ಮನೆ ಆರೋಗ್ಯ ತಲೆನೋವು: ಬಾಗ 3

ತಲೆನೋವು: ಬಾಗ 3

0

ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು:-

Join Our Whatsapp Group

  ★  ತಲೆನೋವು ಬಹಳ ತೀವ್ರವಾಗಿದ್ದು ಆಗಿಂದಾಗ ಬರುತ್ತಿರುವಾಗ ತಲೆನೋವಿನ ಜೊತೆ ಹೊಟ್ಟೆತೊಳಸು, ವಾಂತಿ ಯಿದ್ದರೆ.

 ★ಮತ್ಯಾವುದೋ ತೀರ ರೋಗ ಇದೆ ಯೆಂಬ ಕಾತುರ, ಚಿಂತೆಗಳಿದ್ದರೆ.

 ★ತಲೆನೋವು ಆಗಿಂದಾಗ ಬಿಡದೆ ಬರುತ್ತಾ, ದೃಷ್ಟಿ ಮಬ್ಬಾಗುತ್ತಿದ್ದರೆ,ಇಂತಹ ಸಂದರ್ಭಗಳಲ್ಲಿ ವೈದ್ಯರನ್ನು ತಪ್ಪದೇ ನೋಡಬೇಕು.

ಡಾಕ್ಟರ್ ಏನು ಮಾಡುತ್ತಾರೆ:-

  ★ ರೋಗಿ ಕೆಲಸದ ಒತ್ತಡದಿಂದ ಗಲಿಬಿಲಿಗೊಂಡಿದ್ದಾನೆ ಯೇ ಅಥವಾ ಭಾವೋದ್ರೇಕದ ಯಾವುದಾದರೂ ಒತ್ತಡಕ್ಕೊಳಗಾಗುತ್ತಿರುವನೇ, ಎಂಬ ವಿಷಯವನ್ನು ವಿಚಾರಿಸುತ್ತಾರೆ.ಹಾಗೆಯೇ ರೋಗಿಯ ಜೀವನಶೈಲಿ ಕುರಿತು ವಿವರಗಳನ್ನು ಸಂಗ್ರಹಿಸುವ ಮೂಲಕ,ತಕ್ಕ ಕಾರಣಗಳನ್ನು ಅನ್ವೇಷಿಸುತ್ತಾರೆ.

     ★ಮುತ್ತಾವುದಾದರೂ ತೀವ್ರ ರೋಗವಿರಬಹುದೆಂಬ  ಅನುಮಾನಕ್ಕೆಡೆ ಮಾಡುವ ಸಂದರ್ಭದಲ್ಲಿ ಮತ್ತೆ ಕೆಲವು ಪರೀಕ್ಷೆಗಳನ್ನು ಮಾಡಲಾಗುತ್ತದೆ.

    ★  ರೋಗಿಯ ಚಿಕಿತ್ಸೆಗಾಗಿ, ಸೈಕ್ಲಿಯಾಟ್ರಿಸ್ಟ್ ಶಿಫಾರಸನ್ನು ಮಾಡಬಹುದು.

 ನಿವಾರಣೋಪಾಯಗಳು :-

  ★ ತಲೆನೋವು ಕಳವಳದಿಂದ ಅಥವಾ ಕೆಲಸದೊತ್ತಡದಿಂದ ಬರುತ್ತಿದ್ದರೆ, ಜೀವನ ವಿಧಾನದಲ್ಲಿ ಸ್ವಲ್ಪ ಮಟ್ಟಿನ ಮಾರ್ಪಾಡುಗಳನ್ನು ಮಾಡಿಕೊಳ್ಳುವ ಮೂಲಕ, ಪದೇ ಪದೇ ಬರದಂತೆ ನೋಡಿಕೊಳ್ಳಬಹುದು.

    ★ಧಾರಾಳವಾಗಿ ತಾಜಾಗಾಳಿ ಪಡೆಯುವ ಮೂಲಕ,ವ್ಯಾಯಾಮ ಮಾಡುವ ಮೂಲಕ ಕೂಡಾ, ಈ ತಲೆನೋವು ಆಗಾಗ ಬರದಂತೆ ನೋಡಿಕೊಳ್ಳಬಹುದು.

 ಪದೇ ಪದೇ ತಲೆನೋವು ಬರುತ್ತಿರುವಾಗ,ಅದು ಯಾವ ಕಾರಣದಿಂದ ಬರುತ್ತಿದೆಯೆಂಬ ಕಂಡುಹಿಡಿದು, ಈ ಕಾರಣಗಳಿಂದ ದೂರವಿರುವ ಮೂಲಕ, ಅದು ಬರದಂತೆ ನೋಡಿಕೊಳ್ಳಬಹುದು..

    ★ದೀರ್ಘ ಉಸಿರನ್ನು ಒಳಗೆಳೆದುಕೊಂಡು  ಆಕಳಿಸಿ, ಇದು ರಿಲ್ಯಾಕ್ಸೇಷನ್ ಗೆ ಸಂಬಂಧಿಸಿದ ಒಂದು ವ್ಯಾಯಾಮ.

    ★ಎರಡು ಕೈಗಳ ಹಿಡಿಗಳನ್ನೂ ಗಟ್ಟಿಯಾಗಿ ಬಿಗಿದು ಉಸಿರನ್ನು ದೀರ್ಘವಾಗಿ ಒಳಗೆಳೆದುಕೊಳ್ಳಬೇಕು.ಒಳಗೆಳೆದ ಸ್ವಲ್ಪ ಹೊತ್ತು ಹಾಗೆಯೇ ಹಿಡಿದಿಡಬೇಕು.

    ★ ಈಗ ಒಳಗಿರುವ ಗಾಳಿಯೆಲ್ಲವನ್ನೂ ನಿಧಾನವಾಗಿ ಹೊರಗೆ ಬಿಡಬೇಕು, ಇಡೀ ಶರೀರ ಈ ವೇಳೆಗೆ ಸಡಿಲವಾಗುತ್ತದೆ.

ಹಿಂದಿನ ಲೇಖನವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ, ರಾಜೀನಾಮೆ ನೀಡುವವರೆಗೂ ಹೋರಾಟ: ಪ್ರತಿಪಕ್ಷ ನಾಯಕ ಆರ್‌.ಅಶೋಕ
ಮುಂದಿನ ಲೇಖನಸಿಎಂ ಬದಲಾವಣೆ ಒಪ್ಪಂದವೇ ಆಗಿಲ್ಲ; ಬದಲಾವಣೆಯೂ ಆಗಲ್ಲ: ದಿನೇಶ್ ಗುಂಡೂರಾವ್