ಮೆಂತೆ ಸೊಪ್ಪು ನಿಮಗೆಲ್ಲ ಗೊತ್ತಿರುವ ಹಾಗೆ ಒಂದು ಆರೋಗ್ಯಕರವಾದ ಹಸಿರು ಎಲೆ ತರಕಾರಿ. ಪ್ರತಿದಿನ ಇದನ್ನು ತಿಂದರೂ ಕೂಡ ಏನು ತಪ್ಪಿಲ್ಲ. ದೇಹದ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಜೊತೆಗೆ ಇದನ್ನು ಹಲವಾರು ರೀತಿಯಲ್ಲಿ ಬಳಸಬಹುದಾಗಿದೆ. ನೀವು ದಾಲ್, ಪರೋಟ, ಪಲ್ಯ ಇತ್ಯಾದಿಗಳಲ್ಲಿ ಇದನ್ನು ಬಳಸಿ ನಿಮ್ಮ ಆಹಾರದ ರುಚಿಯನ್ನು ಹೆಚ್ಚಿಸಿಕೊಳ್ಳಬಹುದು.
ಹೃದಯದ ಕಾಯಿಲೆ ನಿಯಂತ್ರಣ ಮಾಡುತ್ತದೆ
ಮೆಂತೆ ಸೊಪ್ಪಿನಲ್ಲಿ ಪೋಟ್ಯಾಶಿಯಂ ಪ್ರಮಾಣ ಹೆಚ್ಚಾಗಿರುವುದರಿಂದ ಅಧಿಕ ರಕ್ತದ ಒತ್ತಡ ಇರುವ ಜನರಿಗೆ ಇದು ಪ್ರಯೋಜನಕಾರಿ. ಏಕೆಂದರೆ ಇದು ದೇಹದಲ್ಲಿ ಸೋಡಿಯಂ ಪ್ರಮಾಣ ಉಂಟು ಮಾಡ ಬಹುದಾದ ಹಾನಿಯನ್ನು ತಡೆದು ಹೃದಯ ಬಡಿತವನ್ನು ಮತ್ತು ರಕ್ತದ ಒತ್ತಡವನ್ನು ನಿಯಂತ್ರಣ ಮಾಡುತ್ತದೆ.
ಮೆಂತೆ ಸೊಪ್ಪು ಮಧುಮೇಹಿಗಳಿಗೆ ಒಳ್ಳೆಯದು
ಇದರಲ್ಲಿ ನೈಸರ್ಗಿಕವಾದ ಕರಗುವ ನಾರಿನ ಅಂಶ ಇರುವುದರಿಂದ ಮೆಂತ್ಯ ಸೊಪ್ಪು ರಕ್ತದಲ್ಲಿ ಸಕ್ಕರೆ ಪ್ರಮಾಣ ಹೀರಿಕೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಅಮೈನೋ ಆಮ್ಲಗಳು ಇರಲಿದ್ದು ಇನ್ಸುಲಿನ್ ಉತ್ಪತ್ತಿಯನ್ನು ಉತ್ತೇಜಿಸುವಲ್ಲಿ ನೆರವಾಗುತ್ತದೆ.
ಆರೋಗ್ಯಕರವಾದ ಮೂಳೆಗಳು
ಮೆಂತೆ ಸೊಪ್ಪಿನಲ್ಲಿ ವಿಟಮಿನ್ ಕೆ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ಇದು ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹದ ಮೂಳೆಗಳ ಸಾಂದ್ರತೆ ಹೆಚ್ಚು ಮಾಡುವಲ್ಲಿ ಮತ್ತು ವಯಸ್ಸಾದ ನಂತರದಲ್ಲಿ ಬರಬಹುದಾದ ಆಸ್ಟಿಯೋಪೋರೋಸಿಸ್ ತೊಂದರೆಯನ್ನು ತಪ್ಪಿಸುತ್ತದೆ.
ಇದೊಂದು ಉತ್ತಮ ಆಂಟಿ ಆಕ್ಸಿಡೆಂಟ್
ಇದರಲ್ಲಿ ಫಿನಾಲಿಕ್ ಮತ್ತು ಫ್ಲೇವನಾಯ್ಡ್ ಪ್ರಮಾಣ ಹೆಚ್ಚಾಗಿರುವುದರಿಂದ ಆಂಟಿ ಆಕ್ಸಿಡೆಂಟ್ ಲಕ್ಷಣಗಳು ಹೆಚ್ಚಾಗುತ್ತವೆ. ಇದರಿಂದ ಆರೋಗ್ಯದ ಮೇಲೆ ಸಕಾರಾತ್ಮಕ ಪ್ರಭಾವಗಳು ಉಂಟಾಗುತ್ತವೆ.
ಕಬ್ಬಿಣಾಂಶ ಕೊರತೆ ನಿವಾರಿಸುತ್ತದೆ
• ನಮಗೆಲ್ಲಾ ಗೊತ್ತೇ ಇರುವ ಹಾಗೆ ಮನುಷ್ಯನಿಗೆ ಕಬ್ಬಿಣಾಂಶದ ಕೊರತೆ ಎದುರಾದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಇದನ್ನು ಆರಂಭದಲ್ಲೇ ಸರಿಪಡಿಸಿಕೊಳ್ಳುವುದು ಒಳ್ಳೆಯದು… ವೈದ್ಯರು ಸೂಚಿಸಿರುವ ಕೆಲವೊಂದು ಔಷಧಿಗಳನ್ನು ಸೇವಿಸುವುದರ ಜೊತೆಗೆ
• ಮೆಂತೆ ಸೊಪ್ಪನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು. ಯಾಕೆಂದರೆ ಈ ಸೊಪ್ಪಿನ ಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶ ಇರುವುದರಿಂದ ರಕ್ತ ಹೀನತೆಗೆ ನೈಸರ್ಗಿಕವಾಗಿ ನಿಯಂತ್ರಿಸಲು ನೆರವಾಗುತ್ತದೆ.
• ಇನ್ನು ಆಯುರ್ವೇದ ತಜ್ಞರು ಹೇಳುವ ಪ್ರಕಾರ ಒಣಗಿಸಿರುವ ಮೆಂತೆ ಸೊಪ್ಪಿಗಿಂತ ಹಸಿರು ಎಲೆಗಳಲ್ಲಿ ಹೆಚ್ಚು ಪೋಷಕಾಂಶವಿದೆ. ಅಲ್ಲದೆ ಈ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ಕಬ್ಬಿಣಾಂಶವಿರುವುರಿಂದ, ರಕ್ತಹೀನತೆಯನ್ನು ನಿವಾರಿಸಲು ನೆರವಾಗುತ್ತದೆ, ಜೊತೆಗೆ ಹಿಮೋಗ್ಲೋಬಿನ್ ಪ್ರಮಾಣ ಕೂಡ ಹೆಚ್ಚುತ್ತದೆ.