ಮನೆ ಆರೋಗ್ಯ ತಲೆನೋವು : ಭಾಗ 4

ತಲೆನೋವು : ಭಾಗ 4

0

 ನಡಿಗೆಯ ಮೂಲಕ :-

 ★ಟೆನ್ಶನ್ ತಲೆನೋವು ಪ್ರಾರಂಭವಾದಾಗ ನಿಮ್ಮ ಮನೆಯ ಸುತ್ತ ಇಲ್ಲವೇ ಮನೆಯ ಒಳಗೇ ಆದರೂ ವೇಗವಾಗಿ ಅತ್ತಿತ್ತ ನಡೆಯಿರಿ. ನಡೆಯುತ್ತಿರುವಾಗ ಶರೀರದಲ್ಲಿ ನೋವನ್ನು ಸಹಜಸಿದವಾಗಿ ನಿವಾರಿಸುವ ಎಂಡಾರ್ಫಿನ್ ಎಂಬ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ. ಇವುಗಳಿಂದ ತಲೆನೋವು ಕಡಿಮೆಯಾಗುವ ಸಂಭವವಿದೆ. ನಡಿಗೆಯ ಮೂಲಕ ಶರೀರದಲ್ಲಿನ ಟೆನ್ಷನ್ ಇಲ್ಲವಾಗುವುದೆಂದೂ ಕೆಲವರು ಹೇಳುತ್ತಾರೆ.

Join Our Whatsapp Group

    ★ಆದರೆ ಒಂದು ನಡಿಗೆಯಿಂದ ತಲೆನೋವು ಕಡಿಮೆಯಾಗುವುದು ಕೆಲವರ ವಿಷಯದಲ್ಲಿ ಮಾತ್ರ. ಮತ್ತೆ ಕೆಲವರಿಗೆ ನಡೆಯುವುದರಿಂದ ತಲೆನೋವು ಹೆಚ್ಚಾಗುವ ಸಂಭವವು ಇರುತ್ತದೆ ನೀವು ಈ ಎರಡನೆಯ ಬಗ್ಗೆ ಯವರಾದರೆ ಮಾತ್ರ ತಲೆನೋವಿರುವಾಗ ನಡೆಯುವ ಪ್ರಯತ್ನ ಮಾಡಬೇಡಿ.

    ★ಈ ಭಂಗಿಯನ್ನು ಉತ್ತಮಪಡಿಸಿಕೊಳ್ಳಿ!

  ★ ನಾವು ಕೂರುವ,ನಿಲ್ಲುವ ಶರೀರ ಭಂಗಿಗಳು ಸರಿಯಾಗಿರದಿದ್ದರೆ,ಶರೀರದ ಮೇಲೆ ಭಾರ ಬಿದ್ದು ಅದು ತಲೆನೋವಿಗೆ ದಾರಿ ಮಾಡುವ ಅವಕಾಶವಿದೆ.ಅದಕ್ಕಾಗಿ ಈ ಕೇಳಗಿನ ಎಚ್ಚರಿಕೆಗಳನ್ನು ವಹಿಸುವುದು ಒಳ್ಳೆಯದು :

   ★ ಗಂಟೆಗಟ್ಟಲೆ ಕುರ್ಚಿಯಲ್ಲಿ ಕೂತು ಕೆಲಸ ಮಾಡುವವರು ಯಾವಾಗಲೂ ಒಂದೇ ಭಂಗಿಯಲ್ಲಿ ಕೂರಬಾರದು ಪ್ರತಿ 20 ನಿಮಿಷಗಳಿಗೊಮ್ಮೆ ಭಂಗಿಯನ್ನು ಬದಲಾಯಿಸುತ್ತಿರಬೇಕು. ಹಾಗೆ ಮಾಡುವುದರಿಂದ ಶರೀರದಲ್ಲಿ ರಕ್ತ ಪೂರೈಕೆ ಸರಾಗವಾಗಿ ನಡೆಯುತ್ತದೆ.

     ★ಬೆನ್ನು ಭಾಗಿಸಿ ಗೂನ್ ಬೆನ್ನು ಮಾಡಿಕೊಂಡು ಕೂರಬಾರದು, ಶರೀರವನ್ನು ನೆಟ್ಟಗಿರಬೇಕು.

   ★ ಮುಖ್ಯವಾಗಿ ಕಂಪ್ಯೂಟರ್ ಗಳ ಮುಂದೆ ಕುಳಿತು ಕೆಲಸ ಮಾಡುವವರು ಈ ಎಚ್ಚರಿಕೆಯನ್ನು ತಪ್ಪದೇ ಪಾಲಿಸಬೇಕು.

