ಮನೆ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಲಭ್ಯವಿರುವ 500 ರೂಪಾಯಿಯೊಳಗಿನ ಟಾಪ್​ 5 ಇಯರ್​ ಫೋನ್​ಗಳಿವು

ಮಾರುಕಟ್ಟೆಯಲ್ಲಿ ಲಭ್ಯವಿರುವ 500 ರೂಪಾಯಿಯೊಳಗಿನ ಟಾಪ್​ 5 ಇಯರ್​ ಫೋನ್​ಗಳಿವು

0

ಇಂದಿನ ದಿನದಲ್ಲಿ ಸ್ಮಾರ್ಟ್​​ ಫೋನ್ ​ಗಳು ಹೇಗೆ ಅಗತ್ಯವಾಗಿದೆಯೋ ಅದೇ ರೀತಿ ಇಯರ್​ಬಡ್ಸ್​, ಇಯರ್​ ಫೋನ್​ಗಳು ಸಹ ಬಹಳಷ್ಟು ಬೇಡಿಕೆಯಲ್ಲಿದೆ. ಇದನ್ನೇ ಗಮನಿಸಿದ ಕೆಲ ಕಂಪನಿಗಳು ದಿನಕಳೆದಂತೆ ಮಾರುಕಟ್ಟೆಗೆ ಹೊಸ ಹೊಸ ಇಯರ್​ ಬಡ್ಸ್ ​ಗಳನ್ನು ಬಿಡುಗಡೆ ಮಾಡುತ್ತಿದೆ.

Join Our Whatsapp Group

boAt BassHeads 103: ಈ ಇಯರ್‌ ಫೋನ್‌ ಗಳು 10mm ಡ್ರೈವರ್‌ ಗಳೊಂದಿಗೆ ಬರುತ್ತವೆ. ಇದರ ಹೊರತಾಗಿ, ನಾಯ್ಸ್​ ಕ್ಯಾನ್ಸಲೇಶನ್ ಫೀಚರ್ ಮತ್ತು ಹೆಚ್ಚುವರಿ ಬಾಸ್ ಸಹ ಇಲ್ಲಿ ಲಭ್ಯವಿದೆ. ಗ್ರಾಹಕರು ಕಂಪನಿಯ ಸೈಟ್‌ ನಿಂದ ರೂ.499 ಕ್ಕೆ ಖರೀದಿಸಬಹುದು.

JBL C50HI: ಇದು ಸಹ ಮೈಕ್‌ ನೊಂದಿಗೆ ವೈರ್ಡ್​ ಇಯರ್ ​ಫೋನ್ ಆಗಿದೆ. ಗ್ರಾಹಕರು ಈ ಇಯರ್‌ ಫೋನ್ ಅನ್ನು ಅಮೆಜಾನ್ ನಿಂದ ರೂ.498 ಕ್ಕೆ ಖರೀದಿಸಬಹುದು. ಇದರಲ್ಲಿ ಕರೆ ಮಾಡಲು ಮೈಕ್ ಕೂಡ ಲಭ್ಯ ಇದೆ.

Mi Earphones Basic: ಗ್ರಾಹಕರು ಈ ಇಯರ್‌ ಫೋನ್ ಅನ್ನು ಕಂಪನಿಯ ವೆಬ್‌ ಸೈಟ್‌ ನಿಂದ ರೂ.429 ಕ್ಕೆ ಖರೀದಿಸಬಹುದು. ಈ ಇಯರ್‌ ಫೋನ್ ಇಂಟರ್ನಲ್​ ಮೈಕ್‌ನೊಂದಿಗೆ ಬರುತ್ತದೆ. ಇದನ್ನು ಕಪ್ಪು, ನೀಲಿ ಮತ್ತು ಕೆಂಪು ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.

Realme Buds 2 Neo: ಬಳಕೆದಾರರು ಈಗ ಇದನ್ನು ಅಮೆಜಾನ್ ನಿಂದ ಕೇವಲ Rs.499 ಕ್ಕೆ ಖರೀದಿಸಬಹುದು. ಈ ಇಯರ್​ ಬಡ್ಸ್​ ಉತ್ತಮ ಫೀಚರ್ಸ್​ ಅನ್ನು ಹೊಂದಿದ್ದು ಬಳಕೆದಾರರಿಗೆ ಬಹಳಷ್ಟು ಉತ್ತಮ ಅನುಭವವನ್ನು ನೀಡಲಿದೆ.

ಈ ಇಯರ್‌ ಫೋನ್‌ ನಲ್ಲಿ ಬಳಕೆದಾರರು ಅತ್ಯುತ್ತಮವಾದ ಬಾಸ್ ಔಟ್‌ ಪುಟ್ ಅನ್ನು ಪಡೆಯುತ್ತಾರೆ. ಈ ಬಡ್ಸ್ ​ಗಳು 11.2mm ಡೈನಾಮಿಕ್ ಡ್ರೈವರ್‌ ಗಳೊಂದಿಗೆ ಬರುತ್ತವೆ.

Realme Buds: ರಿಯಲ್ ​​ಮಿ ಕಂಪನಿ ಎಂದಾಗ ಮೊದಲು ನೆನಪಾಗೋದು ಸ್ಮಾರ್ಟ್ ​​ಫೋನ್ ​ಗಳು. ಆದ್ರೆ ಈಗ ಈ ಕಂಪನಿಯಿಂದ ಗುಣಮಟ್ಟದ ಸ್ಮಾರ್ಟ್ ​​ವಾಚ್, ಹೆಡ್ ಫೋನ್​, ಇಯರ್ ​​ಬಡ್ಸ್​ಗಳು ಸಹ ಬಿಡುಗಡೆಯಾಗುತ್ತಿದೆ. ಇವುಗಳಲ್ಲಿ ರಿಯಲ್​ ಮಿ ಬಡ್ಸ್ ಸಹ ಒಂದು.

ಗ್ರಾಹಕರು ಈ ಇಯರ್‌ ಫೋನ್ ಅನ್ನು ಕಂಪನಿಯ ವೆಬ್‌ ಸೈಟ್‌ ನಿಂದ ಕೇವಲ ರೂ. 499 ಕ್ಕೆ ಖರೀದಿಸಬಹುದು. ಅದೇ ರೀತಿ ಅಮೆಜಾನ್​, ಫ್ಲಿಪ್ ​ಕಾರ್ಟ್​ ನಲ್ಲಿ ಸಹ ಇದು ಲಭ್ಯವಿದೆ.