ಬೆಂಗಳೂರು: ಈಶ್ವರಪ್ಪ ಬಗ್ಗೆ ಕಾಮೆಂಟ್ ಮಾಡುವಷ್ಟು ದೊಡ್ಡಸ್ತಿಕೆ ತನಗಿಲ್ಲ ಎಂದು ಸಿ.ಟಿ ರವಿ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳು ಈಶ್ವರಪ್ಪ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಅವರು ಈಶ್ವರಪ್ಪ ನಿಲುವು ಮತ್ತು ತನಗೆ ಸಂಬಂಧವಿಲ್ಲವೆಂಬಂತೆ ಮಾತಾಡಿದರು.
ಈಶ್ವರಪ್ಪ ಕಳೆದ ನಾಲ್ಕೂವರೆ ದಶಕಗಳಿಂದ ಪಕ್ಷಕ್ಕಾಗಿ ದುಡಿಯುತ್ತಾ ಬಂದಿದ್ದಾರೆ ಮತ್ತು ಬಿಎಸ್ ಯಡಿಯೂರಪ್ಪನವರ ಒಡನಾಡಿ, ಪಕ್ಷದ ರಾಜ್ಯಾಧ್ಯಕ್ಷನಾಗಿ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಅವರು ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.
ಮುಂದುವರಿದು ಮಾತಾಡಿದ ಅವರು, ಸದ್ಯಕ್ಕೆ ತಮ್ಮ ಗುರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಎನ್ ಡಿಎ ಮೈತ್ರಿಕೂಟಕ್ಕೆ ರಾಜ್ಯದ ಎಲ್ಲ 28 ಸ್ಥಾನಗಳನ್ನು ಗೆಲ್ಲುವುದರ ಮೇಲೆ ನೆಟ್ಟಿದೆ ಎಂದು ಹೇಳಿದರು.














