ಬೆಂಗಳೂರು: ಹಿಂದೂ ಧರ್ಮದ ಬಗ್ಗೆ ನನಗೆ ಗೌರವವಿದೆ. ಅವಹೇಳನಕಾರಿ ಹೇಳಿಕೆ ನೀಡಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಾ ಜಿ.ಪರಮೇಶ್ವರ್, ಬೆಳಿಗ್ಗೆ ಎದ್ದರೇ ನಾನು ಗಣೇಶನನ್ನ ನೆನೆಯುತ್ತೇನೆ ಮಲಗುವಾಗ ಹನುಮಾನ್ ಶ್ಲೋಕ ಹೇಳುತ್ತೇನೆ. ಬಿಜೆಪಿ ನಾಯಕರಿಗೆ ಆ ಶ್ಲೋಕಗಳು ಬರುತ್ತವಾ..? ಎಂದು ಪ್ರಶ್ನಿಸಿದರು.
ಹಿಂದೂ ಧರ್ಮದ ಹುಟ್ಟಿನ ಬಗ್ಗೆ ಪ್ರಶ್ನಿಸಿಲ್ಲ. ಪದೇ ಪದೇ ಅದನ್ನೇ ಹೆಳುತ್ತಾ ಕೂರಲು ಆಗಲ್ಲ. ರಾಧಾಕೃಷ್ಣನ್ ಧರ್ಮದ ಬಗ್ಗೆ ಅಧ್ಯಯನ ಮಾಡಿದ್ದರು. ಅದನ್ನೇ ನಾನು ಹೇಳಿದ್ದೇನೆ. ನಾನು ಹಿಂದೂ ಧರ್ಮದ ವಿರೋಧಿ ಅಲ್ಲ ಎಂದು ತಿಳಿಸಿದರು.
ರಿಪಬ್ಲಿಕ್ ಆಫ್ ಭಾರತ್ ಎಂದು ನಾಮಕರಣ ವಿಚಾರ, ಇವರೆಲ್ಲ ಯುನೈಟೆಡ್ ನೇಷನ್ ಗೆ ಹೋಗಿ ನೋಡಲಿ. ಅಲ್ಲಿಗೆ ಪ್ರದಾನಿ, ವಿದೇಶಾಂಗ ಸಚಿವರು ಹೋಗ್ತಾರಲ್ಲ ಮೊದಲ ನೋಡಲಿ. ಅಲ್ಲಿರುವ ಬೋರ್ಡ್ ನಲ್ಲಿ ಇಂಡಿಯಾ ಅಂತಾ ಇದೆ. ಬಿಜೆಪಿಯವರು ಮೇಕ್ ಇನ್ ಇಂಡಿಯಾ ಅಂತಾ ಮಾಡಿರಲಿಲ್ವಾ ಆಗ ಮೇಕ್ ಇನ್ ಭಾರತ್ ಅಂತಾ ಮಾಡಬಹುದಿತ್ತಲ್ವಾ..? ದೇಶಕ್ಕೆ ಕೆಟ್ಟದಾಗುತ್ತಿದೆ ಎಂದು ಇದ್ದರೇ ಅರ್ಥ ಮಾಡಿಕೊಳ್ಳೋಣ, ಮೈತ್ರಿಕೂಟ ಇಂಡಿಯಾ ಅಂತಾ ಹೆಸರಿಟ್ಟಿದ್ದಕ್ಕೆ ಈಗ ದೇಶದ ಹೆಸರು ಬದಲಾಯಿಸಲು ಹೊರಟಿದ್ದಾರೆ. ಇದರಲ್ಲಿ ರಾಜಕಾರಣ ಇದೆ ಅಷ್ಟೆ ಬೇರೆ ಏನು ಇಲ್ಲ ಎಂದು ಟೀಕಿಸಿದರು.