ಚರ್ಮ, ಕೂದಲು ಮತ್ತು ಉಗುರುಗಳು ಒಟ್ಟಾರೆ ಆರೋಗ್ಯದ ಪ್ರತಿಬಿಂಬವಾಗಿವೆ. ಜಡ ಜೀವನಶೈಲಿ, ಸರಿಯಾದ ಪೋಷಣೆಯ ಕೊರತೆ ಮತ್ತು ಅನಿಯಮಿತ ನಿದ್ರೆ ಇತ್ಯಾದಿಗಳಿಂದಾಗಿ ನಿಮ್ಮ ಕೂದಲು ಮತ್ತು ಉಗುರುಗಳಿಗೆ ಅಗತ್ಯವಿರುವ ಪೋಷಕಾಂಶಗಳು ಸಿಗದೆ ಇರಬಹುದು. ಈ ಪೋಷಕಾಂಶಗಳ ಕೊರತೆ ಮತ್ತು ರಕ್ತದಲ್ಲಿನ ಆಕ್ಸಿಡೀಕರಣದಿಂದಾಗಿ ವಿಶೇಷವಾಗಿ ನಮ್ಮ ಉಗುರುಗಳು ಬೆಳೆಯಲು ಮತ್ತು ಬಲಗೊಳ್ಳಲು ಅಗತ್ಯವಾದ ಪ್ರೋಟೀನುಗಳ ಉತ್ಪಾದನೆಯ ಕೊರತೆಯಾಗುತ್ತದೆ.
ಉಗುರುಗಳು ಬೆಳೆಯಲು ದೇಹಕ್ಕೆ, ಅದರಲ್ಲೂ ಕೈ, ಕಾಲು, ಅಂಗೈಗಳ ಕಡೆಗೆ ಉತ್ತಮ ರಕ್ತ ಪರಿಚಲನೆ ಮತ್ತು ರಕ್ತದ ಹರಿವು ಅಗತ್ಯವಿದೆ. ಹಾಗಾಗಿ ನಿಮ್ಮ ದೇಹಕ್ಕೆ ರಕ್ತದ ಹರಿವನ್ನು ಸಕ್ರಿಯಗೊಳಿಸಲು ಯೋಗಕ್ಕಿಂತ ಉತ್ತಮವಾದ ಮಾರ್ಗ ಯಾವುದಿದೆ ಅಲ್ಲವೇ, ಇಲ್ಲಿ ಗ್ರ್ಯಾಂಡ್ ಮಾಸ್ಟರ್ ಅಕ್ಷರ್ ಅವರು 5 ಕ್ರಿಯಾತ್ಮಕ ಯೋಗಾಸನಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ಧಾರ್ಮಿಕವಾಗಿ ಅನುಸರಿಸಿದರೆ, ಕೂದಲು ಮತ್ತು ಉಗುರುಗಳು ಬಲವಾಗಲು ನಿಮಗೆ ಸಹಾಯವಾಗುತ್ತದೆ.
ಮಾರ್ಜರಿ ಆಸನ
ಊರ್ಧ್ವ ಮುಖಿ ಮಾರ್ಜರಿ ಆಸನ
*ನಿಮ್ಮ ಮೊಣಕಾಲುಗಳ ಮೇಲೆ ನಿಂತುಕೊಳ್ಳಿ. ನಂತರ ಚಿತ್ರದಲ್ಲಿ ತೋರಿಸಿರುವಂತೆ ಅಂಗೈಗಳನ್ನು ಭುಜಕ್ಕೆ ನೇರವಾಗಿ ನೆಲದ ಮೇಲೆ ಇರಿಸಿ. ಈಗ ಮೊಣಕಾಲುಗಳು ಸೊಂಟದ ಕೆಳಗೆ ಇರುವಂತೆ ನೋಡಿಕೊಳ್ಳಿ.
*ಉಸಿರನ್ನು ಒಳಗೆ ತೆಗೆದುಕೊಂಡು, ಮೇಲೆ ನೋಡಲು ನಿಮ್ಮ ಬೆನ್ನುಮೂಳೆಯನ್ನು ಬಾಗಿಸಿ.
