ಕುಂಬಳಕಾಯಿ ಬೀಜದಲ್ಲಿ ಸಾಕಷ್ಟು ಆರೋಗ್ಯ ಲಾಭಗಳಿವೆ. ಇವುಗಳಲ್ಲಿ ಆರೋಗ್ಯಕರ ಪರಿಣಾಮಗಳು ಹೆಚ್ಚು ಸಿಗುತ್ತದೆ. ದೇಹಕ್ಕೆ ಉತ್ತಮವಾದ ಪೌಷ್ಟಿಕಾಂಶಗಳನ್ನು ಒದಗಿಸುವುದರ ಜೊತೆಗೆ ಅನೇಕ ರೋಗರುಜಿನಗಳಿಗೆ ಪರಿಹಾರ ಎಂಬುದು ಕೂಡ ಈಗಾಗಲೇ ಸಾಬೀತಾಗಿದೆ. ಪಿಸಿಓಎಸ್ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ಕುಂಬಳಕಾಯಿ ಬೀಜಗಳನ್ನು ತಿನ್ನಬೇಕು ಎಂದು ಹೇಳುತ್ತಾರೆ. ಏಕೆಂದರೆ ದೇಹದಲ್ಲಿ ಎದುರಾಗುವ ಹಾರ್ಮೋನುಗಳ ಅಸಮತೋಲನವನ್ನು ಹೋಗಲಾಡಿಸಿ ಆರೋಗ್ಯವನ್ನು ವೃದ್ಧಿಸುವಲ್ಲಿ ಇವುಗಳು ಸಹಾಯಕ.
ಉಪಯೋಗಗಳು
ಪಿಸಿಓಎಸ್ ನಿಂದ ತೊಂದರೆಗೆ ಒಳಗಾಗಿರುವ ಮಹಿಳೆಯರಿಗೆ ಏನೆಲ್ಲ ಪರಿಹಾರಗಳು ಕುಂಬಳಕಾಯಿ ಬೀಜಗಳಿಂದ ಸಿಗುತ್ತವೆ ಎನ್ನುವುದನ್ನು ನೋಡುವುದಾದರೆ. ತಲೆಕೂದಲು ಉದುರುವಿಕೆ ಸಮಸ್ಯೆ ಕಡಿಮೆಯಾಗುತ್ತದೆ. ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಅವಶ್ಯಕ ಫ್ಯಾಟಿ ಆಮ್ಲಗಳು ಇರುತ್ತವೆ. ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಮೆಗ್ನೀಷಿಯಂ ಹೆಚ್ಚಾಗಿರುವುದರಿಂದ ಮೂಳೆಗಳಿಗೆ ತುಂಬಾ ಒಳ್ಳೆಯದು. ಋತುಬಂಧದ ನಂತರದಲ್ಲಿ ಆಸ್ಟಿಯೋಪೋರೋಸಿಸ್ ಸಮಸ್ಯೆ ಇರುವ ಮಹಿಳೆಯರಿಗೆ ವರದಾನ. ರಾತ್ರಿಯ ಸಮಯದಲ್ಲಿ ಒಳ್ಳೆಯ ನಿದ್ರೆ ಬರುವಂತೆ ಮಾಡುತ್ತವೆ. ಹೀಗಾಗಿ ಮಹಿಳೆಯರು ತಾವು ಮಲಗುವ ಮುಂಚೆ ಒಂದು ಟೇಬಲ್ ಸ್ಪೂನ್ ಕುಂಬಳ ಬೀಜಗಳನ್ನು ಹುರಿದು ತಿನ್ನಬಹುದು. ತನ್ನಲ್ಲಿ ಮೆಗ್ನೀಸಿಯಮ್, ತಾಮ್ರ, ಪ್ರೋಟೀನ್ ಮತ್ತು ಸತುವುಗಳಂತಹ ವಿವಿಧ ರೀತಿಯ ಪೋಷಕಾಂಶಗಳು ಈ ಬೀಜಗಳಲ್ಲಿ ಕಂಡು ಬರುತ್ತದೆ. ಮುಖ್ಯವಾಗಿ ಈ ಬೀಜಗಳಲ್ಲಿ ಮೆಗ್ನೀಸಿಯಮ್, ಸತು ಮತ್ತು ಕೊಬ್ಬಿನಾಮ್ಲಗಳ ಸಮೃದ್ಧ ಪ್ರಮಾಣದಲ್ಲಿ ಸಿಗುವುದರಿಂದ ಹೃದಯದ ಆರೋಗ್ಯವನ್ನು ಕೂಡ ಕಾಪಾಡುತ್ತದೆ. ಕುಂಬಳ ಕಾಯಿ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಅಂಶ ಇರುವುದರಿಂದ, ದೇಹದ ತೂಕ ಇಳಸುವಲ್ಲಿಯೂ ಕೂಡ ಸಹಾಯಕ.