ಮನೆ ತಂತ್ರಜ್ಞಾನ ಸೆಪ್ಟಂಬರ್’ನಲ್ಲಿ ಬಿಡುಗಡೆಯಾಗುತ್ತಿರುವ ಸ್ಮಾರ್ಟ್’ಫೋನ್’ಗಳ ಪಟ್ಟಿ ಇಲ್ಲಿದೆ

ಸೆಪ್ಟಂಬರ್’ನಲ್ಲಿ ಬಿಡುಗಡೆಯಾಗುತ್ತಿರುವ ಸ್ಮಾರ್ಟ್’ಫೋನ್’ಗಳ ಪಟ್ಟಿ ಇಲ್ಲಿದೆ

0

ಬೆಂಗಳೂರು(Bengaluru): ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಮಾರುಕಟ್ಟೆಯಲ್ಲಿ ಕೂಡ ಅದಕ್ಕೆ ಪೂರಕವಾಗಿ ನೂತನ ಗ್ಯಾಜೆಟ್‌ಗಳು, ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿವೆ.

ಪ್ರಮುಖವಾಗಿ, ಆ್ಯಪಲ್, ಏಸಸ್, ಮೊಟೊರೊಲಾ, ಶಓಮಿ ಕಂಪನಿಗಳ ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ.

ಟೆಕ್ ಲೋಕದಲ್ಲಿ ಸೆಪ್ಟೆಂಬರ್ 2022ರಲ್ಲಿ ಬಿಡುಗಡೆಯಾಗುತ್ತಿರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ.

ಪೋಕೊ M5 ಸರಣಿಸೆಪ್ಟೆಂಬರ್ 5ರಂದು ಪೋಕೊ ನೂತನ ಸ್ಮಾರ್ಟ್‌ಫೋನ್ ದೇಶದಲ್ಲಿ ಬಿಡುಗಡೆಯಾಗುತ್ತಿದೆ.

ಶಓಮಿ ರೆಡ್ಮಿ 11 ಪ್ರೈಮ್ 5Gಶಓಮಿ ರೆಡ್ಮಿ ಸರಣಿಯಲ್ಲಿ ಹೊಸದಾಗಿ 11 ಪ್ರೈಮ್ ಸ್ಮಾರ್ಟ್‌ಫೋನ್ ಸೆ. 6ರಂದು ಬಿಡುಗಡೆಯಾಗಲಿದ್ದು, 5G ಸಂಪರ್ಕ ಹೊಂದಿರುತ್ತದೆ ಎಂದು ಕಂಪನಿ ಹೇಳಿದೆ.

ಆ್ಯಪಲ್ ಐಫೋನ್ 14ಐಪೋನ್ ನೂತನ ಸರಣಿ 14 ಅನ್ನು ಆ್ಯಪಲ್ ಈ ತಿಂಗಳು ಬಿಡುಗಡೆ ಮಾಡಲಿದೆ. ಸೆ. 7ರಂದು ಆ್ಯಪಲ್ ಈವೆಂಟ್ ನಡೆಯಲಿದ್ದು, ನಾಲ್ಕು ನೂತನ ಐಫೋನ್ 14 ಸರಣಿ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.

ಮೋಟೊರೊಲಾ ಮೋಟೊ ಎಡ್ಜ್ 30ಮೋಟೊರೊಲಾ ನೂತನ ಮೋಟೊ ಎಡ್ಜ್ 30 ಸರಣಿ ಸೆ. 8ರಂದು ಅನಾವರಣಗೊಳ್ಳಲಿದೆ.ಏಸಸ್ ರಾಗ್ ಫೋನ್ 6Dಹೊಸ ರಾಗ್ ಪೋನ್ 6D ಸರಣಿಯನ್ನು ಏಸಸ್ ಸೆ. 19ರಂದು ಪರಿಚಯಿಸುತ್ತಿದೆ.

ಹಿಂದಿನ ಲೇಖನಮಂಗಳೂರಿಗೆ ನಿಮ್ಮ ಭೇಟಿ ವಿಕಾಸ ದರ್ಶನಕ್ಕೋ, ವಿನಾಶ ದರ್ಶನಕ್ಕೋ ?: ಪ್ರಧಾನಿಗೆ ಸಿದ್ದರಾಮಯ್ಯ ಪ್ರಶ್ನೆ
ಮುಂದಿನ ಲೇಖನಮುರುಘಾ ಶರಣರ ಆರೋಗ್ಯ ಸ್ಥಿತಿ ಗಂಭೀರ: ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರ