ಮನೆ ಜ್ಯೋತಿಷ್ಯ ರಕ್ತಸ್ರಾವದ ಪಾರ್ಶ್ವವಾಯು

ರಕ್ತಸ್ರಾವದ ಪಾರ್ಶ್ವವಾಯು

0

      ನಾವು ಹಾರ್ಟ್‌ ಅಟ್ಯಾಕ್ ಬಗ್ಗೆ ತಿಳಿದಿದ್ದೇವೆ ಆದರೆ ಮಿದುಳಿನಲ್ಲಿ ರಕ್ತಸ್ರಾವದ ಬಗ್ಗೆ ನಮಗೆ ತಿಳುವಳಿಕೆ ಕಡಿಮೆ. ಈ ರೀತಿ ಬೈನ್‌ಸ್ಟೋಕಿಗೆ ತುತ್ತಾದ ವ್ಯಕ್ತಿಗೆ ಶೀಘ್ರದಲ್ಲಿ ಅಂದರೆ 3 ಗಂಟೆಗಳ ಚಿಕಿತ್ಸೆ ನೀಡಬೇಕು. ಇಲ್ಲದಿದ್ದರೆ ಬದುಕುಳಿಯುವುದೇ ಕಷ್ಟ ಅಥವಾ ಜೀವಂತ ಶವವಾಗಿ ಹಾಸಿಗೆಯಲ್ಲಿ ಇರಬೇಕಾಗುತ್ತದೆ. ಆದ್ದರಿಂದ ಈ ರಕ್ತಸ್ರಾವದ ಬಗ್ಗೆ ತಿಳಿಯಲು ಪ್ರಯತ್ನಪಡಬೇಕು.

Join Our Whatsapp Group

      ಈ ಪಾರ್ಶ್ವವಾಯು ವ್ಯಾಧಿಯಿಂದ ಜಗತ್ತಿನಲ್ಲಿ ಪ್ರತಿ 6 ಸೆಕೆಂಡ್‌ ಗೆ ಒಬ್ಬ ವ್ಯಕ್ತಿ ಮರಣಿಸಿತ್ತಾನೆ. ಮನುಷ್ಯರಲ್ಲಿ ಪ್ರತಿ 6 ಮಂದಿಯಲ್ಲಿ ಒಬ್ಬರಿಗೆ ಈ ವ್ಯಾಧಿ ಬರುವ ಸಾಧ್ಯತೆ ಇದೆ. ಮೂರನೇ ಒಂದು ಭಾಗದ  ಜನರು ಈ ವ್ಯಾಧಿಯಿಂದ ಮರಣಿಸುತ್ತಾರೆ. ಅಮೆರಿಕಾ ದೇಶದಲ್ಲಿಯೇ ಪ್ರತಿವರ್ಷ 1,00,000 ಜನು ಮರಣಿಸುತ್ತಿದ್ದಾರೆ. ಅರ್ಬುದವ್ಯಾಧಿ (ಕ್ಯಾನ್ಸರ್) ಗಿಂತ ಇದು ಹೆಚ್ಚು ಭಯಾನಕ ಕ್ಯಾನ್ಸರ್ ವ್ಯಾಧಿ ಬಂದ ರೋಗಿಯು ಕೆಲವು ವರ್ಷಗಳ ಕಾಲವಾದರೂ ಬದುಕುತ್ತಾನೆ, ಆದರೆ ಈ ವ್ಯಾಧಿ ಕೆಲವು ಗಂಟೆಗಳು ಮಾತ್ರ.

 ಪಾರ್ಶ್ವವಾಯು ಎಂದರೇನು?

        ನಮ್ಮ ಮಿದುಳಿನಲ್ಲಿ ಸುಮಾರು 10,000 ಶತಕೋಟಿ ನರತಂತುಗಳಿದ್ದು ಇವು ನಿರಂತರವಾಗಿ ವಿದ್ಯುತ್ ಪ್ರಕ್ರಿಯೆಯಿಂದ ಕೂಡಿರುತ್ತದೆ. ಈ ಮಿದುಳು ದೇಹದ ಎಲ್ಲಾ ಅಂಗಗಳ ಚಲನೆಯನ್ನು ಯಂತ್ರಿಸುತ್ತದೆ. ಈ ರೀತಿ ಕೆಲಸ ಮಾಡಲು ಅವುಗಳಿಗೆ ನಿರಂತರವಾಗಿ ಆಮ್ಲಜನಕ ಪೂರೈಕೆ ಅತ್ಯಂತ ಅವಶ್ಯಕ ಒಬ್ಬ ಮನುಷ್ಯನ ಮಿದುಳು ಕೆಲಸ ಮಾಡಲು ಅವರು ತೆಗೆದುಕೊಳ್ಳುವ ಒಟ್ಟು ಆಮ್ಲಜನಕದಲ್ಲಿ ಸುಮಾರು ರೇಕಡ 40ರಷ್ಟು ಆಮ್ಲಜನಕವನ್ನು ಈ ಮಿದುಳೇ ಉಪಯೋಗಿಸುತ್ತದೆ. ಈ ಅಗತ್ಯವನ್ನು ಇವು ರಕ್ತನಾಳಗಳ ಮೂಲಕ ನಿರಂತರವಾಗಿ ಪೂರೈಸುತ್ತದೆ.