ಅಧೋಮುಖ ಮಾರ್ಜರಿ ಆಸನ
*ಉಸಿರನ್ನು ಬಿಡುತ್ತಾ, ನಿಮ್ಮ ಬೆನ್ನುಮೂಳೆಯನ್ನು ಬಾಗಿಸಿ, ಬೆನ್ನು ನೋಡಲು ಕಮಾನು ರೂಪದಲ್ಲಿರಬೇಕು. ನಿಮ್ಮ ಕುತ್ತಿಗೆಯನ್ನು ಕೆಳಗೆ ಹಾಕಿ, ನಂತರ ನಿಮ್ಮ ಗಲ್ಲವನ್ನು ನಿಮ್ಮ ಎದೆಯ ಒಳಗೆ ಹಾಕಿ.
*ಈಗ ನಿಮ್ಮ ಹೊಕ್ಕುಳ ಪ್ರದೇಶದ ಕಡೆಗೆ ನಿಮ್ಮ ನೋಟವನ್ನು ಕೇಂದ್ರೀಕರಿಸಿ.
ಪಾದಹಸ್ತಾಸನ
ಈ ಭಂಗಿ ರೂಪಿಸಲು ಹೀಗೆ ಮಾಡಿ…
*ಸಮಸ್ಥಿತಿಯಲ್ಲಿ ನಿಂತು ಪ್ರಾರಂಭಿಸಿ (ಸಮಸ್ಥಿತಿ ಸಂಸ್ಕೃತ ಪದವಾಗಿದ್ದು, ಇಲ್ಲಿ ‘ಸಮ’ ಅಂದರೆ ಒಂದೇ ಅಥವಾ ಸಮಾನ ಅಥವಾ ನೇರವಾಗಿ ಎಂದರ್ಥ. ಸ್ಥಿತಿ ಅಂದರೆ ಸ್ಥಾಪಿಸುವುದು ಅಥವಾ ನಿಲ್ಲುವುದು)
*ಈಗ ಉಸಿರನ್ನು ಬಿಡುತ್ತಾ, ನಿಮ್ಮ ಮೇಲಿನ ದೇಹವನ್ನು ಸೊಂಟದಿಂದ ಕೆಳಕ್ಕೆ ಬಾಗಿಸಿ ಮತ್ತು ನಿಮ್ಮ ಮೂಗನ್ನು ನಿಮ್ಮ ಮೊಣಕಾಲುಗಳಿಗೆ ಸ್ಪರ್ಶಿಸಿ
*ಅಂಗೈಗಳನ್ನು ಪಾದದ ಎರಡೂ ಬದಿಗಳಲ್ಲಿ ಇರಿಸಿ
*ನೀವಿನ್ನು ಈಗ ಅಭ್ಯಾಸ ಮಾಡುತ್ತಿದ್ದರೆ, ನೀವು ನಿಮ್ಮ ಮೊಣಕಾಲುಗಳನ್ನು ಸ್ವಲ್ಪ ಬಗ್ಗಿಸಬಹುದು, ನಿಮ್ಮ ಹೊಟ್ಟೆಯನ್ನು ನಿಮ್ಮ ತೊಡೆಗಳ ಮೇಲೆ ವಿಶ್ರಾಂತಿ ಪಡೆಯಲು ಬಿಡಬಹುದು. ನಿಮ್ಮ ಬೆರಳುಗಳನ್ನು ಅಥವಾ ಅಂಗೈಗಳನ್ನು ಕೆಳಗೆ ಇರಿಸಿ.
*ಅಭ್ಯಾಸ ಮಾಡುತ್ತಾ, ನಿಧಾನವಾಗಿ ನಿಮ್ಮ ಮೊಣಕಾಲುಗಳನ್ನು ನೇರಗೊಳಿಸಿ ಮತ್ತು ನಿಮ್ಮ ಎದೆಯನ್ನು ನಿಮ್ಮ ತೊಡೆಗಳಿಗೆ ಸ್ಪರ್ಶಿಸಲು ಪ್ರಯತ್ನಿಸಿ.
