮ ‌ಮಾಡಬೇಕು ಎಂದು ಬೇಡಿಕೆ‌ ಇಟ್ಟಿದ್ದೆವು. ಈ ಭಾಗದ ಬೇಡಿಕೆಗಳನ್ನ ಈಡೇರಿಸುವ ಹೊಸ ಯೋಜನೆಗಳನ್ನ ಕಾರ್ಯಕ್ರಮದಲ್ಲಿ ಘೋಷಿಸಲಾಗುತ್ತದೆ ಎಂದು ಹೇಳಿದರು.

ಕಾಫಿ ಪ್ಲಾಂಟರ್ಸ್ ನ ಒತ್ತುವರಿ ಭೂಮಿಯನ್ನು ಲೀಸ್ ಗೆ ಕೊಡುವ ಪ್ರಕ್ರಿಯೆ ಶೀಘ್ರ ನೆರವೇರಲಿದೆಯಲ್ಲದೇ ಎತ್ತಿನ ಹೊಳೆಗೆ ಹಣ ದುಬಾರಿಯಾಗುತ್ತಿದೆ. ಕಾಮಗಾರಿ ತಡವಾದರೆ ವೆಚ್ಚ ಹೆಚ್ಚಾಗುತ್ತದೆ ಆದ್ದರಿಂದ ಮುಂದಿನ ವರ್ಷದ ಮೇ ಸಂದರ್ಭಕ್ಕೆ ಎತ್ತಿನ ಹೊಳೆ ನೀರು ಹರಿಸುವ ವಿಶ್ವಾಸವಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಾಸ‌ನ‌ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.