ಮನೆ ರಾಜ್ಯ ರಾಜ್ಯ ರಾಜಕಾರಣಕ್ಕೆ ಹೆಚ್‌ಡಿಕೆ ವಾಪಸ್ – ʻDaddy is homeʼ ಎಐ ವಿಡಿಯೋ ರಿಲೀಸ್‌..!

ರಾಜ್ಯ ರಾಜಕಾರಣಕ್ಕೆ ಹೆಚ್‌ಡಿಕೆ ವಾಪಸ್ – ʻDaddy is homeʼ ಎಐ ವಿಡಿಯೋ ರಿಲೀಸ್‌..!

0

ಬೆಂಗಳೂರು/ಮಂಡ್ಯ : 2028 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜ್ಯದ ಹಲವು ಘಟಾನುಘಟಿ ನಾಯಕರು ಈಗಿನಿಂದಲೇ ತಯಾರಿ ಶುರು ಮಾಡಿದ್ದಾರೆ. ರಾಜ್ಯ ರಾಜಕಾರಣಕ್ಕೆ ಹೆಚ್‌ಡಿಕೆ ವಾಪಸ್..?! – ಅಭಿಮಾನಿಗಳಿಂದ ʻDaddy is homeʼ ಎಐ ವಿಡಿಯೋ ರಿಲೀಸ್‌..! ಯಾವ ಕ್ಷೇತ್ರದಲ್ಲಿ ತಾವು ಚುನಾವಣೆಗೆ ಸ್ಪರ್ಧಿಸಿದ್ರೆ ಒಳಿತು? ರಣತಂತ್ರ ಹೇಗಿರಬೇಕು? ಎಂಬ ಬಗ್ಗೆ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿವೆ.

ಈ ಸಾಲಿನಲ್ಲಿ ಈಗಾಗಲೇ ಬಿಜೆಪಿಯ ಪ್ರತಾಪ್​​ ಸಿಂಹ, ಸುಮಲತಾ ಅಂಬರೀಷ್‌ ಹಾಗೂ ನಿಖಿಲ್‌ ಕುಮಾರಸ್ವಾಮಿ ಅವರ ಹೆಸರು ಕೇಳಿಬರ್ತಿದೆ. ಇದರ ಜೊತೆಗೆ ಹೆಚ್‌.ಡಿ ಕುಮಾರಸ್ವಾಮಿ ಅವರು ಮತ್ತೆ ರಾಜ್ಯ ರಾಜಕೀಯಕ್ಕೆ ರಿಟರ್ನ್‌ ಆಗ್ತಾರೆ ಅನ್ನೋ ದೊಡ್ಡ ಸುಳಿವು ಕೂಡ ಸಿಕ್ಕಿದೆ.

ಇತ್ತೀಚೆಗಷ್ಟೇ ಡಿಸಿಎಂ ಡಿಕೆ ಶಿವಕುಮಾರ್‌, ಜೆಡಿಎಸ್‌ ಬಿಜೆಪಿಯೊಂದಿಗೆ ವೀಲಿನವಾಗಲಿದೆ, ಕರ್ನಾಟಕದಲ್ಲಿ 2 ಪಕ್ಷಗಳು ಇರಲಿದೆ ಎಂಬ ಮಾತುಗಳನ್ನಾಡಿದ್ದರು. ಇದರ ಬೆನ್ನಲ್ಲೇ ಆಕ್ಟೀವ್‌ ಆಗ್ತಿರುವ ಕುಮಾರಸ್ವಾಮಿ ಅವರು ಮತ್ತೆ ರಾಜ್ಯ ರಾಜಕಾರಣದತ್ತ ಚಿತ್ತ ಹರಿಸಿದ್ದಾರೆ ಎನ್ನಲಾಗಿದೆ.

2028 ರ ಮಹಾಕದನಕ್ಕೆ ದೆಹಲಿ ಮಟ್ಟದಲ್ಲೇ ರಣತಂತ್ರ ರೂಪಿಸಲಾಗ್ತಿದ್ದು, ಹೆಚ್‌ಡಿಕೆ ಎಂಟ್ರಿಗೆ ಹೈಕಮಾಂಡ್‌ ಕೂಡ ಒಪ್ಪಿಗೆ ಸೂಚಿಸಿದೆ ಎನ್ನುತ್ತಿವೆ ಪಕ್ಷದ ಆಪ್ತ ಮೂಲಗಳು. ಇದಕ್ಕೆ ಅಭಿಮಾನಿಗಳು ರಿಲೀಸ್‌ ಮಾಡಿರುವ ಎಐ ವಿಡಿಯೋ ಪುಷ್ಟಿ ನೀಡಿದಂತಿದೆ.

ʻಟಾಕ್ಸಿಕ್‌ʼ ಸಿನಿಮಾ ಟೀಸರ್‌ ಮಾದರಿಯಲ್ಲೇ ಹೆಚ್‌ಡಿಕೆ ಕುರಿತು ಅಭಿಮಾನಿಗಳು ʻಡ್ಯಾಡಿ ಈಸ್ ಹೋಮ್ʼ ಎಐ ಟೀಸರ್ ರಿಲೀಸ್‌ ಮಾಡಿದ್ದಾರೆ. ಈ ಮೂಲಕ ಮತ್ತೆ ರಾಜ್ಯ ರಾಜಕಾರಣ ಎಂಟ್ರಿಯ ಸುಳಿವು ಕೊಟ್ಟಿದ್ದು, ಹೊಸ ದಾಳ ಉರುಳಿಸಿದ್ದಾರೆ. ಹಾಗಿದ್ರೆ ಕುಮಾರಸ್ವಾಮಿ 2027ರ ವರ್ಷಾರಂಭದಲ್ಲಿ ಬರ್ತಾರಾ? ಅಥವಾ 2026ರಲ್ಲೇ ರಾಜ್ಯ ರಾಜಕೀಯ ಪ್ರವೇಶ ಮಾಡ್ತಾರಾ ಎಂಬುದನ್ನು ಕಾದುನೋಡಬೇಕಿದೆ.