ಮನೆ ರಾಜ್ಯ ಬೆಂಗಳೂರಿನಲ್ಲಿ ಧಾರಾಕಾರ ಮಳೆ, 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ..

ಬೆಂಗಳೂರಿನಲ್ಲಿ ಧಾರಾಕಾರ ಮಳೆ, 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ..

0

ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ. ನೆನ್ನೆ (ಗುರುವಾರ) ಸಂಜೆ ಶುರುವಾದ ಮಳೆ ಶುಕ್ರವಾರವೂ ನಿಂತಿಲ್ಲ. ಈ ವಾರಾಂತ್ಯದಲ್ಲಿ ಮಳೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ವಿಜಯನಗರದಲ್ಲಿ ಕೂಡ ಮಳೆಯಾಗಲಿದೆ.

ಯಡ್ರಾಮಿ, ಕೆಂಭಾವಿ, ಕಕ್ಕೇರಿ, ಗುಬ್ಬಿ, ಯಲಹಂಕ, ಸಿದ್ದಾಪುರ, ಮುದಗಲ್, ಕೆರೂರು, ಕಾರ್ಕಳ, ಹುಣಸಗಿ, ಆಲಮಟ್ಟಿ, ಚಿಂತಾಮಣಿ, ಸಿಂದಗಿ, ಮಧುಗಿರಿ, ಜೇವರ್ಗಿ, ಬಿಳಗಿ, ಭಾಲ್ಕಿ, ಬೆಂಗಳೂರು ಕೆಐಎಎಲ್​, ವಿಜಯಪುರ, ಥೊಂಡೇಭಾವಿ, ಸೈದಾಪುರ, ರಬಕವಿ, ಮದ್ದೂರು, ಕೋಲಾಪುರ, ಕುಷ್ಟಗಿ, ಇಳಕಲ್, ಹುನಗುಂದ, ಹುಮ್ನಾಬಾದ್, ಗೋಪಾಲನಗರ, ಕ್ಯಾಸಲ್​ರಾಕ್, ​ಬೆಳ್ತಂಗಡಿಯಲ್ಲಿ ಭಾರಿ ಮಳೆಯಾಗಿದೆ.

ಆನವಟ್ಟಿ, ಝಲ್ಕಿ, ನಾರಾಯಣಪುರ, ಮಾಗಡಿ, ಎಂಎಂ ಹಿಲ್ಸ್​, ಕೂಡಲಸಂಗಮ, ಹೊಸಕೋಟೆ, ಗಾಣಗಾಪುರ, ಧರ್ಮಸ್ಥಳ, ಔರಾದ್, ತಾಳಿಕೋಟೆ, ಟಿಜಿಹಳ್ಳಿ, ಶಾಹಪುರ, ಮೂಡುಬಿದಿರೆ, ಸಿರಾ, ಶೋರಾಪುರ, ಮುದ್ದೇಬಿಹಾಳ, ಮಂಕಿ, ಕೊಟ್ಟಿಗೆಹಾರ, ಕಿಬ್ಬನಹಳ್ಳಿ, ಹಾವೇರಿ, ಹೆಸರಘಟ್ಟ, ಹಾವೇರಿ, ಬನವಾಸಿ, ಚಿಕ್ಕಬಳ್ಳಾಪುರ, ದೇವರಹಿಪ್ಪರಗಿ, ಅಂಕೋಲಾದಲ್ಲಿ ಮಳೆಯಾಗಿದೆ.