ಮನೆ ಅಪರಾಧ ಚಾಮರಾಜನಗರದ ನಕಲಿ ಕ್ಲಿನಿಕ್’ಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳ ದಾಳಿ: ಕ್ಲಿನಿಕ್ ಬಂದ್

ಚಾಮರಾಜನಗರದ ನಕಲಿ ಕ್ಲಿನಿಕ್’ಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳ ದಾಳಿ: ಕ್ಲಿನಿಕ್ ಬಂದ್

0

ಚಾಮರಾಜನಗರ(Chamarajanagar): ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದ ನಕಲಿ ಅಲೋಪತಿ ವೈದ್ಯರಿಗೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಬಿಸಿ‌ ಮುಟ್ಟಿಸಿದ್ದು, ನಕಲಿ ಕ್ಲಿನಿಕ್​ಗಳನ್ನು ಬಂದ್ ಮಾಡಿಸಿದ್ದಾರೆ.

ಹನೂರು ತಾಲೂಕಿನ ವಿವಿಧೆಡೆ ಇಂಥ ಕ್ಲಿನಿಕ್​ಗಳ ಹಾವಳಿ ಹೆಚ್ಚಾಗಿದೆ ಎಂದು ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಇಂದು ತಾಲೂಕಿನ ನಕಲಿ ಕ್ಲಿನಿಕ್​ಗಳ ಮೇಲೆ ಡಿಎಚ್’ಒ ಡಾ. ವಿಶ್ವೇಶ್ವರಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಕೌದಳ್ಳಿ ಗ್ರಾಮದಲ್ಲಿರುವ ಆದಮ್ ಕ್ಲಿನಿಕ್, ಜನತಾ ಕ್ಲಿನಿಕ್ ಹಾಗೂ ದೀಪಾ ಕ್ಲಿನಿಕ್​ಗಳಿಗೆ ನೋಟಿಸ್ ಜಾರಿ ಮಾಡಿ ಬಂದ್ ಮಾಡಿಸಿದ್ದಾರೆ‌.

ಅಜ್ಜೀಪುರ, ರಾಮಾಪುರ ಮತ್ತು ಕೂಡ್ಲೂರು, ಹೂಗ್ಯಂ ಇತರೆ ಕ್ಲಿನಿಕ್​ಗಳ ಪರಿಶೀಲನೆಯನ್ನು ಗುರುವಾರ ಅಧಿಕಾರಿಗಳು ನಡೆಸಿದ್ದಾರೆ. ಲೈಸೆನ್ಸ್ ಒಬ್ಬರ ಹೆಸರಿನಲ್ಲಿದ್ದು, ಚಿಕಿತ್ಸೆ ಕೊಡುವವರು ಮತ್ತೊಬ್ಬರು ಆಗಿದ್ದಾರೆ. ಆಯುಷ್ ವೈದ್ಯರು ಅಲೋಪತಿ ಚಿಕಿತ್ಸೆ ಕೊಡುತ್ತಿರುವುದು ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ.