ಈ ತಿಂಗಳು ಸಿನಿ ಪ್ರೇಮಿಗಳಿಗೆ ಹಬ್ಬವೋ ಹಬ್ಬ. ಬಹುನಿರೀಕ್ಷಿತ ಬಿಡುಗಡೆಯಾಗಲಿರುವ ಹಲವು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಮತ್ತು ಕೆಲವು ಒಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ಬಿಡುಗಡೆಯಾಗಲಿವೆ.
1. ಜವಾನ್: ಶಾರುಖ್ ಖಾನ್ ಅವರ 2023 ರ ಬಹುನಿರೀಕ್ಷಿತ ಚಿತ್ರವು ಸೆಪ್ಟೆಂಬರ್ 7 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರಮಂದಿರಗಳಿಗೆ ರಿಲೀಸ್ ಹಾಗಲು ಸಿದ್ಧವಾಗಿದೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರವನ್ನು ತಮಿಳು ನಿರ್ದೇಶಕ ಅಟ್ಲಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ, ಸನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ರಿಧಿ ಡೋಗ್ರಾ ಮತ್ತು ಸುನಿಲ್ ಗ್ರೋವರ್ ಕೂಡ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ.
2. ಜಾನೆ ಜಾನ್: ಕರೀನಾ ಕಪೂರ್ ಅಭಿನಯದ ಜಾನೆ ಜಾನ್ ಅವರ ಹುಟ್ಟುಹಬ್ಬ ಸೆಪ್ಟೆಂಬರ್ 21 ರಂದು ನೆಟ್ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. ಸುಜೋಯ್ ಘೋಷ್ ನಿರ್ದೇಶನದ. ಚಿತ್ರದಲ್ಲಿ ವಿಜಯ್ ವರ್ಮಾ ಮತ್ತು ಜೈದೀಪ್ ಅಹ್ಲಾವತ್ ಕರೀನಾಗೆ ಸಾಥ್ ನೀಡಿದ್ದಾರೆ. ಸಿನಿಮಾವು ಕೀಗೊ ಹಿಗಾಶಿನೊ ಅವರ ಡೆವೊಷನ್ ಆಫ್ ಸಸ್ಪೆಕ್ಟ್ ಎಕ್ಸ್ ಕಾದಂಬರಿಯ ರೂಪಾಂತರವಾಗಿದೆ.
3. ಸಲಾರ್: ಪ್ರಭಾಸ್ ಅಭಿನಯದ ಸಲಾರ್- ಭಾಗ 1 ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಸೆಪ್ಟೆಂಬರ್ 28 ರಂದು ಬಿಡುಗಡೆಯಾಗಲಿದೆ. ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು ನಿರ್ಮಿಸಿರುವ ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದಾರೆ. ಇದರಲ್ಲಿ ಶ್ರುತಿ ಹಾಸನ್ ಕೂಡ ನಟಿಸಿದ್ದಾರೆ.
4. ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ: ವಿಕ್ಕಿ ಕೌಶಲ್ ಮತ್ತು ಮಾನುಷಿ ಚಿಲ್ಲರ್ ಅವರ ಮುಂಬರುವ ಫ್ಯಾಮಿಲಿ ಎಂಟರ್ಟೈನರ್ ಚಿತ್ರ ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ. ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ ಈ ಚಿತ್ರವು ಸೆಪ್ಟೆಂಬರ್ 22 ರಂದು ಥಿಯೇಟರ್ಗಳಿಗೆ ಬರಲು ಸಿದ್ಧವಾಗಿದೆ.
5. ದಿ ವ್ಯಾಕ್ಸಿನ್ ವಾರ್: ವಿವೇಕ್ ಅಗ್ನಿಹೋತ್ರಿ ಅವರ ದಿ ವ್ಯಾಕ್ಸಿನ್ ವಾರ್ ಸೆಪ್ಟೆಂಬರ್ 28 ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ನಾನಾ ಪಾಟೇಕರ್, ಅನುಪಮ್ ಖೇರ್ ಮತ್ತು ಪಲ್ಲವಿ ಜೋಶಿ ಕಾಣಿಸಿಕೊಂಡಿದ್ದಾರೆ.
