ಮನೆ ಜ್ಯೋತಿಷ್ಯ ಹೃದಯ ರಂದ್ರ (ಜನನ ) 7 – 4-2007

ಹೃದಯ ರಂದ್ರ (ಜನನ ) 7 – 4-2007

0

   ಜನ್ಮಂತ ಹೃದಯ ರಂಧ್ರವಾಗಿ ಮೂರು ತಿಂಗಳಲ್ಲಿ ಹೃದಯ  ಶಸ್ತ್ರಚಿಕಿತ್ಸೆಯಾಗಿದೆ.

Join Our Whatsapp Group

     ಇಲ್ಲಿ ಕಟಕ ರಾಶಿಯಲ್ಲಿ ವಕ್ರ,ಶನಿ, ಕಟಕಾಧಿಪತಿ ಚಂದ್ರ ನೀಚ ಮತ್ತು 22 ದ್ರೇಕ್ಕಾಣಾಧಿಪತಿಯಾಗಿ ಲಗ್ನಕ್ಕೆ ಚತುರ್ಥದಲ್ಲಿ ಸ್ಥಿತ. ಕಾರಕ ಸೂರ್ಯ ಲಗ್ನಕ್ಕೆ ಅಷ್ಟಮದಲ್ಲಿ ಬುಧ ಮತ್ತು ಗುರುವಿನಿಂದ ಪೀಡಿತ, ಶನಿದಶೆ ಗುರು ಭುಕ್ತಿಯಲ್ಲಿ ಜನನ ಮತ್ತು ಹೃದಯ ರಂಧ್ರ ಶಸ್ತ್ರ ಚಿಕಿತ್ಸೆಯಾಗಿದೆ.

 ಬಾಲ್ಯದಲ್ಲಿ ಬರುವ ವ್ಯಾದಿಗಳಿಗೆ ಬಲಾರಿಷ್ಟಕ್ಕೆ ಚಂದ್ರಕಾರಕ.

 ಉದಾಹರಣೆ ಜಾತಕ 5 ತೆರೆದ ಹೃದಯದ ಶಸ್ತ್ರಚಿಕಿತ್ಸೆ -2-12-1962 :

     ಈ ಜಾತಕರಿಗೆ 2005 ಆಗಸ್ಟ್ ನಲ್ಲಿ ತೆರೆದ ಶಸ್ತ್ರಚಿಕಿತ್ಸೆ  ಮತ್ತೆ ಸೆಪ್ಟೆಂಬರ್ ನಲ್ಲಿ ಬೈಪಾಸ್ ಶಸ್ತ್ರ ಚಿಕಿತ್ಸೆ 2005, ನವೆಂಬರ್ 2006 ಜೂನ್, 2006 ಜೂನ್ 2006 ಅಕ್ಟೋಬರ್ 2006 ಡಿಸೆಂಬರ್ ಮತ್ತು 2007 ಮೇಲಿನ ಹೃದಯದಲ್ಲಿ ಗಾಯ ಮತ್ತು ಕಿವು ಗಳಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಿ ಮತ್ತೆ ಡಿಸೆಂಬರ್ ನಲ್ಲಿ ಶಸ್ತ್ರ ಚಿಕಿತ್ಸೆ ಬೇಕೆಂದರು.

   ಈ ಜಾತಕದಲ್ಲಿ ಕಾಲಪುರುಷನ ರಾಶಿಯ ಪ್ರಕಾರ ಕಟಕ ರಾಶಿಯಲ್ಲಿ ಕುಜ ಸ್ಥಿತನಾಗಿ ಶನಿಯ ದೃಷ್ಟಿ ಪಡೆದಿದ್ದಾನೆ. ಈ ಕಟಕ ಅಧಿಪತಿ ಚಂದ್ರನು ರಾಹು, ಕುಜ,ಮತ್ತು ಶನಿಯಿಂದ ಪೀಡಿತ.

     ಆದ್ದರಿಂದ ಗುರುದಶೆ ಕುಜ ಮತ್ತು ರಾಹುಬಕ್ತಿಯಲ್ಲಿ ಹೃದಯ ತೊಂದರೆಯಾಗಿದೆ.ಕುಜ ಮತ್ತು ರಾಹು ರಕ್ತ ಮತ್ತು ಕಿವುಕಾರಕ ಗ್ರಹ ಕಟಕದಲ್ಲಿ ಸ್ಥಿತ ಹೃದಯಕಾರಕ ರವಿ ರಾಹುವಿನಿಂದ ಪೀಡಿತ. ಚಂದ್ರ 22ನೇ ದ್ರೇಕ್ಕಾಣ ಮತ್ತು ಶನಿ 64ನೇ ನವಾಂಶಾಧಿಪ.

 ಉದಾಹರಣೆಗೆ ಜಾತಕ ಆರು ಹೃದಯ ರಕ್ತ ಚಲನೆಗೆ ಅಡೆತಡೆಗಳು :

       ಗಂಟಲು,ಬೆನ್ನುನೋವೂ ಇದೆ. ಹೃದಯ ರಕ್ತಚಲನೆಗೆ ಕುಂಭರಾಶಿ ಕಾರಕರಾಶಿ. ಕುಂಭ ರಾಶ್ಯಾಧಿಪತಿ ಶನಿಯು ಕುಂಭರಾಶಿಯಲ್ಲಿ ಸ್ಥಿತನಾದರೂ ಸಹ ವಕ್ರಿ. ರಾಹು ದೃಷ್ಟಿ ಪಡೆಯದಿದ್ದಾನೆ. ಶನಿಯ ದೃಷ್ಟಿಯು  ಸಿಂಹ ರಾಶಿ ಮತ್ತು ಸಿಂಹಾಧಿಪತಿ ಸೂರ್ಯನ ಮೇಲೆ.ಇದರಿಂದ ಬೆನ್ನು ನೋವು ಬಂದಿದೆ.ಗಂಟಲು ನೋವು ಬರಲು ಕಾರಣ ಗಂಟಲು ಸ್ಥಾನ ಕಾಲ ಪುರುಷ ರಾಶಿ ಮಂಡಲದಲ್ಲಿ ಮಿಥುನ ರಾಶಿ ಯಾಗುತ್ತದೆ. ಅಲ್ಲಿ ಕುಜ ಮತ್ತು ರಾಹು ಸ್ಥಿತರಾಗಿ ಇರುವುದರಿಂದ ಗಂಟಲು ವ್ಯಾದಿ ಬಂದಿದೆ.