ಮನೆ ರಾಜ್ಯ ಮಳೆ ಅವಾಂತರ: ಅಗತ್ಯ ಕಾರ್ಯಾಚರಣೆಗೆ ಎನ್’ಡಿಆರ್’ಎಫ್ ತಂಡ ನಿಯೋಜನೆ- ಸಿಎಂ ಬೊಮ್ಮಾಯಿ

ಮಳೆ ಅವಾಂತರ: ಅಗತ್ಯ ಕಾರ್ಯಾಚರಣೆಗೆ ಎನ್’ಡಿಆರ್’ಎಫ್ ತಂಡ ನಿಯೋಜನೆ- ಸಿಎಂ ಬೊಮ್ಮಾಯಿ

0

ಬೆಂಗಳೂರು(Bengaluru): ನಗರದಲ್ಲಿ ಭಾನುವಾರ ಸಂಜೆ ಬಳಿಕ ಸುರಿದ ಭಾರೀ ಮಳೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಅವಾಂತರಗಳು ನಡೆದಿದ್ದು, ಅಗತ್ಯ ಕಾರ್ಯಾಚರಣೆಗೆ ಎರಡು ಎನ್‌ಡಿಆರ್‌ಎಫ್‌ ತಂಡ ನಿಯೋಜನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದಲ್ಲಿ ಸೋಮವಾರ ಮಾತನಾಡಿದ ಅವರು, ಮಳೆ ಹಾನಿಯ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರ ಜೊತೆಗೂ ಮಾತನಾಡಿದ್ದೇನೆ. ನಗರದ ಹಲವು ಕಡೆಗಳಲ್ಲಿ ರಸ್ತೆಯಲ್ಲಿ ನಿಂತಿರುವ ನೀರು ತೆರವುಗೊಳಿಸುವ ಕೆಲಸ ನಡೆಯುತ್ತಿದೆ. 30 ಮಂದಿಯನ್ನು ಒಳಗೊಂಡ ಎರಡು ತಂಡಗಳನ್ನು ಮಹದೇವಪುರ ಹಾಗೂ ಬೊಮ್ಮನಹಳ್ಳಿಗೆ ಕಲುಹಿಸಿಕೊಡಲಾಗಿದೆ ಎಂದರು.

ಕಾವೇರಿ ನೀರು ನಿರ್ವಹಣೆ bwssb ಟಿ ಕೆ ಹಳ್ಳಿ ಯೂನಿಟ್‌ಗೆ ಹೆಚ್ಚು ನೀಡು ಬಂದು ತೊಂದರೆ ಆಗಿದೆ. ಈ ಬಗ್ಗೆ ಬೆಳಗ್ಗೆ ಗೊತ್ತಾಗಿದೆ. ಅಲ್ಲಿಗೆ ಭೇಟಿ ನೀಡುತ್ತೇನೆ ಈಗಾಗಲೇ bwssb ಇಂಜಿನಿಯರ್‌ ಹಾಗೂ ಅಧಿಕಾರಿಗಳನ್ನು ಕಳಿಸಲಾಗಿದೆ ಎಂದು ತಿಳಿಸಿದರು.
ಯಂತ್ರೋಪಕರಣ ಮೂಲಕ ನೀರು ತೆರವು ಕಾರ್ಯಾಚರಣೆ ಆರಂಭಗೊಂಡಿದ್ದು, ಸಾಯಕಾಂಲ ನಿಯಂತ್ರಣಕ್ಕೆ ಬರಲಿದೆ ಎಂದು ಹೇಳಿದರು. ಟಿಕೆ ಹಳ್ಳಿ ಯೂನಿಟ್‌ಗೆ ನೀರು ನುಗ್ಗಿರುವ ಪರಿಣಾಮ ಬೆಂಗಳೂರಿಗೆ ಎರಡು ದಿನಗಳ ಕಾಲ ನೀರು ಪೂರೈಕೆಗೂ ಸಮಸ್ಯೆ ಆಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಆದಷ್ಟು ಬೇಗ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಗಳು ನಡೆಯುತ್ತಿದೆ ಎಂದರು.