ಮಳವಳ್ಳಿ:ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸವಾರ ಸಾವನ್ನಪ್ಪಿದ್ದು ಮತ್ತೊಬ್ಬನಿಗೆ ಗಂಭೀರ ಗಾಯಗೊಂಡಿರುವ ಘಟನೆ ಕಿರುಗಾವಲು ಗ್ರಾಮದಲ್ಲಿ ನಡೆದಿದೆ.
ಕಿರುಗಾವಲು ಗ್ರಾಮ ನಿವಾಸಿ ರಾಮಸ್ವಾಮಿ(42) ಮೃತಪಟ್ಟ ದುರ್ದೈವಿ.ಮಿಕ್ಕರೆ ಗ್ರಾಮದ ರವಿ ಗಾಯಾಳು.
ಉಪ್ಪುಲಗೆರೆ ಕೊಪ್ಪಲು ಗ್ರಾಮದ ತನ್ನ ಹೆಂಡತಿ ಮನೆಗೆ ಹೋಗುವ ವೇಳೆ ಕಿರುಗಾವಲು ಸಂತೆ ಮಾಳದಿಂದ ಮಿಕ್ಕರೆ ಕಡೆಗೆ ಹೋಗುತ್ತಿದ್ದ ಬೈಕ್ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಶವವನ್ನು ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಯಿತು.ಸ್ಥಳಕ್ಕೆ ಕಿರುಗಾವಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
Saval TV on YouTube