ಮನೆ ರಾಜ್ಯ ದುರುದ್ದೇಶದಿಂದ ಪಾರಂಪರಿಕ ಕಟ್ಟಡ ಅಂಧ, ಕಿವುಡ ಮತ್ತು ಮೂಗ ಮಕ್ಕಳ ಶಾಲೆ ನೆಲಸಮ: ಅರವಿಂದ್ ಶರ್ಮ...

ದುರುದ್ದೇಶದಿಂದ ಪಾರಂಪರಿಕ ಕಟ್ಟಡ ಅಂಧ, ಕಿವುಡ ಮತ್ತು ಮೂಗ ಮಕ್ಕಳ ಶಾಲೆ ನೆಲಸಮ: ಅರವಿಂದ್ ಶರ್ಮ ಆಕ್ರೋಶ

0

ಮೈಸೂರು(Mysuru): ಬನ್ನಿಮಂಟಪದ ಮುಖ್ಯ ರಸ್ತೆಯಲ್ಲಿದ್ದ ಪಾರಂಪರಿಕ ಕಟ್ಟಡ ಹಾಗೂ ಅಂಧ, ಕಿವುಡ, ಮೂಗ ಮಕ್ಕಳ ಶಾಲೆಯನ್ನು ನಗರ ಪಾಲಿಕೆ ಸದಸ್ಯ ರಂಗಸ್ವಾಮಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಬಸವರಾಜು ಹುನ್ನಾರದಿಂದ ಫೆ.3 ರಂದು ಬೆಳಗ್ಗೆ 5:30 ಕ್ಕೆ ಕಟ್ಟಡ ನೆಲಸಮಗೊಳಿಸಿದ್ದು, ಅಂಗವಿಕಲರ ಹಕ್ಕುಗಳ ಅಧಿನಿಯಮ 2016 ಉಲ್ಲಂಘನೆಯಾಗಿದೆ. ಆದ್ದರಿಂದ ಈ ಕೂಡಲೇ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅರವಿಂದ ಶರ್ಮ ಒತ್ತಾಯಿಸಿದ್ದಾರೆ.

ನಿವೃತ್ತ ಶಿಕ್ಷಣಾಧಿಕಾರಿ ಎಂ ಶ್ರೀನಿವಾಸರಾವ್ ಅವರು ಹಳ್ಳದ ಕೆರಿ ಮನೆಯಲ್ಲಿ 1901 ರಿಂದ ಅಂಧ, ಕಿವುಡ, ಮೂಗ ಮಕ್ಕಳಿಗಾಗಿ ಮನೆಯಲ್ಲೇ ವಿಧ್ಯಾಭ್ಯಾಸ ನಡೆಸುತ್ತಿದ್ದುದನ್ನು ಗಮನಿಸಿದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಗರದ ಹೃದಯ ಭಾಗದಲ್ಲಿರುವ ( ಬನ್ನಿಮಂಟಪದ ಮುಖ್ಯರಸ್ತೆಯಲ್ಲಿದೆ ) 8:30 ಎಕರೆ ನೀಡಿದ್ದು ಈ ಆಸ್ತಿ ಈಗಲೂ ಕೂಡ ಕಿವುಡ ಮೂಗರ ಶಾಲೆಯ ಹೆಸರಿನಲ್ಲಿ ಇದೆ.

ಸದರಿ ಕಟ್ಟಡವನ್ನು ಅಂದಿನ ಯುವರಾಜ  ಶ್ರೀ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಬಹುದ್ದೂರು ಅವರು 15 ಪೆಭ್ರವರಿ 1935 ರಲ್ಲಿ ಕಟ್ಟಡವನ್ನು ಉದ್ಘಾಟನೆ ಮಾಡಿದ್ದರು ಎಂದು ಇತಿಹಾಸ ಹೇಳುತ್ತದೆ. ಈ ಶಾಲೆಯ ಜಾಗಕ್ಕೆ ಮಹಾತ್ಮ ಗಾಂಧಿಜಿ ಅವರು ಭೇಟಿ ಕೊಟ್ಟಿರುವ ಇತಿಹಾಸವಿದೆ.

