ಮನೆ ಜ್ಯೋತಿಷ್ಯ ಹೃದಯ ವ್ಯಾದಿ

ಹೃದಯ ವ್ಯಾದಿ

0

      ಹೃದಯ ಒಂದು ಮಾಂಸದ ಮುದ್ದೆಯಷ್ಟೇ ಗರ್ಭದಲ್ಲಿನ ಮೆಲ್ಲನೆ ಮೂಡುತ್ತದೆ.ಗರ್ಭಾಹೊತ್ತ ಅಮ್ಮನಿಗೂ ಗೊತ್ತಿಲ್ಲದೆ ಗರ್ಭದಲ್ಲಿ 21ನೇ ದಿನಕ್ಕೆ ಜನ್ಮ ತಾಳಿ ಈ ಹೃದಯ ಕೆಲಸ ಆರಂಭಿಸಿ ಬಿಟ್ಟಿರುತ್ತದೆ. ಇನ್ನು ಹಗಲೂ ರಾತ್ರಿ ಅದು ಜನ್ಮತಾಳಿದಾಗಿನಿಂದ ಸಾಯುವವರೆಗೂ ಅದರ ಕೆಲಸ ನಿರಂತರ. ಅದು ಜೋರಾಗಿ ಹೊಡೆದುಕೊಂಡರು ಮೆದುವಾಗಿ ಕೂಗಿಕೊಂಡರು ಸಂಕಷ್ಟ ಅದನ್ನು ಹೊತ್ತ ಒಡೆಯನಿಗೆ ಕಟ್ಟಿಟ್ಟ ಬುತ್ತಿ. ಪ್ರಾಪ್ತ ವಯಸ್ಸಿಗೆ  ಬಂದವರಿಗೆ ಸಹಜ ಸ್ಥಿತಿಯಲ್ಲಿರುವಾಗ ನಿಮಿಷಕ್ಕೆ 60 ರಿಂದ 100 ಬಾರಿ ಹೃದಯ ಬಡಿತವಿರುತ್ತದೆ.60 ಕ್ಕಿಂತ ಕಡಿಮೆಯಾದರೂ ಬ್ಯಾಡಿಕಾರ್ಡಿಯಾ  ಎಂದು, 50 ಕ್ಕಿಂತ ಕಡಿಮೆ ಇರುವ ಸಾಧ್ಯತೆ ಯಿರುತ್ತದೆ.ಆಗ ರೋಗಿ ತೊಂದರೆ ಪಡುತ್ತಾರೆ ಅವರಿಗೆ ಹೃದಯಕ್ಕೆ ಬೇಕಾಗಿರುವ ಆಮ್ಲಜನಕ ಪೂರೈಕೆ ಯಾಗದಿರುವುದೇ ಹೃದಯಾಘಾತಕ್ಕೆ ಕಾರಣ. ಈ ರೀತಿ ಹೃದಯ ಬಡಿತ ನೂರಕ್ಕೂ ಹೆಚ್ಚಾದರೂ ಅದಕ್ಕಗ  ಟಿಂಕಾರ್ಡಿಯ ಕರೆಯುತ್ತಾರೆ. ಆಗಲೂ ಆಮ್ಲಜನಕ  ಕೊರತೆಯಿಂದ ಹೃದಯಾಘಾತಕವಾಗುವ ಸಂಭವ.

Join Our Whatsapp Group

      ಇತ್ತೀಚಿನ ದಿನಗಳಲ್ಲಿ ಹೃದಯವ್ಯಾಧಿಯೂ ಒಂದು ಬಹುದೊಡ್ಡ ಹಾಗೂ ಸಾಮಾನ್ಯವಾದ ವ್ಯಾದಿಯಾಗಿದೆ. ಈ ಕಾಯಿಲೆಯು ತನ್ನ ಕದಂಬ ಬಾಹುಗಳಿಂದ ಮಾನವ ಕುಲದ ಎಲ್ಲಾ ವರ್ಗಗಳನ್ನೂ ಆವರಿಸಿದೆ.ಈ ಕಾಯಿಲೆಗೆ ಚಿಕ್ಕವರು, ದೊಡ್ಡವರು, ಬಡವರು,ಬಲ್ಲಿದವರು, ಎಂಬ ಭೇದವಿಲ್ಲ.ಆದರೂ ಬಹುತೇಕ ಈ ಕಾಯಿಲೆಯು ದೊಡ್ಡವರಲ್ಲಿ ಕಾಣಿಸಿಕೊಳ್ಳುತ್ತದೆ.ಇನ್ನು ಸಾಮಾನ್ಯವಾಗಿ ಕೇಳಿ ಬರುವ ಮಾತೆಂದರೆ ಆರೋಗ್ಯವಾಗಿಯೇ ಇದ್ದರು. ಅದೇನೋ ಎದೆನೋವು ಎಂದರು.ಅಷ್ಟೇ ಆಸ್ಪತ್ರೆಗೆ ಕರೆದುಕೊಂಡು ಹೋಗುವುದರೊಳಗೆ ಪ್ರಾಣ ಬಿಟ್ಟರು ಎಂದು.

