ಬೆಂಗಳೂರು (Bengaluru): ರಾಜ್ಯದಲ್ಲಿ ಇಂದು ಭಾರಿ ಮಳೆಯಾಗಲಿದೆ. ಕರಾವಳಿ ಭಾಗದಲ್ಲಿ ಹೆಚ್ಚು ಮಳೆ ಆಗಲಿದ್ದು, ಕಡಲಿಗೆ ಮೀನುಗಾರರು ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ.
ಬೆಂಗಳೂರಿನಲ್ಲಿ ಇಂದು ಮುಂಜಾನೆಯಿಂದಲೇ ಧಾರಾಕಾರ ಮಳೆ ಸುರಿಯುತ್ತಿದೆ. ತಡರಾತ್ರಿಯಿಂದಲೇ ಶುರುವಾದ ಮಳೆ ಬೆಳಿಗ್ಗೆವರೆಗೂ ಮಳೆ ಸುರಿದಿದೆ. ಸತತ ಮೂರು ಗಂಟೆಗಳಿಂದ ನಿರಂತರ ಮಳೆ ಸುರಿದಿದೆ. ಶಿವಾಜಿನಗರ, ವಿದ್ಯಾರಣ್ಯಪುರ, ಮೆಜೆಸ್ಟಿಕ್, ಯಶವಂತಪುರ, ರಾಜಾಜಿನಗರ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ.
ಇಂದಿನಿಂದ ಆಗಸ್ಟ್ 31ರವರೆಗೂ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗುವ ಮುನ್ಸೂಚನೆಗಳಿವೆ. ಕರಾವಳಿ ಭಾಗದಲ್ಲಿ ಹೆಚ್ಚು ಮಳೆ ಆಗಲಿದೆ.
ರಾಜಧಾನಿ ಬೆಂಗಳೂರಿನಲ್ಲಿಂದು ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಉಳಿದಂತೆ ಮಂಗಳೂರಿನಲ್ಲಿ 28-24, ಶಿವಮೊಗ್ಗದಲ್ಲಿ 28-21, ಬೆಳಗಾವಿಯಲ್ಲಿ 27-20, ಮೈಸೂರಿನಲ್ಲಿ 27-20, ಮಂಡ್ಯದಲ್ಲಿ 28-21, ಕೊಡಗಿನಲ್ಲಿ 23-18, ರಾಮನಗರದಲ್ಲಿ 28-21, ಹಾಸನದಲ್ಲಿ 26-19, ಚಾಮರಾಜನಗರದಲ್ಲಿ 27-21, ಚಿಕ್ಕಬಳ್ಳಾಪುರದಲ್ಲಿ 27-19, ಕೋಲಾರದಲ್ಲಿ 28-21, ತುಮಕೂರಿನಲ್ಲಿ 27-20, ಉಡುಪಿಯಲ್ಲಿ 28-24, ಚಿಕ್ಕಮಗಳೂರಿನಲ್ಲಿ 25-18, ದಾವಣಗೆರೆಯಲ್ಲಿ 29-21, ಚಿತ್ರದುರ್ಗದಲ್ಲಿ 28-20, ಹಾವೇರಿಯಲ್ಲಿ 29-21, ಬಳ್ಳಾರಿಯಲ್ಲಿ 31-23, ಗದಗದಲ್ಲಿ 29-21, ಕೊಪ್ಪಳದಲ್ಲಿ 30-22, ರಾಯಚೂರಿನಲ್ಲಿ 31-23, ವಿಜಯಪುರದಲ್ಲಿ 31-22, ಬೀದರ್ ನಲ್ಲಿ 29-21, ಕಲಬುರಗಿಯಲ್ಲಿ 31-23, ಬಾಗಲಕೋಟೆಯಲ್ಲಿ 32-22 ಡಿಗ್ರಿ ಸೆಲ್ಸಿಯಸ್ ಇರಲಿದೆ.