ಭುಜಂಗಾಸನ (ಕೋಬ್ರಾ ಭಂಗಿ)
ಈ ಭಂಗಿ ರೂಪಿಸಲು ಹೀಗೆ ಮಾಡಿ…
* ನಿಮ್ಮ ಹೊಟ್ಟೆಯ ಮೇಲೆ ಮಲಗಿ, ನಿಮ್ಮ ಅಂಗೈಗಳನ್ನು ನಿಮ್ಮ ಭುಜದ ಕೆಳಗೆ ಇಟ್ಟುಕೊಂಡು ನಿಮ್ಮ ಪಾದಗಳನ್ನು ಒಟ್ಟಿಗೆ ಸೇರಿಸಿ, ನಿಮ್ಮ ಕಾಲ್ಬೆರಳುಗಳನ್ನು ನೆಲದ ಮೇಲೆ ಇರಿಸಿ.
*ನೀವು ಆಳವಾಗಿ ಉಸಿರಾಡುವಾಗ ಉಸಿರನ್ನು ಒಳಗೆ ತೆಗೆದುಕೊಳ್ಳಿ. ನಿಮ್ಮ ತಲೆಯನ್ನು, ಭುಜಗಳನ್ನು ಮತ್ತು ಮುಂಡವನ್ನು ಮೇಲಕ್ಕೆ ಎತ್ತುವಾಗ ನಿಮ್ಮ ಉಸಿರನ್ನು ಹಿಡಿದುಕೊಳ್ಳಿ.
*30 ಡಿಗ್ರಿ ಕೋನದಲ್ಲಿ ದೇಹ ಮೇಲಕ್ಕೆತ್ತಿ, ಆದರೆ ನಿಮ್ಮ ಹೊಕ್ಕುಳನ್ನು ನೆಲದ ಮೇಲೆ ತಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಿ.
*ಈಗ ನಿಮ್ಮ ತಲೆಯನ್ನು ಸ್ವಲ್ಪ ಮೇಲಕ್ಕೆತ್ತಿ, ನಿಮ್ಮ ಭುಜಗಳನ್ನು ವಿಸ್ತರಿಸಿ.
*ನಂತರ ನಿಮ್ಮ ಮುಂಡವನ್ನು ನಿಧಾನವಾಗಿ ಕಡಿಮೆ ಮಾಡಿ, ನಂತರ ಉಸಿರನ್ನು ಬಿಡಿ.
ಬಾಲಾಸನ
ಈ ಭಂಗಿ ರೂಪಿಸಲು ಹೀಗೆ ಮಾಡಿ…
*ಚಾಪೆಯ ಮೇಲೆ ಮಂಡಿಯೂರಿ , ನಿಮ್ಮ ಹಿಮ್ಮಡಿ ಮೇಲೆ ಕುಳಿತುಕೊಳ್ಳಿ.
*ಉಸಿರನ್ನು ಒಳಗೆ ತೆಗೆದುಕೊಳ್ಳಿ, ನಂತರ ಮೇಲೆ ಕೈಗಳನ್ನು ಮೇಲಕ್ಕೆತ್ತಿ.
*ಉಸಿರನ್ನು ಬಿಡುತ್ತಾ, ನಿಮ್ಮ ಮೇಲಿನ ದೇಹವನ್ನು ಮುಂದಕ್ಕೆ ಬಾಗಿಸಿ.
*ನಿಮ್ಮ ಹಣೆಯನ್ನು ನೆಲದ ಮೇಲೆ ಇರಿಸಿ
*ಸೊಂಟವು ಹಿಮ್ಮಡಿ ಮೇಲೆ ವಿಶ್ರಾಂತಿ ಪಡೆಯಲಿ.
*ನಿಮ್ಮ ಬೆನ್ನು ಗೂನಾಗದಂತೆ ನೋಡಿಕೊಳ್ಳಿ.