    ಮಿದುಳು ಮನುಷ್ಯನಿಗೆ ಬಹಳ ಪ್ರಮುಖವಾದ ಅಂಗ, ಮಿದುಳಿಗೆ ರಕ್ತಸಂಚಾರವು ಕೇವಲ 30 ಸೆಕೆಂಡುಗಳ ಕಾಲ ನಿಂತರೆ ಅವನ ಮಿದುಳು ನಿಷ್ಕ್ರಿಯವಾಗುತ್ತದೆ ಜೀವಂತ ಶವವಾಗುತ್ತಾದೆ ಅಥವಾ ಜೀವವೇ ಹೋಗಬಹುದು ಅಥವಾ ಕೋಮಾ ಸ್ಥಿತಿಗೆ ಹೋಗಬಹುದು ಈ ಮಿದುಳಿನಲ್ಲಿ ದೇಹದ  ಪ್ರತಿ ಅಂಗಗಳನ್ನು ನಿಯಂತ್ರಿಸುವ ಹಲವು ಜೀವಕೋಶಗಳ ಸಮೂಹ ಕೊಠಡಿ) ಗಳಿವೆ ಉದಾಹರಣೆ ಪ್ರ: ಅಂಬಳ ಮತ್ತು ಎಡಭಾಗಗಳು, ನೆನಪಿನ ಕೋಶ, ಜ್ಞಾನೇಂದ್ರಿಯಗಳು, (ಕಣ್ಣು, ಕಿವಿ, ಮೂಗ ಮಾಯಿ, ಸ್ಪರ್ಶ) ಕೈ, ಕಾಲುಗಳ ಅಂಗಗಳು ಆದರೆ ಮಿದುಳಿನ ಯಾವುದೇ ಈ ಒಂದು ಭಾಗದ ಜೀವ ಕೋಶದ ಸಮೂಹದಲ್ಲಿ ಮಾತ್ರ ರಕ್ತ ಸಂಚಾರಕ್ಕೆ ಅಡ್ಡಿಯಾದರೆ, ಮಿದುಳಿನ ಆ ಕೋಶಕ್ಕೆ ಆಮ್ಲಜನಕ ಕೊರತೆ ಅದರಿಂದ ರಸಾಯನಿಕ ದ್ರವ್ಯಗಳು ಸ್ರವಿಸತೊಡಗುತ್ತದೆ. ಈ ಸ್ರಾವದಿಂದ ಚೈನ್ ರಿಕ್ಷನ್ (ಇಸಿಎy ಕ್ಯಾಸ್ಕೆಡ್) ಆಗುತ್ತಾ ಹೋಗುತ್ತದೆ.

      ಆಗ ಕೋಶಕ್ಕೆ ಸಂಬಂಧಪಟ್ಟ ದೇಹದ ಅಂಗವು 6 ಗಂಟೆಗಳಕಾಲ ಸುಪ್ತಾವಸ್ಥೆಯಲ್ಲಿರುತ್ತವೆ. (ಅರೆಪ್ರಜ್ಞೆ) ಈ ಭಾಗಕ್ಕೆ ರಕ್ತ ಪುನರ್ ಸಂಚಾರವಾದರೆ ಮಾತ್ರ ನರಕೋಶಗಳು ಚೇತರಿಸುವ ಸಂಭವ ಇರುತ್ತದೆ. ಇಲ್ಲದಿದ್ದರೆ ದೇಹದ ಅಂಗ ನಿಷ್ಕ್ರಿಯವಾಗುತ್ತದೆ. ಮಿದುಳಿನ ಎಡಭಾಗದ ಕೋಶಗಳ ಅಡ್ಡಿಯಾದರೆ ದೇಹದ ಬಲಭಾಗ, ಮಿದುಳಿನ ಬಲಭಾಗದ ಕೋಶಗಳಿಗೆ ಅಡ್ಡಿಯಾದರೆ ದೆಹದ ವಿಡ ಭಾಗಗಳ ಪೂರ್ಣಾಂಗಗಳು ( ಅಂದರೆ ಎಡ/ಬಲದ ಕೈ, ಕಾಲು, ಬಾಯಿ, ಕಣ್ಣು, ಕಿವಿ, ಸೊಂಟ, ಕುತ್ತಿಗೆ) ಆಧಾರ ತಪ್ಪುತ್ತದೆ.