   ★  ಆಹಾರದ ಗಾಳಿ, ಬಿಸಿಲು, ಬೆಳಗಿನಿಂದ ಏನು ತಿನ್ನದೆ ನೀರನ್ನು ಕುಡಿದಿಲ್ಲವೆಂದುಕೊಳ್ಳಿ.  ಮಧ್ಯಾಹ್ನದ ವೇಳೆಗೆ ನಿಮಗೆ ತಲೆನೋವು ಖಂಡಿತ ಬರುತ್ತದೆ.ಇದಕ್ಕೊಂದು ಕಾರಣವಿದೆ.

    ★  ಹಸಿವಾದಾಗ ನಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಕಡಿಮೆಯಾಗಿ ತಲೆನೋವು ಬರುತ್ತದೆ ಇಂತಹವರು ಸಮಯಕ್ಕೆ ಸರಿಯಾಗಿ ಊಟ ಮಾಡುವುದು ನಡುನಡುವೆ ಏನಾದರೂ ತಿನ್ನುವುದು ಒಳ್ಳೆಯದು.

     ★ಆಹಾರದಂತೆಯೇ ಈ ಗಾಳಿ ಕೂಡಾ ತಲೆನೋವಿಗೆ ಕಾರಣವಾಗುತ್ತಿರುತ್ತದೆ. ಉದಾಹರಣೆಗೆ ಮುಸುಕು ಹಾಕಿಕೊಂಡು ನಿದ್ರೆ ಮಾಡಿದ ರೆಂದುಕೊಳ್ಳಿ.ಮಧ್ಯದಲ್ಲಿ ನಿಮಗೆ ತಲೆನೋವುದ ಬರುವ ಸಾಧ್ಯತೆ ಯಿದೆ 

     ★ಇದಕ್ಕೆ ಕಾರಣ ನಿಮಗೆ ಸಾಕಷ್ಟು ಆಮ್ಲಜನಕ ದೊರಕದಿರುವುದು ಮಲಗಿದಾಗ ಬಹಳ ಹೊತ್ತು ಮುಸುಕು ಹಾಕಿಕೊಳ್ಳದಿರುವುದೇ ಇದಕ್ಕೆ ಪರಿಹಾರ.

    ★ಇದೇ ರೀತಿಯಾಗಿ ಬಿಸಿಲು ಕೂಡ ನಮಗೆ ತಲೆನೋವು ತರುತ್ತದೆ. ನೀವು ಬಹಳ ಹೊತ್ತು ಹುಡು ಬಿಸಿಲಿನಲ್ಲಿದ್ದರೆ.ಆ ಶಾಖಕ್ಕೆ ನಿಮ್ಮ ಮೆದುಳಿನ ಸುತ್ತಲೂ ಇರುವ ದ್ರವ ಖಾಲಿಯಾಗಿ ಅದು ತಲೆನೋವಿಗೆ ಕಾರಣವಾಗುತ್ತದೆ.

     ★ಇಂತಹ ಬಲೆನೋವು ಬರದಿರಲು ಮಧ್ಯಾಹ್ನ 11ರಿಂದ3 ರವರೆಗೆ ಬಿಸಿಲಿನಲ್ಲಿ ಓಡಾಡುತ್ತಿರುವುದೇ ಒಳ್ಳೆಯದು. ಒಂದು ವೇಳೆ ತಿರುಗಾಡಲೇ ಬೇಕಾದ ಪರಿಸ್ಥಿತಿಯಿದ್ದಲ್ಲಿ ಟೋಪಿ ಹಾಕಿಕೊಳ್ಳುವುದು ಒಳ್ಳೆಯದು. ಅಷ್ಟೇ ಅಲ್ಲದೆ ಪುಷ್ಕಳವಾಗಿ ನೀರನ್ನು ಇಲ್ಲವೇ ತಂಪು ಪಾನೀಯಗಳನ್ನು ಕುಡಿಯುತ್ತಿರಬೇಕು.

ಹಿಂದಿನ ಲೇಖನಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪಡಿತರ ಅಕ್ಕಿ ವಶ
ಮುಂದಿನ ಲೇಖನಬೆಂಗಳೂರು: ಆರೋಪಿ ಅಲ್ಲದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಪಿಎಸ್‌ ಐಗೆ 2 ಲಕ್ಷ ರೂ. ದಂಡ