ಕ್ಷೇತ್ರ – ಕನ್ಯಾರಾಶಿಯಲ್ಲಿ 10 ಡಿಗ್ರಿಯಿಂದ 23 ಡಿಗ್ರಿ 30 ಕಲೆ. ಗಣ – ದೇವ, ನಾಡಿ – ಆದ್ಯ, ನಕ್ಷತ್ರಸ್ವಾಮಿ – ಚಂದ್ರ, ಯೋನಿ – ಮಹಿಷ, ರಾಶಿ ಅಧಿಪತಿ – ಬುಧ, ನಾಮಾಕ್ಷರ – ಪೂ,ಪ,ಣ,ಠ. ಶರೀರಭಾಗ – ಸಣ್ಣಕರುಳು, ದೊಡ್ಡಕರುಳು, ಗ್ರಂಥಿಗಳು, ಕಿಣ್ವಕಗಳು.
ರೋಗಗಳು :- ವಿಟಮಿನ್ ಬಿ, ಕೊರತೆ, ವಾಯುವಿಕಾರ, ಭಗಂಧರರೋಗ, ಗ್ಯಾಸ್ ಟ್ರಬಲ್, ಕರುಳಿನಲ್ಲಿ ಉರಿ, ನೋವು, ಮುಲಾಮ ರೋಧ, ಅಮಿಬಿಕ್ ತೊಂದರೆ, ಅಜೀರ್ಣ, ಹಿಸ್ಟೀರಿಯಾ, ಮೂತ್ರ ರೋಗ.
ಸಂರಚನೆ – ವೇದ ಶಾಸ್ತ್ರ ಸಿದ್ಧಾಂತಗಳನ್ನು ತಿಳಿದವರು, ವ್ಯಾಪಾರಿ, ಕುಶಲಕರ್ಮಿಗಳು, ಕಾರ್ಯಕರ್ತರು, ಉದ್ಯಮಿಗಳು, ಚಂಚಲರು, ದಯಾ ಹೀನರು, ಕಳ್ಳರು, ಸತತ ಕಾರ್ಯಶೀಲರು ಆಗುವವರು.
ಉದ್ಯೋಗ ವಿಶೇಷಗಳು – ವ್ಯಾಪಾರ, ದಲಾಲಿ, ದೇಶಾಂತರಯಾತ್ರೆ, ಅಂಚೆಸೇವೆ, ಹಡಗು ಉದ್ಯಮ, ಬಟ್ಟೆ ಗಿರಣಿ ನಡೆಸುವುದು, ಅಣೆಕಟ್ಟು ಕಟ್ಟುವುದು, ಇಂಜಿನಿಯರ್, ವಕೀಲ, ಆಯಾತ ನಿರ್ಮಿತ ಮಾಡುವವರು, ಶಿಲ್ಪ ಬಣ್ಣದ ಕೆಲಸ, ರಾಜದೂತ, ಸಂದೇಶವಾಹಕರಾಗುವವರು, ದಾದಿ, ಸರ್ಜನಾದಾಯಿ, ಪ್ರಚಾರಕರು, ಪಂಡಿತರು, ಕವಿ, ಅಕ್ಷರ ವಿನ್ಯಾಸಕರು ಆಗಬಹುದಾಗಿದೆ.
ಬುಧನ ರಾಶಿ ಚಂದ್ರನಕ್ಷತ್ರದಲ್ಲಿ ಜನಿಸಿದ ಅವರ ಮೇಲೆ ಸೌರಮಂಡಲ ಪ್ರಭಾವ ಚೆನ್ನಾಗಿರುವುದಿಲ್ಲ. ಅಸತ್ಯವಾದಿ, ಅಭಿಮಾನಿ, ಪರಿಶ್ರಮಿ, ನಿರ್ಲಕ್ಷದವರು ,ಸಂಗೀತ ಪ್ರೇಮಿ, ಜಲ, ಪಶು ಪಾಲನ ಪ್ರೇಮಿ ಆಗಬಹುದಾಗಿದೆ. ಚಂದ್ರನು ಬಲಶಾಲಿಯಾಗಿದ್ದಲ್ಲಿ ವ್ಯಕ್ತಿಯು ಆಧ್ಯಾತ್ಮಿಕತೆಯಲ್ಲಿ ಪ್ರಬಲನಾಗುವ, ಸೂರ್ಯ ನಕ್ಷತ್ರದಲ್ಲಿ ಆಶ್ವಿಜ ಮಾಸದಲ್ಲಿ 13 ದಿನ ಒಂದು ದಿನ ಮಾತ್ರ ಇರುವವನು.