ಮಂಡ್ಯ:ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಗೋ ಹತ್ಯೆ ಅನ್ನೋದು ಅವ್ಯಹತವಾಗಿ ನಡೀತಿದೆಯಾ ಅನ್ನೋದಕ್ಕೆ ಇದೊಂದು ತಾಜಾ ಉದಾಹರಣೆಯಾಗಿದೆ.
ಮಂಡ್ಯ ತಾಲೂಕಿನ ತೂಬಿನ ಕೆರೆ ಗ್ರಾಮದ ಹೊರವಲಯದಲ್ಲಿ ನಿರ್ಮಾಣವಾಗಿದ್ದ ಶೆಡ್ ನಲ್ಲಿ ಗೋವಿನ ತಲೆ, ಬೆನ್ನು ಸೇರಿದಂತೆ ರಾಶಿ ರಾಶಿ ಮೂಳೆಗಳು ಪತ್ತೆಯಾಗಿವೆ.
ಗ್ರಾಮದ ನಿಂಗರಾಜು ಎಂಬುವರಿಗೆ ಸೇರಿದ್ದ ಜಮೀನಿನಲ್ಲಿ ಮೂಳೆಗಳ ರಾಶಿ ಪತ್ತೆಯಾಗಿದೆ. ಕಳೆದ ನಾಲ್ಕೈದು ದಿನಗಳ ಹಿಂದೆಯಷ್ಟೆ ಶೆಡ್ ನಿರ್ಮಿಸಲು ಅನ್ಯಕೋಮಿನ ವ್ಯಕ್ತಿಗೆ ಅವಕಾಶ ಕೊಟ್ಟಿದ್ದ ನಿಂಗರಾಜು.
ಶೆಡ್ ನಿರ್ಮಿಸುವ ವೇಳೆ ಕಬ್ಬಿಣ ಹಾಕುವುದಾಗಿ ಹೇಳಿದ್ದ ಅನ್ಯಕೋಮಿನ ವ್ಯಕ್ತಿ. ಇದಾದ ಬಳಿಕ ಈ ಪ್ರದೇಶದ ಸುತ್ತ ಭಾರಿ ಪ್ರಮಾಣದಲ್ಲಿ ದುರ್ನಾತ ಬೀರುತ್ತಿದ್ದ ಹಿನ್ನೆಲೆಯಲ್ಲಿ ಇಲ್ಲಿನ ಸುತ್ತಮುತ್ತಲಿನ ಜನರು ಶೆಡ್ ಬಾಗಿಲು ತೆಗೆದು ನೋಡಿದಾಗ ಶೆಡ್ ನಲ್ಲಿ ರಾಶಿ ರಾಶಿ ಗೋವುಗಳ ಮೂಳೆಗಳು ಕಂಡುಬಂದಿವೆ.
ಮೂಳೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪಿಡಿಒ ಅವರಿಗೆ ಮಾಹಿತಿ ನೀಡಲಾಗಿದ್ದು, ಈ ಮೂಳೆಗಳನ್ನ ಪೌಡರ್ ಮಾಡಿ ಆಲೆ ಮನೆಗಳಿಗೆ ಬಳಕೆ ಮಾಡಲಾಗ್ತಿತ್ತು ಎಂಬ ಆರೋಪವೂ ಕೇಳಿ ಬಂದಿದ್ದು ಇದರ ಬಗೆಗೂ ತನಿಖೆ ನಡೆಸುವಂತೆ ಒತ್ತಾಯಿಸ್ತಿರೊ ಗ್ರಾಮಸ್ಥರು. ಆದರೆ ವಿಷಯ ಪಿಡಿಒ ಗಮನಕ್ಕೆ ತಂದರೂ ಶೆಡ್ ತೆರವುಗೊಳಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದು ಕೂಡಲೇ ಆರೋಪಿಯ ವಿರುದ್ಧ ಕ್ರಮ ಕೈಗೊಂಡು ಶೆಡ್ ತೆರವುಗೊಳಿಸುವಂತೆ ಒತ್ತಾಯ ಮಾಡಿದ್ದಾರೆ.