ಮನೆ ಸುದ್ದಿ ಜಾಲ ದ್ವಿತೀಯ ಪಿಯುಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಶುಭ ಕೋರಿದ ಹೆಚ್ ಡಿಕೆ

ದ್ವಿತೀಯ ಪಿಯುಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಶುಭ ಕೋರಿದ ಹೆಚ್ ಡಿಕೆ

0

ಬೆಂಗಳೂರು: ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಶುರುವಾಗುತ್ತಿದ್ದು, ಎಲ್ಲ ವಿದ್ಯಾರ್ಥಿಗಳಿಗೂ ನನ್ನ ಶುಭ ಹಾರೈಕೆಗಳು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಪಿಯುಸಿ ಪರೀಕ್ಷೆ ಎಂದರೆ, ಶೈಕ್ಷಣಿಕ ಜೀವನದ ಮಹತ್ವದ ಘಟ್ಟ. ಮುಂದಿನ ಬದುಕಿಗೆ ದಿಕ್ಸೂಚಿ. ಭಯ, ಆತಂಕವಿಲ್ಲದೆ ಪರೀಕ್ಷೆ ಬರೆಯಿರಿ. ಉಜ್ವಲ ಭವಿಷ್ಯ ನಿಮ್ಮದಾಗಲಿ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳೇ, ಪರೀಕ್ಷೆ ತೇರ್ಗಡೆಯಾಗಿ ಉನ್ನತ ಶಿಕ್ಷಣದತ್ತ ಹೆಜ್ಜೆ ಇಡುವುದೇ ನಿಮ್ಮ ಹೆಗ್ಗುರಿ ಆಗಲಿ. ಈ ಗೆಲುವು ನಿಮ್ಮ ತಂದೆ-ತಾಯಿ ಕಣ್ಣಲ್ಲಿ ಆನಂದಬಾಷ್ಪಕ್ಕೆ ಕಾರಣವಾಗಲಿ. ನನ್ನ ಪ್ರಕಾರ, ಬದುಕಿಗಿಂತ ದೊಡ್ಡದು ಬೇರಾವುದೂ ಇಲ್ಲ. ಈ ಪರೀಕ್ಷೆ ಕಡೆಗಣಿಸಿ ಜೀವನದುದ್ದಕ್ಕೂ ಬವಣೆಗೆ ಸಿಲುಕಿಕೊಳ್ಳಬೇಡಿ. ನಮ್ಮ ನಂಬಿಕೆಗಳು ನಮ್ಮಲ್ಲೇ ಇರಲಿ. ನಿಮ್ಮ ಗುರಿ ದಿಗಂತದಷ್ಟು ವಿಶಾಲವಿರಲಿ. ನೆನಪಿರಲಿ, ಈ ಒಂದು ಪರೀಕ್ಷೆ ನಿಮ್ಮ ಬದುಕಿನ ಪಥವನ್ನೇ ಬದಲಿಸುತ್ತದೆ ಎಂದು ಟ್ವೀಟ್ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ತಮ್ಮ ಶುಭಾಶಯ ತಿಳಿಸಿದ್ದಾರೆ.

ಹಿಂದಿನ ಲೇಖನಗೃಹಮಂತ್ರಿ ಖಾತೆ ಕೊಟ್ಟರೆ ನಿಭಾಯಿಸುವೆ: ಬಿ.ಸಿ.ಪಾಟೀಲ್
ಮುಂದಿನ ಲೇಖನಮೇ ನಲ್ಲಿ ಚಾಲೆಂಜಿಂಗ್ ಸ್ಟಾರ್ ‘ಕ್ರಾಂತಿ’ ಟೀಂ ಫಾರಿನ್ ಟೂರ್