ಮನೆ ಆರೋಗ್ಯ 5 ರೂ ಡಾಕ್ಟರ್‌ ಶಂಕರೇಗೌಡರಿಗೆ ಹಾರ್ಟ್‌ ಸರ್ಜರಿ ಯಶಸ್ವಿ

5 ರೂ ಡಾಕ್ಟರ್‌ ಶಂಕರೇಗೌಡರಿಗೆ ಹಾರ್ಟ್‌ ಸರ್ಜರಿ ಯಶಸ್ವಿ

0

ಬೆಂಗಳೂರು(Bengaluru) :  5 ರೂ ಡಾಕ್ಟರ್‌ ಎಂದೇ ಖ್ಯಾತಿಯಾಗಿರುವ ಮಂಡ್ಯದ ಶಂಕರೇಗೌಡರಿಗೆ ಇಂದು ಓಪನ್‌ ಹಾರ್ಟ್‌ ಸರ್ಜರಿಯು ಯಶಸ್ವಿಯಾಗಿ ನಡೆದಿದೆ.

ನಗರದ ಪೋರ್ಟೀಸ್‌ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ 8 ಗಂಟೆಗೆ ನುರಿತ ವೈದ್ಯರ ತಂಡ ಸರ್ಜರಿ ಮಾಡಲಾಗಿದೆ. ಸದ್ಯ ಚಿಕಿತ್ಸೆಗೆ ಸ್ಪಂದಿಸಿ ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಶಂಕರೇಗೌಡರಿಗೆ ಕಳೆದ ತಿಂಗಳು ಲಘುವಾಗಿ ಹೃದಯಾಘಾತವಾಗಿತ್ತು,  ಕೂಡಲೇ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಿ, ಬ್ಲಾಕ್‌ ಆಗಿದ್ದ  ಹೃದಯದ ಮೂರು ರಕ್ತ ನಾಳಗಳಿಗೆ ಸ್ಟಂಟ್‌ ಅಳವಡಿಸಲಾಗಿದ್ದು. ಮೇ 30 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದರು.  ಮುಂದಿನ ದಿನಗಳಲ್ಲಿ ಬೈಪಾಸ್‌ ಸರ್ಜರಿಗೆ ಒಳಗಾಗುವಂತೆ ವೈದ್ಯರು ಸಲಹೆ ನೀಡಿದ್ದರಿಂದ ಸರ್ಜರಿ ಮಾಡಿಸಿಕೊಂಡಿದ್ದಾರೆ.