ಮನೆ ಮನೆ ಮದ್ದು ಹೃದ್ರೋಗ

ಹೃದ್ರೋಗ

0

1. ಒಣಖರ್ಜೂರ, ಬಾದಾಮಿ ಬೀಜವನ್ನು ಹಾಲಿನಲ್ಲಿ ಅರೆದು, ಜೇನುತುಪ್ಪ ಸೇರಿಸಿ ಪ್ರತಿದಿನವೂ ಒಂದು ಬಾರಿ ಆದರೂ ಎರಡು ಟೀ ಸ್ಪೂನ್ ನಷ್ಟು ಸೇವಿಸುತ್ತಿದ್ದಾರೆ ರಕ್ತಸ್ರುದ್ದಿ ಆಗುವುದು.

Join Our Whatsapp Group

2. ಬೂದುಗುಂಳವನ್ನು ಸೇವಿಸುವುದರಿಂದ ಹೃದಯ ಸಾಮರ್ಥ್ಯ ವೃದ್ಧಿಸುವುದು.

3. ಹಸಿ ತೆನೆಯನ್ನು ಕೆಂಡದ ಮೇಲೆ ಸುಟ್ಟು ಉಜ್ಜಿದಾಗ ಉದುರುವ ಕಾಳುಗಳಿಗೆ ಕೊಬ್ಬರಿ ಬೆಲ್ಲ ಸೇರಿಸಿ ತಿನ್ನುತ್ತಿದ್ದರೆ ಹೃದ್ರೋಗಗಳಿಗೆ ಅವಕಾಶ ಇರುವುದಿಲ್ಲ.

4. ನಿಂಬೆಹಣ್ಣುಗಳನ್ನು ಕತ್ತರಿಸಿ ಅಡಿಗೆ ಉಪ್ಪು ತುಂಬಿ, ಹದಿನೈದು ದಿನಗಳ  ಕಾದ ಬಿಸಿಲಿನಲ್ಲಿ ಒಣಗಿಸಿ, ಒಣಗಿದ   ಹೋಳುಗಳನ್ನು ಕುಟ್ಟಿ ಪುಡಿ ಮಾಡಿ ದಿನವೂ ಹಸಿದ ಹೊಟ್ಟೆಯಲ್ಲಿ ಒಂದು ತಿಂಗಳ ಕಾಲ ಒಂದೊಂದು ಚಮಚ ಚೂರ್ಣ ಸೇವಿಸುತ್ತಿದ್ದರೆ ಹೃದ್ರೋಗಗಳ ಭಯವಿಲ್ಲ.

5. ಮೆಂತ್ಯ ಸೊಪ್ಪನ್ನು ಹೆಚ್ಚಿ, ಬೆಳೆಯೊಂದಿಗೆ ಬೇಯಿಸಿ ಹುಳಿ ಮಾಡಿಕೊಂಡು ಕ್ರಮವಾಗಿ ಸೇವಿಸುತ್ತಿದ್ದರೆ ಹೃದಯ ಮತ್ತು ಶ್ವಾಸಕೋಶಗಳಿಗೆ ಸಂಬಂಧಿಸಿದ ರೋಗಗಳು ದೂರ ಆಗುವುದು.

6. ಮೆಂತೆ ಸೊಪ್ಪಿನ ಪಲ್ಯ ಮತ್ತು ಹುಳಿಯನ್ನು ಕ್ರಮವಾಗಿ ಸೇವಿಸಿದರೆ ಮೆದುಳಿಗೆ ಸಂಬಂಧಿಸಿದ ರೋಗಗಳು ದೂರ ಆಗುವುವು.

7. ಬೀಜ ತೆಗೆದ ನಿಂಬೆಹಣ್ಣುಗಳ ಜೇನುತುಪ್ಪದಲ್ಲಿ ಬೆರೆಸಿ,ಸೇವಿಸಿದರೆ ಹೃದ್ರೋಗಗಳನ್ನು ತಡೆಯಬಹುದು.

8. ಹಿತಮಿತ ರೂಪದಲ್ಲಿ  ಮಾವಿನಕಾಯಿ ಬಳಸುವುದರಿಂದ ಹೃದಯದಲ್ಲಿ ರಕ್ತ ಸಂಚಾರ ಉತ್ತಮಗೊಳ್ಳುವುದು.

9. ಹಿತಮಿತ ರೂಪದಲ್ಲಿ ಮಾವಿನಕಾಯಿ ಬಳಸುವುದರಿಂದ ಹೃದಯದಲ್ಲಿ ರಕ್ತಸಂಚಾರ ಉತ್ತಮಗೊಳ್ಳುವುದು.

9. ರಕ್ತ ಒತ್ತಡ ಇರುವವರು ಬೆಳ್ಳುಳ್ಳಿಯನ್ನು ಸೇವಿಸಿದರೆ ಲಾಭಕಾರ

10. ಉಬ್ಬಸರೋಗ ಇದ್ದವರಿಗೆ ಬೆಳ್ಳುಳ್ಳಿ ಹಿತಕಾರಿ.

11. ಪರಂಗಿಹಣ್ಣನ್ನು, ಹಾಲು,ಜೇನುತುಪ್ಪವನ್ನು ಬೆರೆಸಿ,ಸೇವಿಸುವುದರಿಂದ ಹೃದಯ ದೌರ್ಬಲ್ಯ ದೂರ ಆಗುತ್ತದೆ.12.  ಹಸಿ ಅವರೆಕಾಳನ್ನು ಬೇಯಿಸಿ ತಿಂದರೆ ರಕ್ತ ಆಗುವುದು.

 13.ಪ್ರತಿದಿನ ಹಸಿ ಈರುಳ್ಳಿ ತಿನ್ನುತ್ತಿದ್ದರೆ ಹೃದ್ರೋಗಗಳು  ಕಡಿಮೆ ಆಗುವವು.

14. ಮೋಸಂಬಿ ರಸವನ್ನು ಜೇನುತುಪ್ಪದೊಂದಿಗೆ ಸೇವಿಸುತ್ತಿದ್ದರೆ ಹೃದ್ರೋಗ ದೂರ ಆಗುವುದು.

15. ಮೋಸಂಬಿ ರಸವನ್ನು ದಿನವೂ  ಸೇವಿಸುತ್ತಿದ್ದರೆ ರಕ್ತಶುದ್ದಿ,ರಕ್ತವೃದ್ಧಿ ಎರಡೂ ಆಗುವುದು.