ಒಂದು ಪಕ್ಷ ಬಲಭಾಗದ ಮಿದುಳಿಗೆ ಅಡ್ಡಿಯಾದರೆ, ದೇಹದ ಎಡಭಾಗದಲ್ಲಿರುವ ಹೃದಯ ಕ್ರಿಯೆಗೆ ಅಡ್ಡಿಯಾಗಿ ಕೆಲವೇ ನಿಮಿಷದಲ್ಲಿ ಸಾವು ಖಚಿತ. ಅದೇ ರೀತಿ ಕೇವಲ ಕೈಕಾಲುಗಳ ನರಕೋಶಗಳಿಗೆ ಮಾತ್ರ ಅಡ್ಡಿಯಾದರೆ ದೇಹದ ಕೈಕಾಲುಗಳು ಸೊಟ್ಟಗಾಗುತ್ತದೆ. ಧ್ವನಿ ಪೆಟ್ಟಿಗೆ ನರಕೋಶಗಳಿಗೆ ಮಾತ್ರ ಅಡ್ಡಿಯಾದರೆ ಅವರಿಗೆ ಮಾತನಾಡಲಾಗದೆ ಬಾಯಿ ಸೊಟ್ಟಗಾಗುತ್ತದೆ. ಅಂಗಗಳಿಗೆ ಅಡ್ಡಿಯಾಗಿ, ಪಾರ್ಶ್ವವಾಯು (ಲಕ್ವ) (ಸ್ಟೋಕ್) ಉಂಟಾಗುತ್ತದೆ.

 ಪಾರ್ಶ್ವವಾಯುವಿನಲ್ಲಿ ಮೂರು ವಿಧಗಳು

1. ಬೈನ್‌ಹೆಮರೇಜ್ – ಮಿದುಳಿನಲ್ಲಿ ರಕ್ತನಾಳ ಒಡೆದರೆ ಅಥವಾ ರಕ್ತನಾಳದಲ್ಲಿ ಗುಳ್ಳೆಯಾಗಿ (ಟ್ಯೂಮರ್ ) ಒಡದರೆ ರಕ್ತ ಸ್ರಾವವಾಗುತ್ತದೆ. ಇದು ಹೆಚ್ಚಾಗಿ ಶೇಕಡ 20ರಷ್ಟು ಅಧಿಕ ರಕ್ತದೊತ್ತಡ ಇರುವವರಿಗೆ ಬರುತ್ತದೆ.

2. ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವುದು. (Ischomic stroke) -ಶೇಕಡ 80 ರಷ್ಟು

3. ರಕ್ತ ಸಂಚಾರದಲ್ಲಿ ತಾತ್ಕಾಲಿಕ ಆಡಚಣೆ (TIA Meni stroke) ತಲೆಗೆ ಪೆಟ್ಟು ಬಿದ್ದಾಗ ಬೇರೆ ಕಡೆ ಹೆಪ್ಪುಗಟ್ಟಿದ ರಕ್ತದ ತುಣಕು ರಕ್ತನಾಳದಲ್ಲಿ ಸಿಕ್ಕಿಹಾಕಿಕೊಂಡು ರಕ್ತಸಂಚಾರಕ್ಕೆ ತಡೆ.

 ಲಕ್ಷಣಗಳು

 ಹಿಡಿತದಲ್ಲಿರುವ ಅಪಾಯಗಳು

* ಕೈಕಾಲು ಮುಖದ ಭಾಗದಲ್ಲಿ ಆಕಸ್ಮಿಕವಾಗಿ ಶಕ್ತಿಪಾತ ಎನಿಸಿ ಯಾವುದೇ ಚಲನವಲನ ಇಲ್ಲದಂತೆ ಆಗುವುದು, ಈ ಲಕ್ಷಣಗಳು ದೇಹದ ಒಂದೇ ಪಾರ್ಶ್ವದಲ್ಲಿ ಆಗುತ್ತದೆ.

* ಆಕಸ್ಮಿಕವಾಗಿ = ಮಾತನಾಡಲಾಗದೆ  ನಾಲಿಗೆ ಹೊರಳಿದಂತೆ ಆಗುತ್ತದೆ. ಮತಿಭ್ರಮಣೆ, ಯೋಚಿಸುವ, ಆರಿಯುವ ಶಕ್ತಿ ಕಳೆದುಕೊಳ್ಳುತ್ತಾರೆ.

      ★* ಯಾವುದೇ ಕಾರಣವಿಲ್ಲದೆ ತಲೆನೋವು ವಿಪರೀತವಾಗಿ ಬರುವುದು.

