ಮನೆ ಸ್ಥಳೀಯ ದ್ವೇಷದ ರಾಜಕಾರಣ ಮಾಡುತ್ತಿರುವ ಹೆಚ್‌ಡಿಕೆ ಶಾಸಕ ಕೆ.ಹರೀಶ್ ಗೌಡ ಆರೋಪ: ಜಮೀರ್ ತಪ್ಪು ಮಾಡಿಲ್ಲ

ದ್ವೇಷದ ರಾಜಕಾರಣ ಮಾಡುತ್ತಿರುವ ಹೆಚ್‌ಡಿಕೆ ಶಾಸಕ ಕೆ.ಹರೀಶ್ ಗೌಡ ಆರೋಪ: ಜಮೀರ್ ತಪ್ಪು ಮಾಡಿಲ್ಲ

0

ಮೈಸೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ ಕೆ. ಹರೀಶ್ ಗೌಡ ಆರೋಪಿಸಿದರು. ಜೆಡಿಎಸ್ ಪಕ್ಷದಿಂದ ಹೊರಹಾಕಿದವರನ್ನೆಲ್ಲಾ ಈಗ ಟಾರ್ಗೆಟ್ ಮಾಡುತ್ತಿರುವುದು ವಿಷಾದನೀಯ ಎಂದು ಅವರು ಹೇಳಿದರು. ನಗರದ ಅಮೃತೇಶ್ವರ ದೇವಸ್ಥಾನದಲ್ಲಿ RCB ಗೆ ಐಪಿಎಲ್ ಫೈನಲ್ ನಲ್ಲಿ ಜಯವಾಗಲೆಂದು ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.

“ಮಾಗಡಿ ಬಾಲಕೃಷ್ಣ, ಚಲುವರಾಯಸ್ವಾಮಿ, ಜಮೀರ್ ಅಹಮದ್ – ಈ ಮೂವರ ಮೇಲೂ ಎಚ್.ಡಿ. ಕುಮಾರಸ್ವಾಮಿಗೆ ವೈಯಕ್ತಿಕ ಕೋಪವಿದೆ. ಜಮೀರ್ ಯಾವುದೇ ತಪ್ಪು ಮಾಡಿಲ್ಲ. ಈಗ ಹಗರಣ ನಡೆದಿದೆಯೆಂದು ಹೇಳುವವರು ಆಗ ಅವನ್ನು ತಡೆದು ನಿಲ್ಲಿಸಬೇಕಿತ್ತು. ತಪ್ಪು ನಡೆದ ನಂತರ ಯಾರನ್ನಾದರೂ ಟಾರ್ಗೆಟ್ ಮಾಡುವ ಕ್ರಮ ಸರಿಯಲ್ಲ,” ಎಂದು ಅವರು ತೀವ್ರ ಟೀಕೆ ಮಾಡಿದರು. “ಕುಮಾರಸ್ವಾಮಿಯವರು ಮೊದಲಿನಿಂದಲೂ ‘ಹಿಟ್ ಅಂಡ್ ರನ್’ ಶೈಲಿಯ ರಾಜಕೀಯ ಮಾಡುತ್ತಿದ್ದಾರೆ,” ಎಂದು ಹರೀಶ್ ಗೌಡ ವಾಗ್ದಾಳಿ ನಡೆಸಿದರು.

ಸಿಎಂ ಬದಲಾವಣೆ ಸಾಧ್ಯವಿಲ್ಲ, ಸಚಿವ ಸಂಪುಟದಲ್ಲಿ ಬದಲಾವಣೆ ಸಾಧ್ಯ: ರಾಜ್ಯ ರಾಜಕಾರಣದ ಬಗ್ಗೆ ಮಾತನಾಡಿದ ಅವರು, “ಸಿಎಂ ಬದಲಾವಣೆ ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ. ಆದರೆ ಸಚಿವ ಸಂಪುಟದಲ್ಲಿ ಹೊಸಬರಿಗೆ ಅವಕಾಶ ಸಿಗಬಹುದು. ಮೈಸೂರಿನ ಹಿರಿಯ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಸಿಗಬೇಕಾಗಿದೆ. ನಾನು ಸಚಿವ ಸ್ಥಾನಕ್ಕೆ ಆಸಕ್ತನಲ್ಲ. ಆದರೆ ದೇವರು ಮತ್ತು ಜನರ ಆಶೀರ್ವಾದ ಇದ್ದರೆ ಮುಂದಿನ ಕಾಲದಲ್ಲಿ ನೋಡಬಹುದು,” ಎಂದರು.

ಕಮಲ್ ಹಾಸನ್ ಅಜ್ಞಾನಿ ಮತ್ತು ಅಯೋಗ್ಯ: ಕನ್ನಡ ಭಾಷೆಯ ಕುರಿತಾಗಿ ನಟ ಕಮಲ್ ಹಾಸನ್ ನೀಡಿದ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿ ಹರೀಶ್ ಗೌಡ, “ಅವರು ಒಬ್ಬ ಅಜ್ಞಾನಿ ಮತ್ತು ಅಯೋಗ್ಯ. ಅವರಿಗೆ ಕನ್ನಡದ ಇತಿಹಾಸ ಗೊತ್ತಿಲ್ಲ. ಕನ್ನಡ ಭಾಷೆಯ ಬಗ್ಗೆ ಅವರ ಮನದಲ್ಲಿ ಅಸಾಧಾರಣ ತಿಳುವಳಿಕೆ ಇಲ್ಲ. ಅವರು ಕನ್ನಡಿಗರಿಗಿಂತ ಕ್ಷಮೆ ಕೇಳಬೇಕು. ಕನ್ನಡಿಗರ ಆತ್ಮಾಭಿಮಾನಕ್ಕೆ ಧಕ್ಕೆ ತರುವ ವ್ಯಕ್ತಿಯೆಂದರೆ ಅದೇ ಕಮಲ್ ಹಾಸನ್,” ಎಂದು ಅವರು ಹೇಳಿದರು.