ಮನೆ ಸುದ್ದಿ ಜಾಲ ಹಾಸನ: ತಾಳಿ ಕಟ್ಟುವ ವೇಳೆ ಮದುವೆ ನಿರಾಕರಣೆ : ಪ್ರೀತಿಸಿದವನೊಂದಿಗೆ ಮದುವೆ ಮಾಡಿಕೊಂಡ ಯುವತಿ!

ಹಾಸನ: ತಾಳಿ ಕಟ್ಟುವ ವೇಳೆ ಮದುವೆ ನಿರಾಕರಣೆ : ಪ್ರೀತಿಸಿದವನೊಂದಿಗೆ ಮದುವೆ ಮಾಡಿಕೊಂಡ ಯುವತಿ!

0

ಹಾಸನ: ಮದುವೆ ಸಮಾರಂಭದ ಶುಭ ಘಳಿಗೆಯಲ್ಲಿ ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿದ ವಧು, ತಾನು ಪ್ರೀತಿಸಿದ ಯುವಕನೊಂದಿಗೆ ವಿವಾಹವಾಗುವುದಾಗಿ ಪಟ್ಟು ಹಿಡಿದಿದ್ದ ಘಟನೆಗೆ ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪ ಶುಕ್ರವಾರ ಸಾಕ್ಷಿಯಾಗಿತ್ತು.

ಇದೀಗ ಅದೇ ಯುವತಿ ಶುಕ್ರವಾರ ಸಂಜೆಯೇ ತನ್ನ ಪ್ರಿಯಕರನ ಜತೆ ವಿವಾಹವಾಗಿದ್ದಾಳೆ. ಆದಿಚುಂಚನಗಿರಿ ಕಲ್ಯಾಣಮಂಟಪದಲ್ಲಿರುವ ಗಣಪತಿ ದೇವಾಲಯದಲ್ಲಿ ಪಲ್ಲವಿ ಹಾಗೂ ರಘು ಪೋಷಕರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಇದರೊಂದಿಗೆ ಪ್ರೀತಿಸಿದವನಿಗಾಗಿ ಕೊನೆ ಘಳಿಗೆಯಲ್ಲಿ ಮುರಿದುಬಿದ್ದದ್ದ ಮದುವೆ ಪ್ರಕರಣ ಕೊನೆಗೂ ಸುಖಾಂತ್ಯವಾಗಿದೆ.

ಈ ಹಠಾತ್ ತಿರುವು ಮದುವೆ ಕಾರ್ಯಕ್ರಮಕ್ಕೆ ಬಂದವರಲ್ಲಿ ಶಾಕ್ ಉಂಟುಮಾಡಿದರೂ, ಕೊನೆಗೆ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದಾರೆ ಎಂಬ ಕಾರಣದಿಂದಾಗಿ ಸಭೆಯಲ್ಲಿ ಸಂತಸದ ವಾತಾವರಣ ಮೂಡಿತು. ಮದುವೆ ಸರಳವಾಗಿ ನಡೆದಿದ್ದು, ಕುಟುಂಬದವರು ಹಾಗೂ ಬಂಧುಗಳು ಜತೆಗೂಡಿ ನವದಂಪತಿಗಳನ್ನು ಆಶೀರ್ವದಿಸಿದ್ದಾರೆ.