* ★ಆಕಸ್ಮಿಕವಾಗಿ ಎರಡು ಕಣ್ಣುಗಳು ಸ್ಪಷ್ಟವಾಗಿ ಕಾಣಿಸದಂತಾಗುವುದು ಅಥವಾ ಎದುರಿನ ವಸ್ತು ಎರಡೆರಡರಂತೆ ಕಾಣುವುದು.

* ★ಈ ಲಕ್ಷಣಗಳು ಕೆಲವು ನಿಮಿಷಗಳಲ್ಲಿ ಬಂದಾಗ ಆಸ್ಟ್ರಿನ್ ಒಂದು ಮಾತ್ರೆಯನ್ನು ನುಂಗಿ ತಕ್ಷಣ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವುದು ಉತ್ತಮ.

* ★ಅಧಿಕ ಬಾಯಾರಿಕೆ, ಮೇಲಿಂದ ಮೇಲೆ ಮೂತ್ರ ವಿಸರ್ಜನೆ, ತಲೆಸುತ್ತು, ಗಾಬರಿ ಆಗುವುದು, ಫಂಗಲ್ ಇನ್ ಫೆಕ್ಷನ್ ಆಗುತ್ತಿದ್ದರೆ ಅಪಾಯ.

★* ಶರೀರದಲ್ಲಿನ ಎಲ್ಲಾ ರಕ್ತನಾಳಗಳಲ್ಲೂ ಒಳಗಿನ ಗೋಡೆಗಳಲ್ಲಿ ಜಿಡ್ಡಿನಾಂಶವು (ಕೊಲೆಸ್ಟ್ರಾಲ್) ಪೊರೆ ಕಟ್ಟಿ ಗಟ್ಟಿಯಾಗುತ್ತಾ ಹೋಗುತ್ತದೆ. ಹೀಗೆ ರಕ್ತನಾಳಗಳಲ್ಲಿ ಜಿಡ್ಡಿನಾಂಶವು ರಕ್ತ ಸಂಚಾರಕ್ಕೆ ಅಡ್ಡಿ ಆಗುತ್ತದೆ.

* ★ರಕ್ತನಾಳಗಳ ಒಳಗೋಡೆಯಲ್ಲಿ ಮೇದಸ್ಸು ಜಿಡ್ಡು ಪದಾರ್ಥಗಳು ಹೆಚ್ಚುಹೆಚ್ಚು ಸಂಗ್ರಹ ವಾಗುತ್ತಾ, ಈ ರಕ್ತನಾಳವು ಮುಚ್ಚಿ ಹೋಗುವುದು. ಈ ರೀತಿ ರಕ್ತನಾಳ ರಕ್ತ ಸಂಚರಿಸದೆ ಒಂದು ಕಡೆ ನಿಂತು ಹೆಪ್ಪುಗಟ್ಟುತ್ತದೆ. ಈ ರೀತಿ ರಕ್ತ ಹೆಪ್ಪುಗಟ್ಟಿದಾಗ ರಕ್ತವು ನಿಂತ ಕಡೆ ಹಿಂದಿನಿಂದ ಬಂದ ರಕ್ತದ ಒತ್ತಡದಿಂದ ಆ ಭಾಗದ ರಕ್ತನಾಳ ಉಬ್ಬಿ ರಕ್ತನಾಳ ಒಡೆದು ರಕ್ತಸ್ರಾವವಾಗುತ್ತದೆ.

★* ರಕ್ತನಾಳಗಳು ಬಲಹೀನ ಸ್ಥಳದಲ್ಲಿಯೂ ಸಹ ರಕ್ತನಾಳ ಅಧಿಕ ಒತ್ತಡದಿಂದ ಒಡೆದು ರಕ್ತಸ್ರಾವ ಸಂಭವವಿದೆ. ಈ ರೀತಿಯ ರಕ್ತಸ್ರಾವ ಮಿದುಳಿನಲ್ಲಿ ಚಿಮ್ಮಿದರೆ ಶೀಘ್ರ ಮರಣ.

* ★ಸಾಮಾನ್ಯವಾಗಿ ಹೃದಯ ವ್ಯಾಧಿಗ್ರಸ್ತರು ರಕ್ತವು ರಕ್ತನಾಳಗಳಲ್ಲಿ ತಡೆಯಿಲ್ಲದೆ ಸಂಚರಿಸಲು ರಕ್ತ ತೆಳುವಾಗಲು ಕೆಲವು ಔಷಧಗಳನ್ನು (ಆಸ್ಪಿರನ್) ಹೆಚ್ಚು ತೆಗೆದುಕೊಳ್ಳುವುದರಿಂದ ಬಲಹೀನ ರಕ್ತನಾಳ ಒಡೆಯುವ ಸಂಭವವಿದೆ. ಅವರು ಎಚ್ಚರಿಕೆಯಿಂದ ಇರುವುದು ಅವಶ್ಯಕ.