ಕಠ್ಮಂಡು : ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್‌ನಲ್ಲಿ ತೀವ್ರ ಹಿಮಪಾತವಾದ ಕಾರಣ ಟಿಬೆಟಿಯನ್ ಇಳಿಜಾರಿನ ಶಿಬಿರಗಳಲ್ಲಿ ಸುಮಾರು ಒಂದು ಸಾವಿರ ಪರ್ವತಾರೋಹಿಗಳು ಸಿಲುಕಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.
ಪರ್ವತ ಪ್ರದೇಶವನ್ನು ತಲುಪುವ ಹಾದಿಯೂ ಹಿಮದಿಂದ ಮುಚ್ಚಿದ್ದು, ತೆರವಿಗೆ ನೂರಾರು ಸ್ಥಳೀಯರು ಮತ್ತು ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಈಗಾಗಲೇ ಹಲವು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ.
ಹತ್ತಿರದ ಕುಡಾಂಗ್ ಪಟ್ಟಣದಲ್ಲಿ ಸುಮಾರು 350 ಮಂದಿಯನ್ನು ಇಲ್ಲಿಯವರೆಗೆ ರಕ್ಷಿಸಲಾಗಿದೆ ಮತ್ತು ಸುರಕ್ಷಿತ ಸ್ಥಳಕ್ಕೆ ತರಲಾಗಿದೆ. ಟಿಬೆಟ್‌ನ ಬ್ಲೂಸ್ಕೈ ತಂಡದ ಬೆಂಬಲದೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆ ಎವರೆಸ್ಟ್ ಪರ್ವತಾರೋಹಣಕ್ಕೆ ಟಿಕೆಟ್ ಕಾಯ್ದಿರಿಸುವಿಕೆಯನ್ನೂ ಸ್ಥಗಿತಗೊಳಿಸಲಾಗಿದೆ.














