ಮನೆ ಹವಮಾನ ಕರ್ನಾಟಕ ಸೇರಿದಂತೆ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

ಕರ್ನಾಟಕ ಸೇರಿದಂತೆ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

0

ಬೆಂಗಳೂರು: ಮುಂದಿನ 24 ಗಂಟೆಗಳಲ್ಲಿ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

Join Our Whatsapp Group

ಜೂನ್ 29ರವರೆಗೂ ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್,ರಾಜಸ್ಥಾನ, ಛತ್ತೀಸ್ ​ಗಢ, ಒಡಿಶಾ, ಕೇರಳ, ಮೇಘಾಲಯ, ಪಶ್ಚಿಮ ಬಂಗಾಳ, ಜಾರ್ಖಂಡ್, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲಪ್ರದೇಶ, ಉತ್ತರಾಖಂಡ, ಹರ್ಯಾಣ, ಉತ್ತರ ಪ್ರದೇಶ, ದೆಹಲಿ,ಅರುಣಾಚಲಪ್ರದೇಶ, ಕರ್ನಾಟಕ, ಅಸ್ಸಾಂನಲ್ಲಿ ಭಾರಿ ಮಳೆಯಾಗಲಿದೆ.

ಮಧ್ಯಪ್ರದೇಶದ ಮೂರು ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ನೀಡಲಾಗಿದ್ದು, ರಾಜಸ್ಥಾನ, ಮಹಾರಾಷ್ಟ್ರ, ಕೇರಳ, ಮೇಘಾಲಯ, ಒಡಿಶಾ, ಛತ್ತೀಸ್‌ ಗಢ ಮತ್ತು ಅಸ್ಸಾಂನ ಹಲವು ಜಿಲ್ಲೆಗಳಲ್ಲಿ ‘ಹಳದಿ’ ಮತ್ತು ‘ಆರೆಂಜ್’ ಅಲರ್ಟ್‌ ಗಳನ್ನು ನೀಡಲಾಗಿದೆ.

ಪೂರ್ವ ಮತ್ತು ಈಶಾನ್ಯ ಭಾರತ ಜೂನ್ 26 ರಂದು ಒಡಿಶಾದಲ್ಲಿ ಭಾರಿ ಮಳೆಯಾಗಲಿದೆ, ಜೂನ್ 28 ಮತ್ತು ಜೂನ್ 29 ರಂದು ಅಸ್ಸಾಂ ಮತ್ತು ಮೇಘಾಲಯದಲ್ಲಿ ಮಳೆಯಾಗಲಿದ್ದು, ಜೂನ್ 29 ರಂದು ಅರುಣಾಚಲ ಪ್ರದೇಶದಲ್ಲಿ ಮಳೆಯಾಗಲಿದೆ ಎನ್ನುವ ಮಾಹಿತಿಯನ್ನು ನೀಡಿದೆ.

ವಾಯುವ್ಯ ಭಾರತ ಜೂನ್ 28 ರಂದು ಪೂರ್ವ ರಾಜಸ್ಥಾನದ ಮೇಲೆ ಅತಿ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ. ಜೂನ್ 26 ರಂದು ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಬೀಳಲಿದೆ.

ಮಧ್ಯ ಭಾರತ ಮುಂದಿನ 5 ದಿನಗಳಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ವಿದರ್ಭದಲ್ಲಿ ಗುಡುಗು ಸಹಿತ ವ್ಯಾಪಕ ಮಳೆ ಸುರಿಯುವ ಸಾಧ್ಯತೆ ಇದೆ.

ದಕ್ಷಿಣ ಭಾರತ ಮುಂದಿನ 5 ದಿನಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಜೂನ್ 27 ರಂದು ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗಲಿದೆ. ಜೂನ್ 29 ರವರೆಗೆ ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ಪಶ್ಚಿಮ ಭಾರತ ಜೂನ್ 26 ರಂದು ಮಹಾರಾಷ್ಟ್ರ ಮತ್ತು ಗೋವಾದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಮತ್ತೊಂದೆಡೆ, ಸೌರಾಷ್ಟ್ರ ಮತ್ತು ಕಚ್ ಸೇರಿದಂತೆ ಗುಜರಾತ್‌ ನ ಕೆಲವು ಭಾಗಗಳಲ್ಲಿ ಜೂನ್ 29 ರವರೆಗೆ ಲಘು ಅಥವಾ ಸಾಧಾರಣ ಮಳೆಯಾಗಲಿದೆ.

ಹಿಂದಿನ ಲೇಖನಬೈಕ್ ಕಳ್ಳತನ ಮಾಡುತ್ತಿದ್ದ 16 ವರ್ಷದ ಇಬ್ಬರು ಬಾಲಕರ ಬಂಧನ
ಮುಂದಿನ ಲೇಖನರಾಕ್ ವ್ಯಾಲಿ ರೆಸಾರ್ಟ್‌ ನಲ್ಲಿ ವೇಶ್ಯಾವಾಟಿಕೆ ದಂಧೆ: 14 ಜನರ ಬಂಧನ, 6 ಯುವತಿಯರ ರಕ್ಷಣೆ