ಮನೆ ರಾಷ್ಟ್ರೀಯ ಜಿಮ್‌’ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತ: ಜೈಲು ಅಧಿಕಾರಿ​ ಸಾವು

ಜಿಮ್‌’ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತ: ಜೈಲು ಅಧಿಕಾರಿ​ ಸಾವು

0

ಪಾಣಿಪತ್ (ಹರಿಯಾಣ): ಪಾಣಿಪತ್‌ ಡೆಪ್ಯುಟಿ ಸೂಪರಿಂಟೆಂಡೆಂಟ್ ಜಿಮ್‌’ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತಕ್ಕೆ ತುತ್ತಾಗಿ, ಮೃತಪಟ್ಟಿದ್ದಾರೆ.

ಹರ್ಯಾಣ ಜೈಲು ಉಪ ಅಧೀಕ್ಷಕರಾದ ಜೋಗಿಂದರ್ ದೇಸ್ವಾಲ್(52) ಮೃತ ದುರ್ದೈವಿ.

ಕರ್ನಾಲ್‌ ಮೂಲದ ಜೋಗಿಂದರ್ ಅವರು ಕಾರಾಗೃಹ ಇಲಾಖೆಗೆ ಸೇರುವ ಮೊದಲು ವಕೀಲರಾಗಿ ಪ್ರಾಕ್ಟೀಸ್​​ ಮಾಡುತ್ತಿದ್ದರು.

ಪ್ರಸ್ತುತ ಪಾಣಿಪತ್ ಜೈಲಿನಲ್ಲಿ ನಿಯೋಜಿಸಲಾಗಿದ್ದ ಡೆಪ್ಯುಟಿ ಸೂಪರಿಂಟೆಂಡೆಂಟ್ ಸೋಮವಾರ ಬೆಳಗ್ಗೆ ಜಿಮ್‌’ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಹತ್ತಿರದ ಮೂಲಗಳು ತಿಳಿಸಿವೆ. ಕೂಡಲೇ ಜಿಮ್ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ.