ನವದೆಹಲಿ: ಗ್ಯಾಂಗ್‌ಸ್ಟರ್ ಕೊಲೆ ಪ್ರಕರಣದಲ್ಲಿ ನೆರವಾಗಿದ್ದ ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಅವರನ್ನು ಮಂಗಳವಾರ ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಗ್ಯಾಂಗ್‌ಸ್ಟರ್ ಕೊಲೆ ಆರೋಪಿಯಾಗಿದ್ದ ದಿವ್ಯಾ ಅವರಿಗೆ ಜೂನ್‌ನಲ್ಲಿ ಜಾಮೀನು ಮಂಜೂರಾಗಿತ್ತು. ಐದು ಜನರಿದ್ದ ಗುಂಪೊಂದು ಮಂಗಳವಾರ ರಾತ್ರಿ ದಿವ್ಯಾ ಅವರನ್ನು ಹೋಟೆಲ್ ಒಂದಕ್ಕೆ ಕರೆದೊಯ್ದು ತಲೆಗೆ ಗುಂಡು ಹೊಡೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ಘಟನೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಅಭಿಜಿತ್, ಯುವತಿ ಮತ್ತು ಇನ್ನೊಬ್ಬ ವ್ಯಕ್ತಿ ಜನವರಿ 2 ರಂದು (ಮಂಗಳವಾರ) ಮುಂಜಾನೆ 4 ಗಂಟೆಗೆ ಹೋಟೆಲ್‌ಗೆ ಆಗಮಿಸಿ ಕೊಠಡಿಯೊಂದಕ್ಕೆ ಹೋಗುತ್ತಿರುವ ದೃಶ್ಯವನ್ನು ತೋರಿಸುತ್ತದೆ. ನಂತರ ರಾತ್ರಿ ಅಭಿಜಿತ್ ಮತ್ತು ಇತರರು ದಿವ್ಯಾಳ ದೇಹವನ್ನು ಎಳೆದುಕೊಂಡು ಹೋಗುವುದು ಕೂಡಾ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೃತ್ಯದ ನಂತರ ಮೃತ ದೇಹವನ್ನು ಐಷಾರಾಮಿ ಕಾರಿನಲ್ಲಿರಿಸಿ ನಾಶಪಡಿಸುವ ಪ್ರಯತ್ನದಲ್ಲಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.