ಈ ಕಟ್ಟಡ ಈಗ ಪಾರಂಪರಿಕ ಕಟ್ಟಡವೂ ಹೌದು. ಪ್ರಸ್ತುತ ಈ ಶಾಲೆಯಲ್ಲಿ ಕಿವುಡರು ಮೂಗರು 63 ಮಕ್ಕಳು 25 ಅಂಧ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ವಿಕಲಚೇತನ ಮತ್ತು ಹಿರಿಯ ನಾಗರೀಕ ಸಬಲೀಕರಣ ಇಲಾಖೆ ಅನುದಾನ ಬರುತ್ತಿದ್ದು  ಪ್ರಾಥಮಿಕ ಮತ್ತು ಪ್ರೌಡಶಿಕ್ಷಣ ಇಲಾಖೆ ಪಠ್ಯಕ್ರಮ ಭೋದನೆ ನಡೆಯುತ್ತಿದೆ.

2000ನೇ ಇಸವಿ ಹೆಲನ್ ಕೆಲರ್ ಟೀಚರ್ಸ್ ಟ್ರೈನಿಂಗ್ ಸೆಂಟರ್ ಶುರುವಾಗಿದ್ದು, ಅಂದಿನ ಕರ್ನಾಟಕದ ರಾಜ್ಯಪಾಲರಾಗಿದ್ದ ವಿ.ಎಸ್ ರಮಾದೇವಿ ಉದ್ಘಾಟನೆ ಮಾಡಿದ್ದು ಇಲ್ಲಿ ಈಗಲೂ ಕೂಡ 85 ರಿಂದ 90 ಜನ ತರಬೇತಿ ಪಡೆಯುತ್ತಿದ್ದಾರೆ.

1962 ಬ್ರೈನ್ ಪ್ರೆಸ್ ಶುರುವಾಗಿದ್ದು  ಇಡೀ ರಾಜ್ಯಕ್ಕೆ 1 ರಿಂದ 10 ತನಕ ಅಂಧ ಮಕ್ಕಳ ಪುಸ್ತಕ ಕೂಡ ಇಲ್ಲಿಂದಲೇ ಸರಬರಾಜು ಮಾಡುತ್ತಿರುವುದು ಇದೆ ಆವರಣದಲ್ಲಿ ಅಂಧ, ಶ್ರವಣ, ಬುದ್ದಿಮಾಂದ್ಯ ಮಕ್ಕಳಿಗೆ ಬಿ.ಎಡ್ ಕಾಲೇಜು ಕೂಡ ಸರಕಾರದಿಂದ ಅನುಮೋದೆಯಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿಚರು ಹಾಲಪ್ಪಾಚಾರ್ ಅವರಿಗೆ ಬರುವ ಈ ಇಲಾಖೆಯ ಜಾಗದಲ್ಲಿ 2 .10 ಕೋಟಿ ತಿಲಕ್ ನಗರಕ್ಕೆ ನೀರು ಸರಬರಾಜು ಮಾಡಲು ಸೂಪರ್ ಡೆಂಟ್ ಹಾಗೂ ವಾರ್ಡನ್ ಕ್ವಾಟ್ರಸ್ ನ ಜಾಗಕ್ಕಾಗಿ ರಾಜಕೀಯ ಒತ್ತಡ ಹಾಕಿ ಸಚಿವರನ್ನು ಹಾಗೂ ಶಾಸಕರಾದ ಎಲ್ ನಾಗೇಂದ್ರ ಅವರನ್ನು ಧಿಕ್ಕು ತಪ್ಪಿಸಿರುವ ನಗರ ಪಾಲಿಕೆ ಸದಸ್ಯ ರಂಗಸ್ವಾಮಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಬಸವರಾಜು ಅವರ ಕಟ್ಟಡ ನೆಲಸಮಗೊಳಿಸಲಾಗಿದೆ. ಆದ್ದರಿಂದ ಈ ಕೂಡಲೇ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ಶಾಲೆಯ ಜಾಗದಲ್ಲಿ ವಿಶೇಷ ಮಕ್ಕಳಿನ ವಿದ್ಯಾಭ್ಯಾಸಕ್ಕೆ ತೊಂದರೆ ಕೊಡುವ ಉದ್ದೇಶದಿಂದ ಈ ಕಾಮಗಾರಿ ಮಾಡಲು ಮುಂದಾಗಿದ್ದು, ಇದಕ್ಕೆ ಸಾರ್ವಜನಿಕರ ತೀವ್ರ ವಿರೋಧವಿದ್ದು, ಕಾಮಗಾರಿ ನಿಲ್ಲಿಸಲು  ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.