6. ಹಡ್ಡಿ: ನವಾಜುದ್ದೀನ್ ಸಿದ್ದಿಕಿ ನಟಿಸಿರಿವ ಹಡ್ಡಿ ಸೆಪ್ಟೆಂಬರ್ 7 ರಂದು ZEE5 ನಲ್ಲಿ ಪ್ರೀಮಿಯರ್ ಆಗಲಿದೆ. ಸಿನಿಮಾಗೆ ಅಕ್ಷತ್ ಅಜಯ್ ಶರ್ಮಾ ನಿರ್ದೇಶನವಿದೆ. ಅನುರಾಗ್ ಕಶ್ಯಪ್, ಇಲಾ ಅರುಣ್, ಮೊಹಮ್ಮದ್ ಜೀಶನ್ ಅಯೂಬ್, ಸೌರಭ್ ಸಚ್ದೇವ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದನ್ನು ಜೀ ಸ್ಟುಡಿಯೋಸ್, ಸಂಜಯ್ ಸಹಾ ಮತ್ತು ರಾಧಿಕಾ ನಂದಾ ಅವರ ಆನಂದಿತಾ ಸ್ಟುಡಿಯೋಸ್ ನಿರ್ಮಿಸಿದ್ದಾರೆ.
7. ಸುಖಿ: ಶಿಲ್ಪಾ ಶೆಟ್ಟಿ ಅಭಿನಯದ ಚಿತ್ರವು ಸೆಪ್ಟೆಂಬರ್ 22 ರಂದು ಬಿಡುಗಡೆಯಾಗಲಿದೆ. ಸೋನಾಲ್ ಜೋಶಿ ನಿರ್ದೇಶಿಸಿರುವ ಸಿನಿಮಾಕ್ಕೆ ಟಿ-ಸೀರೀಸ್ ಮತ್ತು ಅಬುಂಡಾಂಟಿಯಾ ಎಂಟರ್ ಟೈನ್ ಮೆಂಟ್ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ, ಶಿಲ್ಪಾ ಶೆಟ್ಟಿ ಜೊತೆಗೆ ಕುಶಾ ಕಪಿಲಾ, ದಿಲ್ನಾಜ್ ಇರಾನಿ, ಪಾವ್ಲೀನ್ ಗುಜ್ರಾಲ್, ಚೈತನ್ಯ ಚೌಧರಿ ಮತ್ತು ಅಮಿತ್ ಸಾಧ್ ಕೂಡ ನಟಿಸಿದ್ದಾರೆ.
8. ಫ್ರೈಡೆ ನೈಟ್ ಪ್ಲ್ಯಾನ್: ಬಾಬಿಲ್ ಖಾನ್ ನಟನೆಯ ಚಿತ್ರವು ಸೆಪ್ಟೆಂಬರ್ 1 ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ, ಜೂಹಿ ಚಾವ್ಲಾ ಬಾಬಿಲ್ನ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಅಮೃತ್ ಜಯನ್, ಆಧ್ಯ ಆನಂದ್, ಮೇಧಾ ರಾಣಾ ಮತ್ತು ನಿನಾದ್ ಕಾಮತ್ ಕೂಡ ಕಾಣಿಸಿಕೊಂಡಿದ್ದಾರೆ. ವತ್ಸಲ್ ನೀಲಕಂಠನ್ ನಿರ್ದೇಶನದ ಈ ಚಿತ್ರವನ್ನು ಎಕ್ಸೆಲ್ ಎಂಟರ್ ಟೈನ್ ಮೆಂಟ್ ನಿರ್ಮಿಸಿದೆ.
9. ಶ್ರೀ: ರಾಜ್ ಕುಮಾರ್ ರಾವ್, ಅಲಯ ಎಫ್ ಮತ್ತು ಶರದ್ ಕೇಳ್ಕರ್ ನಟಿಸಿರುವ ಶ್ರೀ ಸಿನಿಮಾನ್ನು ತುಷಾರ್ ಹಿರಾನಂದಾನಿ ನಿರ್ದೇಶನದ ಈ ಚಿತ್ರವನ್ನು ಸೆಪ್ಟೆಂಬರ್ 15, 2023 ರಂದು ಬಿಡುಗಡೆಯಾಗಲಿದೆ.