1. ಒಂದು ಟೀ ಚಮಚದಷ್ಟು ಹಸಿಶುಂಠಿರಸ, ಎರಡು ಟೀ ಚಮಚದಷ್ಟು ನಿಂಬೆಯ ರಸ, ಎರಡು ಟೀ ಚಮಚದಷ್ಟು ಪುದೀನಾರಸ, ಹಾಗೂ ಅದರ ನಾಲ್ಕರಷ್ಟು ಜೇನುತುಪ್ಪ ಬೆರೆಸಿ, ದಿನವೂ ಮೂರು ಬಾರಿ ಸೇವಿಸುವುದರಿಂದ ಮೂಲವ್ಯಾಧಿ ನಿವಾರಣೆ ಆಗುವುದು.
2. ಹುಣಸೆ ಚಿಗುರು ಮತ್ತು ಕಾಳು ಮೆಣಸು ಪುಡಿಯೊಂದಿಗೆ ಮಾವಿನ ಕಾಯಿಯನ್ನು ತಿನ್ನುವುದರಿಂದ ಮೂಲವ್ಯಾಧಿ ನಿರ್ಮೂಲ ಆಗುವುದು.
3. ಬಾಳೆಕಾಯಿಯ ತಿರುಳನ್ನು ಬೇಯಿಸಿ, ತಿನ್ನುತ್ತಿದ್ದರೆ ಮೂಲವ್ಯಾಧಿಯಂತಹ ದಾರುಣ ರೋಗದಿಂದ ಪಾರಾಗಬಹುದು.
4. ಮೂಲವ್ಯಾಧಿಯಿಂದ ನರಳುತ್ತಿರುವವರಿಗೆ ಪರಂಗಿ ಹಣ್ಣಿನ ಸೇವನೆಯು ತುಂಬಾ ಪರಿಣಾಮಕಾರಿ.
5. ಅರಿಶಿನ ಕೊನೆಯನ್ನು ನುಣ್ಣಗೆ ಅರೆದು, ಮಜ್ಜಿಗೆಯಲ್ಲಿ ಬೆರೆಸಿ ಒಂದೆರಡು ವಾರ ಸೇವಿಸುವುದರಿಂದಲೂ ಮೂಲವ್ಯಾಧಿಯಿಂದ ಪಾರಾಗಬಹುದು.
6. ಈರುಳ್ಳಿ ಹೂವನ್ನು ತಿನ್ನುತ್ತಿದ್ದರೆ ಮೂಲವ್ಯಾಧಿ ದೂರ ಆಗುವುದು.
7. ಕೋಸಿನ ಎಲೆಗಳನ್ನು ಚೆನ್ನಾಗಿ ತೊಳೆದು, ಸಣ್ಣಗೆ ಕತ್ತರಿಸಿ ಬೇಯಿಸಿ ಮಿತವಾಗಿ ಉಪಯೋಗಿಸಿದರೆ ಮೂಲವ್ಯಾಧಿ ಇಲ್ಲದಂತಾಗುವುದು.
8. ಒಂದು ಚಮಚ ಕರಿ ಎಳ್ಳಿಗೆ ಒಂದು ಚಮಚ ಕಲ್ಲು ಸಕ್ಕರೆ ಪುಡಿ ಸೇರಿಸಿ, ಮೇಕೆ ಹಾಲಿನೊಂದಿಗೆ ಸೇವಿಸುತ್ತಿದ್ದರೆ ಮೂಲವ್ಯಾದಿ ದೂರ ಆಗುವುದು.
9. ಪ್ರತಿದಿನ ಬಾಳೆಹಣ್ಣಿನೊಂದಿಗೆ ಒಂದು ಏಲಕ್ಕಿಯನ್ನು ಅಗಿದು ತಿನ್ನುತ್ತಿದ್ದರೆ ಮೂಲವ್ಯಾಧಿ ದೂರ ಆಗುವುದು.
10. ಕರಿಬೇವಿನ ಸೊಪ್ಪಿನ ಎಳೆಯ ಚಿಗುರನ್ನು ಜೇನುತುಪ್ಪದಲ್ಲಿ ಅದ್ದಿ ತಿನ್ನುತ್ತಿದ್ದರೆ ಮೂಲವ್ಯಾಧಿ ದೂರ ಆಗುವುದು.
