ಮನೆ ಕಾನೂನು ಹಾವೇರಿ: ಲೋಕಾಯುಕ್ತ ದಾಳಿ ವೇಳೆ 9 ಲಕ್ಷ ನಗದು ಗಂಟು ಕಟ್ಟಿ ಹೊರಗೆ ಎಸೆದ ಎಇ

ಹಾವೇರಿ: ಲೋಕಾಯುಕ್ತ ದಾಳಿ ವೇಳೆ 9 ಲಕ್ಷ ನಗದು ಗಂಟು ಕಟ್ಟಿ ಹೊರಗೆ ಎಸೆದ ಎಇ

0

ಹಾವೇರಿ: ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಹಿರೇಕೆರೂರು ಉಪ‌ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇ) ಕಾಶಿನಾಥ್ ಭಜಂತ್ರಿ ಮನೆ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ ನಡೆದಿದೆ.

Join Our Whatsapp Group

ನಗರದಲ್ಲಿರುವ ಬಸವೇಶ್ವರನಗರದ 1 ನೇ ಕ್ರಾಸ್‌ನಲ್ಲಿರುವ ಕಾಶಿನಾಥ್ ಭಜಂತ್ರಿ ನಿವಾಸಕ್ಕೆ ಲೋಕಾಯುಕ್ತ ಎಸ್ಪಿ ಕೌಲಾಪುರೆ ನೇತೃತ್ವದ ತಂಡ ದಾಳಿ‌ ಮಾಡಿ‌ ಪರಿಶೀಲನೆ ನಡೆಸಿದೆ.

ನಸುಕಿನಲ್ಲಿ ಅಧಿಕಾರಿಗಳ ತಂಡ ಬಾಗಿಲು ಬಡಿದಿತ್ತು. ಅವರನ್ನು ನೋಡಿ ಗಾಬರಿಗೊಂಡ ಕಾಶಿನಾಥ್,   ಕೊಠಡಿಗೆ ಹೋಗಿ ₹ 9 ಲಕ್ಷ‌ ನಗದಿನ ಗಂಟು ಕಟ್ಟಿ ಶೌಚಾಲಯದ ಕಿಟಕಿಯ ಮೂಲಕ ಹೊರಗೆ ಎಸೆದಿದ್ದರು.

ಬಾಗಿಲು ತೆರೆಸಿ ನಂತರ ಒಳಗೆ ಬಂದ ಅಧಿಕಾರಿಗಳು, ಗಂಟು ಪತ್ತೆ ಮಾಡಿದ್ದಾರೆ. ₹ 2 ಲಕ್ಷ ನಗದು ಬೆಡ್ ಮೇಲೆಯೇ ಸಿಕ್ಕಿದೆ. ಜೊತೆಗೆ ಒಟ್ಟು ₹ 14 ಲಕ್ಷ‌ ಪತ್ತೆಯಾಗಿರುವುದಾಗಿ ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಬಂಗಾರ ಸೇರಿದಂತೆ ಹಲವು ಮಹತ್ತರ ದಾಖಲೆಗಳು ಸಿಕ್ಕಿದ್ದು, ಪರಿಶೀಲನೆ ನಡೆಯುತ್ತಿದೆ.