    ಇದು ಈ ಕಾಯಿಲೆಯ ಈ ತಿಕ್ಷ್ಣಕತೆ.  ಈ ದಿನಗಳಲ್ಲಿ ಅತಿ ಹೆಚ್ಚಿನ ರೋಗಿಗಳನ್ನು ಹೊಂದಿರುವ ಆಸ್ಪತ್ರೆಯೆಂದರೆ ಅದು ಹೃದ್ರೋಗದ ಆಸ್ಪತ್ರೆಗಳು ಹಾಗಾದರೆ ಇಂತಹ ರೋಗ ಬರಲು ಕಾರಣವೇನು ಎನ್ನುವ ಪ್ರಶ್ನೆಯೂ ಸಾಮಾನ್ಯವಾಗಿ ಉದ್ಭವಿಸುತ್ತದೆ. ಅಷ್ಟೇ ಅಲ್ಲದೆ, ಈ ವಿಷಯದ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಿಂದ ತಿಳಿದುಕೊಳ್ಳಲು ಆಗುವುದಿಲ್ಲವೇ? ಎಂದಲ್ಲ ಅನಿಸುತ್ತದೆ.  ಈ ಪ್ರಶ್ನೆಗಳಿಗೆ ಉತ್ತರವಾಗಿಯೇ ಈ ಲೇಖನ.

    ವೈದ್ಯರು ಹೇಳಿರುವಂತೆ ಈ ಹೃದಯವು ಮಾಂಸದ ಅವಯವಗಳನ್ನೂಳಗೊಂಡು ವ್ಯಕ್ತಿಯ ಎದೆಯ ಗೂಡಿನೊಳಗೆ ಸ್ವಲ್ಪ ಎಡಭಾಗದಲ್ಲಿ ಸ್ಥಿತವಾಗಿರುತ್ತದೆ.ಮುಷ್ಟಿ ಗಾತ್ರದ ಈ ಹೃದಯವು ಮಾನವನ ಜೀವನದುದ್ದಕ್ಕೂ ತಾನು ಇರುವುದನ್ನು ತೋರಿಸುತ್ತಿರುತ್ತದೆ ಮತ್ತು ಎಲ್ಲದಕ್ಕೂ ಸ್ವಂಧಿಸುತ್ತಿರುತ್ತದೆ. ಈ ಹೃದಯ ಯಾವ ಕ್ಷಣದಲ್ಲಿ ತನ್ನ ಕೆಲಸವನ್ನು ನಿಲ್ಲಿಸುತ್ತದೆಯೋ, ಅದೇ ಕ್ಷಣದಲ್ಲಿ ವ್ಯಕ್ತಿಯ ಸಾವು ಸಂಭವ. ಇನ್ನು ಹೃದಯದಲ್ಲಿ ಪ್ರೇಮವಿರುತ್ತದೆ ಮತ್ತು ದೇವರು ನಿಲಸಿರುತ್ತಾನೆ ಎಂದು ಆಸ್ತಿಕ ಮಹಾಶಯರು ಹೇಳುತ್ತಾರೆ ಹೃದಯವೇ ಪ್ರೇಮದ ಸಂಕೇತವಾಗಿದೆ. ಹಾಗೆ ನಮ್ಮ ನೋವು ನಲಿವು, ಕಷ್ಟ ಸುಖಗಳಿಗೆ ಮಾನಸಿಕವಾಗಿ ಹೃದಯ ಸ್ಪಂದಿಸುತ್ತದೆ.ನಾವು ವಿಪರೀತ ನೋವು ದುಃಖ ಅನುಭವಿಸುವಾಗ, ಅಕಸ್ಮಿಕವಾಗಿ ಆಘಾತವಾದರೆ, ಬಹಳ ಯೋಚನೆ ಮಾಡಿದರೆ ಈ ಹೃದಯವೂ ಸಹ ನೋವಿನಿಂದ ಕುಗ್ಗಿ ಬಲಹೀನವಾಗಿ ತೊಂದರೆ ಕೊಡುತ್ತದೆ.ಇದರಿಂದ ನಮಗೆ ಬಹಳ ಹತ್ತಿರದ ನಮ್ಮ ಮನಸ್ಸಿನ ಆಳವನ್ನು ತಿಳಿಯುವ ಸ್ನೇಹಿತರಾಗಿರುತ್ತಾನೆ.