11. ಖರ್ಜೂರವನ್ನು ದಿನವು ಸೇವಿಸುತ್ತಿದ್ದರೆ ಮೂಲವ್ಯಾಧಿ ಸುಳಿವಿಲ್ಲದಂತಾಗುವುದು.
12. ಜೇನುತುಪ್ಪದೊಂದಿಗೆ ನೇರಳೆ ಹಣ್ಣಿನ ಶರಬತ್ತನ್ನು ಸೇವಿಸುತ್ತಿದ್ದರೆ ಮೂಲವ್ಯಾಧಿ ಶೀಘ್ರವಾಗಿ ಕಡಿಮೆ ಆಗುತ್ತಾ ಬರುವುದು.
13. ಹಸಿ ಮೂಲಂಗಿಯನ್ನು ಯಥೇಚ್ಚೆವಾಗಿ ಸೇವಿಸುವುದರಿಂದ ಮೂಲವ್ಯಾಧಿಯಿಂದ ಬಿಡುಗಡೆ ಹೊಂದುವುದು.
14. ಹಾಗಲಕಾಯಿಯ ಸಿಹಿ ಗೊಜ್ಜನ್ನು ಕ್ರಮವಾಗಿ ಸೇವಿಸುತ್ತಿದ್ದರೆ ಮೂಲವ್ಯಾಧಿ ಹೇಳ ಹೆಸರಿಲ್ಲದಂತಾಗುವುದು.
15. ಕೆಸವಿನ ಗೆಡ್ಡೆಯನ್ನು ತಿನ್ನುವುದರಿಂದಲೂ ಮೂಲವ್ಯಾದಿ ದೂರ ಆಗುವುದು.
16. ದಮ್ಮುರೋಗ ಇರುವವರಿಗೂ ಮೇಲ್ಕಂಡ ವಿಧಾನ ಸುಲಭ ಚಿಕಿತ್ಸೆ.
17. ಬೇವಿನ ಹಣ್ಣಿನ ಬೀಜಗಳನ್ನು ತೊಳೆದು,ಒಣಗಿಸಿ ಪುಡಿಪುಡಿ ಪ್ರತಿದಿನವೂ ಪ್ರಾತಃಕಾಲ ಅರ್ಥ ಟೀ ಸ್ಪೂನಿನಷ್ಟು ಜೇನುತುಪ್ಪದೊಂದಿಗೆ ಸೇವಿಸುತ್ತಿದ್ದರೆ ಮೂಲವ್ಯಾಧಿ ಇರದು.
18. ಬೇವಿನ ಹೂವುಗಳಿಗೆ ಕಲುಸಕ್ಕರೆ ಬೆರೆಸಿ, ಜಾಡಿಯಲ್ಲಿಟ್ಟುಕೊಂಡು, ಒಂದು ತಿಂಗಳ ಕಾಲ ಒಣಗಿಸಿದಾಗ ಆಗುವ ಜಾಮ್ ಅನ್ನು ತದಿನವೂ ತಿನ್ನುವ ದಿನ ಒಂದೊಂದು ಟೀ ಸ್ಪೂನಿನಷ್ಟು ಬರಿ ಹೊಟ್ಟೆಯಲ್ಲಿಯೇ ಉಪಯೋಗಿಸುತ್ತಿದ್ದಂತೆ ಮೂಲವ್ಯಾಧಿಯಿಂದ ನಿವಾರಣೆ ಪಡೆಯಬಹುದು.
19. ಆಳಲಕಾಯಿ ಚೂರ್ಣವನ್ನು ಹಳೆಯ ಬೆಲ್ಲದೊಂದಿಗೆ ಪ್ರತಿದಿನವೂ ಊಟ ಮಾಡುವ ಮೊದಲು ಉಪಯೋಗಿಸುತ್ತಿದ್ದರೆ ಮೂಲವ್ಯಾಧಿ ನಿವಾರಣೆ ಆಗುವುದು.