ಮನೆ ಅಡುಗೆ ಆರೋಗ್ಯಕರ ಡ್ರೈ ಫ್ರೂಟ್ಸ್ ಬರ್ಫಿ

ಆರೋಗ್ಯಕರ ಡ್ರೈ ಫ್ರೂಟ್ಸ್ ಬರ್ಫಿ

0

ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರೂ ಇಷ್ಟಪಟ್ಟು ಸವಿಯುತ್ತಾರೆ. ಡ್ರೈ ಫ್ರೂಟ್ಸ್ ಬಳಸಿ ಬರ್ಫಿ ಮಾಡೋದನ್ನ ಇವತ್ತು ನಾನಿಲ್ಲಿ ತಿಳಿಸಿಕೊಡ್ತೀನಿ.

ಬೇಕಾಗುವ ವಸ್ತುಗಳು : ಬಾದಾಮಿ – ಅರ್ಧ ಕಪ್, ಗೋಡಂಬಿ – ಅರ್ಧ ಕಪ್, ಮಖಾನಾ – ಅರ್ಧ ಕಪ್, ಕೊಬ್ಬರಿ ತುರಿ – ಅರ್ಧ ಕಪ್, ಪುಟಾಣಿ, ಹುರಿಗಡಲೆ – 1 ಕಪ್, ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್, ಜಾಯಿಕಾಯಿ ಪುಡಿ – ಒಂದು ಚಿಟಿಕೆ, ಕೇಸರಿ – ಒಂದು ಚಿಟಿಕೆ, ಬೆಲ್ಲ – 300 ಗ್ರಾಂ
ತುಪ್ಪ – ಅಗತ್ಯಕ್ಕೆ ತಕ್ಕಂತೆ

ಮಾಡುವ ವಿಧಾನ – ಮೊದಲಿಗೆ, ಒಲೆ ಆನ್ ಮಾಡಿ ಪಾತ್ರೆ ಇಟ್ಟು ಮಖಾನಗಳನ್ನು ಗರಿಗರಿಯಾಗಿ ಹುರಿಯಬೇಕು. ಹುರಿದ ಬಳಿಕ ಒಲೆ ಆಫ್ ಮಾಡಿ, ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕು. ಹುರಿದ ಮಖಾನವನ್ನು ಮಿಕ್ಸರ್ ಜಾರ್‌ನಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿ. ಈ ಪುಡಿಯನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಬೇಕು. ಅದೇ ಮಿಕ್ಸರ್ ಜಾರ್‌ನಲ್ಲಿ ಬಾದಾಮಿ ಮತ್ತು ಗೋಡಂಬಿ ಸೇರಿಸಿ ನುಣ್ಣಗೆ ಪುಡಿ ಮಾಡಿ ಮಖಾನ ಮಿಶ್ರಣಕ್ಕೆ ಸೇರಿಸಬೇಕು.

ಮಖಾನ ಹಾಗೂ ಬಾದಾಮಿ ಮಿಶ್ರಣಕ್ಕೆ ತುರಿದ ಕೊಬ್ಬರಿ, ಏಲಕ್ಕಿ ಪುಡಿ, ಜಾಯಿಕಾಯಿ ಪುಡಿ, ಕೇಸರಿ ಸೇರಿಸಿ, ಒಲೆ ಆನ್ ಮಾಡಿ ಅದರಲ್ಲಿ ಒಂದು ಪಾತ್ರೆ ಇಟ್ಟು ತುರಿದ ಬೆಲ್ಲ, ಸ್ವಲ್ಪ ತುಪ್ಪ ಮತ್ತು ಕಾಲು ಕಪ್ ನೀರು ಸೇರಿಸಿ ಸ್ವಲ್ವ ಪಾಕ ಆಗುವವರೆಗೆ ಬೇಯಿಸಬೇಕು.

ಇನ್ನೊಂದು ಪಾತ್ರೆ ಇಟ್ಟು ಒಂದು ಟೀಸ್ಪೂನ್ ತುಪ್ಪ ಸೇರಿಸಿ ಬಿಸಿ ಮಾಡಿ ಕಡಲೆಕಾಯಿ, ಬಾದಾಮಿ ಪುಡಿಗಳನ್ನು ಕಡಿಮೆ ಉರಿಯಲ್ಲಿ ಹುರಿದು, ಪರಿಮಳ ಬಂದ ಬಳಿಕ ಬೆಲ್ಲದ ಪಾಕ ಸೇರಿಸಿ ಮಿಶ್ರಣ ಮಾಡಿ ಬೇಯಿಸಬೇಕು.

ಇದಕ್ಕೆ ಹಿಟ್ಟಿನ ಪೇಸ್ಟ್‌ನಲ್ಲಿ ಸೇರಿಕೊಂಡು ದಪ್ಪವಾಗಿ ಹದವಾಗಿ ಬೆಂದ ಬಳಿಕ ಒಲೆ ಆಫ್ ಮಾಡಿ, ಒಂದು ತಟ್ಟೆಗೆ ತುಪ್ಪ ಹಚ್ಚಿ ಈ ಮಿಶ್ರಣವನ್ನು ಸೇರಿಸಿ ಸಮವಾಗಿ ಹರಡಬೇಕು. ಬಳಿಕ ಡ್ರೈ ಫ್ರೂಟ್ಸ್ ಸೇರಿಸಿ, ಚಿಕ್ಕ ಪೀಸ್​ಗಳಾಗಿ ಕತ್ತರಿಸಬೇಕು. ತಣ್ಣಗಾದ ಬಳಿಕ ಬರ್ಫಿ ಸೇವಿಸಲು ಸಿದ್ಧ.