ಮನೆ ಸ್ಥಳೀಯ ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ: ಡಾ.ಪುಷ್ಪಾ ಅಮರನಾಥ್‌

ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ: ಡಾ.ಪುಷ್ಪಾ ಅಮರನಾಥ್‌

0

ಮೈಸೂರು: ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂಬ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆಯೂ ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್‌ ಗುಡುಗಿದರು.

Join Our Whatsapp Group

ಕಾಂಗ್ರೆಸ್‌‍ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್‌‍ ಮಹಿಳಾ ವಿರೋಧಿ ಪಕ್ಷಗಳು. ಮಹಿಳೆಯರ ಬಗ್ಗೆ ಹಗುರವಾಗಿ ಮಾತಾಡುವುದನ್ನು ಕಾಯಕ ಮಾಡಿದ್ದಾರೆ ಎಂದರು.

ಗ್ಯಾರಂಟಿ ಯೋಜನೆಗಳು ಮಹಿಳೆಯರನ್ನು ಸ್ವಾವಲಂಬಿಯಾಗಿಸಿವೆ. ಪ್ರತಿನಿತ್ಯ 3-4 ಲಕ್ಷ ಹೆಣ್ಣು ಮಕ್ಕಳು ಉಚಿತ ಬಸ್‌‍ ಪ್ರಯಾಣ ಮಾಡುತ್ತಿದ್ದಾರೆ. ಗಾರ್ಮೆಂಟ್‌್ಸ ಮಹಿಳೆಯರು, ಕೂಲಿ ಕಾರ್ಮಿಕರು ಉಚಿತ ಬಸ್‌‍ ಪ್ರಯಾಣ ಮಾಡುತ್ತಿದ್ದಾರೆ. ಬಡ ಹೆಣ್ಣು ಮಕ್ಕಳ ಹಗುರ ಮಾತನ್ನು ದೇಶದ ಎಲ್ಲ ಮಹಿಳೆಯರು ಖಂಡಿಸಬೇಕು ಎಂದು ಹೇಳಿದರು.

ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಮನುಸತಿಯ ಗಾಳಿಯ ಸೋಕಿದೆ. ತಮ ಪಕ್ಷದಲ್ಲಿನ ಜಾತ್ಯಾತೀತ ಪದವನ್ನು ತೆಗೆದು ಹಾಕಬೇಕು. ಹಿಂದಿನ ಚುನಾವಣೆಯಲ್ಲಿ ಸುಮಲತಾ ಅಂಬರೀಶ್‌ ಅವರ ಬಗ್ಗೆ ಬಹಳ ಹಗುರವಾಗಿ ಮಾತಾಡಿದರು. ಕುಮಾರಣ್ಣ ಅವರು ಮಹಿಳೆಯರ ದಾರಿ ತಪ್ಪಿಸುತ್ತಿದ್ದಾರೆ ಎಂದು ತಿಳಿಸಿದರು.

ತಮ ಹೇಳಿಕೆಗೆ ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ. ಅದಕ್ಕೆ ನಮ ಒಪ್ಪಿಗೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ ಅವರು, ಎಚ್‌.ಡಿ. ಕುಮಾರಸ್ವಾಮಿ ಅವರ ವಿರುದ್ಧ ಅವರ ವಿರುದ್ಧ ಹೋಬಳಿ ಮತ್ತು ತಾಲೂಕು ಮಟ್ಟದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಮೈಸೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಹೇಳಿ ಓಡಿ ಹೋಗಿದ್ದಾರೆ. ಯಾವ ಮುಖ ಇಟ್ಟುಕೊಂಡು ಮೈಸೂರಿಗೆ ಬಂದಿದ್ದರು. ಅವರಿಗೆ ಬಡ ಕುಟುಂಬಗಳ ಮತ ಕೇಳುವ ಹಕ್ಕಿಲ್ಲ. ಇನ್ನೆಷ್ಟು ವರ್ಷಗಳು ದೇಶ, ರಾಮನ ಹೆಸರಿನಲ್ಲಿ ಮತ ಕೇಳುತ್ತೀರಿ? ಎಂದು ವಾಗ್ದಾಳಿ ನಡೆಸಿದರು.

ಮಾಜಿ ಮೇಯರ್‌ ಮೋದಾಮಣಿ ಮಾತನಾಡಿ, ಮಹಿಳೆಯರು ಎಲ್ಲಿ ದಾರಿ ತಪ್ಪಿದ್ದಾರೆ? ಈ ಹೇಳಿಕೆ ನೀಡಲು ನಿಮಗೆ ಏನು ಅರ್ಹತೆ ಇದೆ. ಹೀಗೆ ಮಾತಾಡಲು ನಿಮಗೆ ಅನುಮತಿ ಕೊಟ್ಟವರು ಯಾರು? ಈ ರೀತಿ ಮಾತಾಡುವುದನ್ನು ನಿಲ್ಲಿಸುವಂತೆ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರ ಕಾಂಗ್ರೆಸ್‌‍ ಅಧ್ಯಕ್ಷ ಆರ್‌. ಮೂರ್ತಿ, ಪುಷ್ಪವಲ್ಲಿ, ಮೋದಾಮಣಿ, ಸುಶೀಲಾ ಕೇಶವಮೂರ್ತಿ, ಲತಾ ಮೋಹನ್‌‍, ರೇಖಾ ಶ್ರೀನಿವಾಸ್‌‍, ಶುಭದಾಯಿನಿ. ಶಾರದಾ ಸಂಪತ್. ಡಾ ಸುಜಾತಾ ರಾವ್  ಮುಂತಾದವರಿದ್ದರು.