ಗಂಗಾವತಿ: ತಾಲೂಕಿನ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟವನ್ನು ಹತ್ತಿ ಇಳಿಯುವ ಸಂದರ್ಭ ಯುವ ಭಕ್ತನೊರ್ವನಿಗೆ ಹೃದಯಘಾತ ಸಂಭವಿಸಿದ್ದು, ಆನೆಗೊಂದಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ನಿವಾಸಿ ಕಾರ್ತಿಕ್ ದಯಾಗ (26) ಮೃತಪಟ್ಟ ಯುವಕ.
ಕಾರ್ತಿಕ್ ತನ್ನ ಗೆಳೆಯನೊಂದಿಗೆ ಅಂಜನಾದ್ರಿಗೆ ಆಗಮಿಸಿ ಬೆಟ್ಟ ಹತ್ತಿ ಇಳಿಯುವ ಸಂದರ್ಭದಲ್ಲಿ ಹೃದಯಾಘಾತ ಕಾಣಿಸಿಕೊಂಡಿದೆ. ಕೂಡಲೇ ಆತನನ್ನು ಆನೆಗೊಂದಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಹೃದಯಾಘಾತವಾಗಿ ಸಾವನಪ್ಪಿದ್ದಾನೆ.
Saval TV on YouTube