ಹಾವೇರಿ: ಆಸ್ಪತ್ರೆಯಲ್ಲಿ ಬಾಲಕಿ ಸಾವಿಗೀಡಾದ ಪ್ರಕರಣದಲ್ಲಿ ವೈದ್ಯರ ಲೋಪವಿಲ್ಲ ಎಂದು ಆಸ್ಪತ್ರೆಯ ಪರವಾಗಿ ಅನುಕೂಲವಾಗುವಂತೆ ವರದಿ ನೀಡಲು ₹ 5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೈದ್ಯ ಸೇರಿದಂತೆ ಒಟ್ಟು ಇಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಹಾವೇರಿಯ ವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಗುರುರಾಜ ಭೀಮರಾಯ ಬಿರಾದಾರ & ಚನ್ನಬಸಯ್ಯ ಶಂಕ್ರಯ್ಯ ಕುಲಕರ್ಣಿ ಬಂಧಿತ ಆರೋಪಿಗಳು. ಹೀಗೆ ಬಾಲಕಿ ವಂದನಾಗೆ ಕೈ ಮೇಲೆ ಗುಳ್ಳೆಗಳು ಆಗಿದ್ದವು. ಈ ವೇಳೆ ಆಕೆಯನ್ನು ಚಿರಾಯು ಆಸ್ಪತ್ರೆಗೆ ಕರೆತರಲಾಗಿತ್ತು.ಈ ವೇಳೆ ಪರೀಕ್ಷೆ ನಡೆಸಿದ ವೈದ್ಯರು ವಂದನಗೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಹೇಳಿ ಬಾಲಕಿಯನ್ನು ಅಡ್ಮಿಟ್ ಮಾಡಿದ್ದಾರೆ.ಆ ನಂತರ, ಇಂಜೆಕ್ಷನ್ ಸಮೇತ ಸಲಾಯಿನ್ ಹಚ್ಚಿದ್ದರು,ಬಳಿಕ ವಂದನಾ ವಿಚಿತ್ರವಾಗಿ ವರ್ತಿಸಿ ಪ್ರಜ್ಞೆ ಕಳೆದುಕೊಂಡಳು ಎನ್ನಲಾಗಿದೆ.ಇದ್ರಿಂದ ಆತಂಕಗೊಂಡ ಪೋಷಕರು ಕೂಡಲೇ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆದರೆ,ಅಷ್ಟರಲ್ಲಾಗಲೇ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸದ್ಯ ಪೋಷಕರು ಹಾವೇರಿ ಶಹರ ಠಾಣೆಗೆ ದೂರು ನೀಡಿದ್ದರು.ಆರೋಪಿಗಳು ಆರೋಪಿಗಳು ಇಂದು ಆಸ್ಪತ್ರೆಗೆ ಬಂದು ₹ 3 ಲಕ್ಷ ಪಡೆಯುವಾಗಲೇ ದಾಳಿ ಮಾಡಿ ಇಬ್ಬರನ್ನೂ ಬಂಧಿಸಲಾಗಿದೆ.