ಚತುರಂಗ ದಂಡಾಸನ
ಈ ಭಂಗಿ ರೂಪಿಸಲು ಹೀಗೆ ಮಾಡಿ…
*ಇದನ್ನು ಪ್ಲಾಂಕ್ ಭಂಗಿಯೊಂದಿಗೆ ಪ್ರಾರಂಭಿಸಿ.
*ನೀವು ಉಸಿರು ಹೊರಕ್ಕೆ ಬಿಡುವಾಗ, ನಿಮ್ಮ ದೇಹವನ್ನು ಅರ್ಧ ಪುಶ್-ಅಪ್ ಮಾಡಿ ಕೆಳಕ್ಕೆ ಇಳಿಸಿ, ಮೇಲಿನ ತೋಳುಗಳು ನೆಲಕ್ಕೆ ಸಮಾನಾಂತರವಾಗಿರಲಿ.
* ನಿಮ್ಮ ಮೊಣಕೈಗಳು ನಿಮ್ಮ ಪಕ್ಕೆಲುಬುಗಳ ಬದಿಗಳನ್ನು ಮುಟ್ಟಬೇಕು. ಮೊಣಕೈಗಳು 90-ಡಿಗ್ರಿ ಕೋನದಲ್ಲಿರಲು ನೀವು ನಿಮ್ಮನ್ನು ತಗ್ಗಿಸಬೇಕು.
*ನಿಮ್ಮ ಭುಜಗಳನ್ನು ಒಳಗೆ ಎಳೆಯಬೇಕು
*ನಿಮ್ಮ ಮಣಿಕಟ್ಟುಗಳು ಮತ್ತು ಮೊಣಕೈಗಳು ನೆಲಕ್ಕೆ ಲಂಬವಾಗಿರಬೇಕು ಮತ್ತು ನಿಮ್ಮ ಭುಜಗಳು ನಿಮ್ಮ ದೇಹಕ್ಕೆ ಅನುಗುಣವಾಗಿರಬೇಕು.
*ಈ ಆಸನ ಮಾಡುವಾಗ 10-15 ಸೆಕೆಂಡುಗಳ ಕಾಲ ಅದೇ ಭಂಗಿಯಲ್ಲಿರಬೇಕು.
ಈ ಸಮಸ್ಯೆಗೆ ಪರಿಹಾರ ಸಿಗಲು ಹಲವು ದುಬಾರಿ ಚಿಕಿತ್ಸೆಗಳಿದ್ದರೂ, ಮೊದಲು ನಿಮ್ಮ ದೇಹದಲ್ಲಿ ರಕ್ತ ಪರಿಚಲನೆಯನ್ನು ಉತ್ತೇಜಿಸುವುದು ಮುಖ್ಯ. ಆರೋಗ್ಯಕರ ಆಹಾರ ಮತ್ತು ವ್ಯಾಯಾಮದ ಸಂಯೋಜನೆಯ ಮೂಲಕ ಇದನ್ನು ಮಾಡಬಹುದು. ಆರೋಗ್ಯಕರ ಆಹಾರವೆಂದರೆ ವಿಟಮಿನ್ ಎ, ವಿಟಮಿನ್ ಬಿ 2, ವಿಟಮಿನ್ ಡಿ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಅಯೋಡಿನ್. ಈ ಪೋಷಕಾಂಶಗಳು ಮತ್ತು ವಿಟಮಿನ್ಗಳ ಸಂಯೋಜನೆಯು ಪೋಷಕಾಂಶಗಳ ಸರಿಯಾದ ಹೀರಿಕೊಳ್ಳುವಿಕೆಯನ್ನು ಖಾತರಿಪಡಿಸುತ್ತದೆ. ಹಾಗೆಯೇ ಕಾಲಜನ್ ಮತ್ತು ಕೆರಾಟಿನ್ ರಚನೆಯು ಉಗುರುಗಳ ಆರೋಗ್ಯಕರ ಸಂಯೋಜನೆಗೆ ಕಾರಣವಾಗುತ್ತದೆ.