ಮನೆ ಆರೋಗ್ಯ ಶುಂಠಿಯ ಆರೋಗ್ಯ ಲಾಭಗಳು

ಶುಂಠಿಯ ಆರೋಗ್ಯ ಲಾಭಗಳು

0

ಶುಂಠಿಯಲ್ಲಿರುವ ಆರೋಗ್ಯದ ಲಾಭಗಳನ್ನು ಮರೆಯುವ ಹಾಗಿಲ್ಲ. ಮಳೆಗಾಲದಲ್ಲಿ ಕಾಡುವ ಶೀತ, ಕೆಮ್ಮು, ಜ್ವರದಂತಹ ಸಮಸ್ಯೆಯನ್ನು ಬಹಬೇಗನೇ ಕಡಿಮೆ ಮಾಡುವ ಎಲ್ಲಾ ಗುಣಲಕ್ಷಣ ಶುಂಠಿಯಲ್ಲಿದೆ.

ಅಲ್ಲದೆ, ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸಿ, ಕೆಟ್ಟುಹೋದ ಹೊಟ್ಟೆಯನ್ನು ಸರಿಪಡಿಸಿ ವಾಕರಿಕೆ ವಾಂತಿ, ಹೊಟ್ಟೆ ಉಬ್ಬರ ಹೀಗೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಶುಂಠಿ ಪರಿಹಾರ ನೀಡುತ್ತದೆ.

ಶೀತ, ಕೆಮ್ಮು:

ಸಾಮಾನ್ಯವಾಗಿ ಮಳೆಗಾಲದ ಸಂದರ್ಭದಲ್ಲಿ ಈ ನೆಗಡಿ, ಕೆಮ್ಮು, ಜ್ವರ ಜಾಣಿಸಿಕೊಳ್ಳುತ್ತದೆ. ಇದನ್ನು ಹೋಗಲಾಡಿಸಲು ಒಂದು ಚಮಚ ಜೇನುತುಪ್ಪ, ಇಷ್ಟೇ ಪ್ರಮಾಣದಲ್ಲಿ ಹಸುವಿನ ತುಪ್ಪ ಹಾಗೂ ಒಣ ಶುಂಠಿ ಪುಡಿ ಎಲ್ಲವನ್ನೂ ಮಿಶ್ರಣ ಮಾಡಿ, ದಿನದಲ್ಲಿ ಒಮ್ಮೆಯಾದರೂ ಸೇವನೆ ಮಾಡುತ್ತಾ ಬಂದರೆ, ಪರಿಹಾರವನ್ನು ಕಂಡು ಕೊಳ್ಳಬಹುದು. ಮುಖ್ಯವಾಗಿ ಎದೆಯ ಭಾಗದಲ್ಲಿ ಕಂಡು ಬರುವ ಕಫವನ್ನು ಕರಗಿಸಿ, ಕೆಮ್ಮು, ಶೀತವನ್ನು ದೂರ ಮಾಡಬಹುದು.

ಹೊಟ್ಟೆಕೆಟ್ಟು ಹೋದಾಗ:

ಒಂದು ವೇಳೆ ಸಡನ್ ಆಗಿ, ಇಂತಹ ಸಮಸ್ಯೆ ಎದುರಾದರೆ, ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಒಂದು ಟೀ ಚಮಚ ಆಗುವಷ್ಟು ಒಣ ಶುಂಠಿ ಪುಡಿಯನ್ನು ಮಿಕ್ಸ್ ಮಾಡಿ, ದಿನದಲ್ಲಿ ಎರಡು ಮೂರು ಬಾರಿ ಕುಡಿಯುತ್ತಾ ಬಂದರೆ, ಈ ಸಮಸ್ಯೆಗೆ ನೈಸರ್ಗಿಕವಾಗಿ ಪರಿಹಾರ ಕಂಡುಕೊಳ್ಳಬಹುದು.

ಅಜೀರ್ಣ ಹಾಗೂ ಮಲಬದ್ಧತೆ:

ಒಂದು ಚಮಚ ಒಣ ಶುಂಠಿ ಪುಡಿ, ಚಿಟಿಕೆಯಷ್ಟು ಹಿಂಗು ಹಾಗೂ ಸ್ವಲ್ಪ ಕಲ್ಲು ಉಪ್ಪು ಬೆರೆಸಿಕೊಂಡು ಒಂದು ಲೋಟ ಉಗುರುಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು -ಮೂರು ದಿನಗಳವರೆಗೆ ಕುಡಿಯುತ್ತಾ ಬಂದರೆ, ಈ ಸಮಸ್ಯೆ ದೂರವಾಗುತ್ತದೆ.

ಗ್ಯಾಸ್ಟ್ರಿಕ್ ಸಮಸ್ಯೆ ಕಂಡು ಬಂದರೆ

ಒಂದು ಚಮಚ ಓಂಕಾಳುಗಳನ್ನು ಮತ್ತು ಸಣ್ಣ ತುಂಡು ಒಣ ಶುಂಠಿಯನ್ನು ಒಟ್ಟಿಗೆ ಬೆರೆಸಿ ಚೆನ್ನಾಗಿ ಪುಡಿಮಾಡಿಕೊಳ್ಳಿ. ಆಮೇಲೆ ಇದಕ್ಕೆ ಒಂದು ಚಮಚ ಆಗುವಷ್ಟು ನಿಂಬೆ ರಸ ಹಾಗು ಬ್ಲ್ಯಾಕ್ ಸಾಲ್ಟ್ ಹಾಕಿ ಮಿಶ್ರಣ ಮಾಡಿಕೊಂಡು ದಿನಕ್ಕೆ ಒಂದುಬಾರಿ ಖಾಲಿ ಹೊಟ್ಟೆಗೆ ಸೇವನೆ ಮಾಡುವುದರಿಂದ, ಈ ಸಮಸ್ಯೆಯಿಂದ ಪರಿಹಾರ ಕಾಣಬಹುದಾಗಿದೆ.