ತಿರುವನಂತಪುರಂ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿದ್ದ ಹೆಲಿಕಾಪ್ಟರ್ ಕೇರಳದಲ್ಲಿ ಲ್ಯಾಂಡಿಂಗ್ ಪ್ಯಾಡ್ನಲ್ಲಿ ಸಿಲುಕಿರುವ ಘಟನೆ ವರದಿಯಾಗಿದೆ. ಅವರು ಶಬರಿಮಲೆಗೆ ಭೇಟಿ ನೀಡುವ ವೇಳೆ ಹೆಲಿಕಾಪ್ಟರ್ ಹೊಸದಾಗಿ ಕಾಂಕ್ರೀಟ್ ಮಾಡಲಾಗಿದ್ದ, ಲ್ಯಾಂಡಿಂಗ್ ಪ್ಯಾಡ್ ಮೇಲೆ ಇಳಿಯಿತು. ಬಳಿಕ ಹೆಲಿಕಾಪ್ಟರ್‌ನ ಒಂದು ಭಾಗ ಡಾಂಬರಿನಲ್ಲಿ ಸಿಲುಕಿಕೊಂಡಿತ್ತು.
ರಾಷ್ಟ್ರಪತಿ ಮುರ್ಮು ರಸ್ತೆ ಮೂಲಕ ಶಬರಿಮಲೆಯ ತಪ್ಪಲಿನಲ್ಲಿರುವ ಪಂಪಾಗೆ ತೆರಳಿದ ನಂತರ, ಹಲವಾರು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾರತೀಯ ವಾಯುಪಡೆಯ ಎಂಐ -17 ಹೆಲಿಕಾಪ್ಟರ್‌ನ ಚಕ್ರಗಳನ್ನು ತಳ್ಳುತ್ತಿರುವುದು ಕಂಡುಬಂದಿತ್ತು.
ಮೊದಲು ಪಂಬಾ ಬಳಿಯ ನೀಲಕ್ಕಲ್‌ನಲ್ಲಿ ಇಳಿಯಲು ಯೋಜಿಸಲಾಗಿತ್ತು, ಆದರೆ ಕೆಟ್ಟ ಹವಾಮಾನದಿಂದಾಗಿ ಅದನ್ನು ಪ್ರಮದಮ್‌ಗೆ ಬದಲಾಯಿಸಲಾಯಿತು. ಕಾಂಕ್ರೀಟ್ ಸಂಪೂರ್ಣವಾಗಿ ಗಟ್ಟಿಯಾಗಿರಲಿಲ್ಲ ಆದ್ದರಿಂದ ಹೆಲಿಕಾಪ್ಟರ್ ಇಳಿಯುವಾಗ ಅದರ ಭಾರವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.















